ಚಿಕ್ಕನಾಯಕನಹಳ್ಳಿ:

 

      ಪಟ್ಟಣದಲ್ಲಿ ನಡೆಯಬೇಕಿರುವ ಯುಜಿಡಿ, ನೀರಿನ ಟ್ಯಾಂಕ್, ಚರಂಡಿ ಹಾಗೂ ಹುಳಿಯಾರಿನ ರಸ್ತೆ ಕಾಮಗಾರಿಗಳ ಪ್ರಗತಿ ತೃಪ್ತಿದಾಯಿಕವಾಗಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.

      ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ರಕ್ಷಣಾಕಿಟ್‍ಗಳನ್ನು ವಿತರಿಸಿದ ನಂತರ ಇಲಾಖಾವಾರು ಸಂಬಂಧಿಸಿದ ಅಧಿಕಾರಿಗಳಿಂದ ಹಲವು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

       ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿರೂ. 60ಕೋಟಿ. ಬಿಡುಗಡೆಯಾಗಿ ಆರುತಿಂಗಳು ಕಳೆದರೂ ಆಮೆಗತಿಯಲ್ಲಿ ನಡೆದಸಿರುವ ಬಗ್ಗೆ ತೀವ್ರ ಅತೃಪ್ತಿವ್ಯಕ್ತಪಡಿಸಿ ಮೊದಲು ಸಂಸ್ಕರಣಾ ಪಿಟ್‍ಗಳ ನಿರ್ಮಾಣಕ್ಕಾಗಿ ಜಾಗಗಳನ್ನು ಪುರಸಭಾ ವಶಕ್ಕೆ ಪಡೆದು ಕಾಮಗಾರಿ ಅಲ್ಲಿನಿಂದಲೇ ಆರಂಭಿಸಲು ತಿಳಿಸಿದ್ದರೂ ಇನ್ನು ತಡವಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಇದಕ್ಕಾಗಿಯೇ ಪಟ್ಟಣದ ಯಾವುದೇ ರಸ್ತೆಕಾಮಗಾರಿಗೆ ಅನುದಾನ ಹಾಕದೇ ಬೇರೆಡೆಗೆ ವಿನಿಯೋಗಿಸಲಾಗಿದೆ. ಆದರೆ ನೀವು ಇನ್ನೂ ಇದರ ಬಗ್ಗೆ ಆಸಕ್ತಿಯೇ ತೆಳೆದಿಲ್ಲವೆಂದು ಮುಖ್ಯಾಧಿಕಾರಿ ಶ್ರೀನಿವಾಸ್‍ರವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಂಸ್ಕರಣಾಪಿಟ್‍ಗಳಿಗೆ ಜಾಗದ ಸಮಸ್ಯೆಗಳ ನಿವಾರಣೆಗಾಗಿ ಮಾಜಿ ಪುರಸಭಾಧ್ಯಕ್ಷ ಸಿ.ಎಂ. ರಂಗಸ್ವಾಮಿಗೆ ಸಹಕರಿಸಲು ಸೂಚಿಸಿ vಕಾಮಗಾರಿಯ ಕೆಲಸ ವೇಗಪಡೆದು ನಮ್ಮ ಅವಧಿಯಲ್ಲಿಯೇ ಮುಗಿಯುವಂತಾಗಲಿ ಎಂದರು.

      ಪಟ್ಟಣದೊಳಗೆ ಚರಂಡಿ ಕಾಮಗಾರಿಗಳು ಇನ್ನೂ ನಡೆಯದ ಬಗ್ಗೆ ಅಸಮಧಾನವ್ಯಕ್ತಪಡಿಸಿದರು. ಹೇಮಾವತಿ ನೀರಿನ ಶೇಖರಣಾ ಪ್ಲಾಂಟ್ ನಿರ್ಮಾಣದ ಕಾರ್ಯ ನಡೆದಿದೆ ಎಂದು ಮುಖ್ಯಾಧಿಕಾರಿಯವರ ವಿವರಕ್ಕೆ ಪ್ರತಿಕ್ರಯಿಸಿದ ಸಚಿವರು ಈ ಕಾಂಗಾರಿಯಲ್ಲಿ ಸೇತುವೆ ನಿರ್ಮಿಸಲು ಅವಕಾಶಕಲ್ಪಿಸಲಾಗಿದೆ. ಈ ಕಾಮಗಾರಿ ಮುಗಿಯುತ್ತಲೇ ನಿವೇಶನರಹಿತರಿಗೆ ಮನೆ ಕಟ್ಟಿಕೊಳ್ಳಲು ಸುಮಾರು 600 ರಿಂದ 800 ಮಂದಿ ಫಲಾನುಭವಿಗಳಿಗೆ ಜಾಗ ನೀಡಿ ಮನೆ ಕಟ್ಟಿಕೊಳ್ಳಲು ಶೇ. 50 ರಿಯಾಯಿತಿ ದೊರೆಯಲಿದೆ, ಮನೆ ಹೊಂದಿರದ ನಿವೇಶನರಹಿತರ  ಪಟ್ಟಿಯನ್ನು ತಯಾರಿಸಿಕೊಳ್ಳಿರೆಂದು ಪುರಸಭಾ ಸದಸ್ಯರಿಗೆ ಸೂಚಿಸಿದರು.

      ಪಟ್ಟಣದಲ್ಲಿ ಎರಡು ಟ್ಯಾಂಕ್‍ಗಳ ನಿರ್ಮಾಣ ಪ್ರಗತಿಯಲ್ಲಿದ್ದು ಇನ್ನೊಂದು ಟ್ಯಾಂಕ್ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.

 ಹುಳಿಯಾರು ಪಟ್ಟಣದ ರಸ್ತೆಕಾಮಗಾರಿ ಕುಂಟಿತ:

      ಹುಳಿಯಾರಿನ ಪಟ್ಟಣದೊಳಗಿನ ಎಲ್ಲಾ ರಸ್ತೆಗಳನ್ನು ಗುಣಮಟ್ಟದ ರಸ್ತೆಗಳನ್ನಾಗಿಸಲು ಸುಮಾರು 8 ಕೋಟರೂ. ಅನುದಾನದ ಬಳಕೆ ಏನಾಗಿದೆ ಎಂಬ ಸಚಿವರ ಪ್ರಶ್ನೆಗೆ ಅಲ್ಲಿನ ಮುಖ್ಯಾಧಿಕಾರಿ ಮಂಜುನಾಥ್ ಉತ್ತರಿಸಿಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಟೆಂಡರ್‍ದಾರರು ಜೆಲ್ಲಿಯೂ ಸೇರಿದಂತೆ ಇನ್ನಿತರ ವಸ್ತುಗಳ ದರ ಹೆಚ್ಚಾಗಿರುವ ಕಾರಣ ನೀಡಿ ಕೆಲಸ ನಿರ್ವಹಿಸುತ್ತಿಲ್ಲಾ ಎಂಬ ಉತ್ತರಕ್ಕೆ ಪ್ರತಿಕ್ರಿಯಿಸಿದ ಸಚಿವರು ಟೆಂಡರ್ ಆದ ನಂತರ ಈ ಉತ್ತರ ನೀಡುವುದು ಸಮಂಜಸವಲ್ಲ ಎಲ್ಲರೂ ಬ್ಲಾಕ್‍ಲಿಸ್ಟ್‍ಗೆ ಸೇರುತ್ತಾರೆ ಎಂದು ಖಾರವಾಗಿ ನುಡಿದು ಶೀಘ್ರ ಸ್ಥಳಪರಿಶೀಲನೆಗೆ ಹುಳಿಯಾರಿಗೆ ಬರುತ್ತೇನೆ ಎಂದರು.

(Visited 6 times, 1 visits today)

Related posts