9 ವರ್ಷಗಳಿಂದ ಸಂಘ-ಸಮಾಜದ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ : ಟಿ.ಆರ್.ಸುರೇಶ್

ತುಮಕೂರು:

      ಜಿಲ್ಲಾ ಕುರುಬರ ಸಂಘದ 9ನೇ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಕುಣಿಗಲ್ ರಸ್ತೆಯ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

      ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ಅಧ್ಯಕ್ಷರಾದ ಟಿ.ಆರ್.ಸುರೇಶ್, ಕಳೆದ 9 ವರ್ಷಗಳಿಂದ ಸಂಘ- ಸಮಾಜದ ಅಭಿವೃದ್ಧಿಗೆ ದುಡಿಯುತ್ತಾ ಬಂದಿದೆ. ಕುರುಬ ಸಮುದಾಯಕ್ಕೆ ಸರಕಾರದಿಂದ ಹಾಗೂ ಇನ್ನಿತರ ಕಡೆಗಳಿಂದ ಅನ್ಯಾಯಗಳು,ತೊಂದರೆಗಳಾದಾಗ ಸಮಾಜದ ಜೊತೆ ನಿಂತು ಹೋರಾಟ ನಡೆಸುವ ಮೂಲಕ ನ್ಯಾಯ ದೊರಕಿಸಿಕೊಡಲು ಶ್ರಮಿಸಿದೆ. ಇತ್ತೀಚಿನ ಪೀರಣ್ಣವಾಡಿಯ ಸಂಗೋಳಿ ರಾಯಣ್ಣ ಪ್ರತಿಮೆ ದ್ವಂಸ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಉಗ್ರ ಹೋರಾಟ ನಡೆಸುವ ಮೂಲಕ ಸಮಾಜದ ಹಿರಿಯರಿಗೆ ಬೆಂಬಲವಾಗಿ ನಿಂತಿದೆ. ಅಲ್ಲದೆ ಕುರುಬ ಸಮಾಜದ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ, ರಾಜಕೀಯ ಅಭಿವೃದ್ದಿಗೆ ಜಿಲ್ಲಾ ಕುರುಬರ ಸಂಘದ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ ಎಂದರು.

      ತುಮಕೂರು ನಗರದ ಮುಖ್ಯರಸ್ತೆಯೊಂದಕ್ಕೆ ಮಾಜಿ ಸಂಸದ ಸಿ.ಎನ್.ಭಾಸ್ಕರಪ್ಪ ಅವರ ಹೆಸರಿಡುವ ಸಂಬಂಧ ಸಮುದಾಯದ ಮುಖಂಡರು, ಕಾರ್ಪೋರೇಟರ್‍ಗಳೊಂದಿಗೆ ಸೇರಿ,ಮೇಯರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದು ಟಿ.ಆರ್.ಸುರೇಶ್ ನುಡಿದರು.

       ಇದೇ ವೇಳೆ ಕವಿರತ್ನ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮರಾಜು ಅವರನ್ನು ಅಭಿನಂದಿ ಸಲಾಯಿತು..ವೇದಿಕೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಆರ್.ಎಂ.ಸಿ.ರಾಜು, ಸಂಘದ ಉಪಾಧ್ಯಕ್ಷರಾದ ಮಾಲೂರಪ್ಪ,ಎಂಪಿ ಕುಮಾರಸ್ವಾಮಿ,ಸಂಘದ ಪ್ರಧಾನ ಕಾರ್ಯದರ್ಶಿ ಮಾರಪ್ಪ,ಕಾರ್ಯದರ್ಶಿ ಪುಟ್ಟರಾಜು,ಜಂಟಿ ಕಾರ್ಯ ದರ್ಶಿಗಳಾದ ಟಿ.ಇ. ರಘುರಾಮ್,ಟಿ.ಎಚ್.ಮಹಾದೇವ್,ಜಿಲ್ಲಾ ಖಜಾಂಚಿ ಧರ್ಮರಾಜ್,ಮಹಾನಗರ ಪಾಲಿಕೆ ಮಾಜಿ ಸದಸ್ಯ ರಮೇಶ್ ಮೆಳೆಕೋಟೆ ನಿರ್ದೇಶಕರುಗಳಾದ ಇಂಜಿನಿಯರ್ ಹರೀಶ್,ಚಿಕ್ಕಸ್ವಾಮಿ,ಸಂಘದ ನಿರ್ದೇಶಕ ರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 5 times, 1 visits today)

Related posts

Leave a Comment