
ಕೊರಟಗೆರೆ: ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜವು ಶಕ್ತಿವಂತಾಗುತ್ತದೆ ಮಹಿಳೆಯರಿಗೆ ಅವಕಾಶ ಕಲ್ಪಿಸಿಲು ನಮ್ಮ ಆಕ್ವಿನ್ ಪೈನಾನ್ಸಿಯಲ್ ಸೊಲ್ಯೂಷನ್ಸ್ ಸಂಸ್ಥೆ ಸದಾ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮೂಲಕ ನಿಮ್ಮೊಂದಿಗೆ ಇರುತ್ತದೆ ಎಂದು ಅಕ್ವಿನ್ ಸಂಸ್ಥೆಯ ಉಪಾದ್ಯಕ್ಷರಾದ ರೇಷ್ಮಾಗೋಯಲ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಉಚಿತ ಕಂಪ್ಯೋಟರ್ ಮತ್ತು ಹೊಲಿಗೆ ತರಬೇತಿ ನೀಡು ತ್ತಿರುವ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆ ಯಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚೆಣೆ ಮತ್ತು ತರಬೇತಿ ಪಡೆದ ೪೦೦ ಫಲಾನುಭವಿಗಳಿಗೆ ಪ್ರಮಾ ಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತ ನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸದಾ ಕ್ರೀಯಾಶೀಲರಾಗಿ ಉದ್ಯಮಶೀಲತೆಯನ್ನು ಮೈಗೊಡಿಸಿಕೊಳ್ಳಬೇಕು, ಸಮಾಜದ ಎಲ್ಲಾ ಕ್ಷೇತ್ರಗ ಳಲ್ಲಿಯೂ ಮಹಿಳೆಯು ಸಾಧನೆಗೈಯುವ ಮೂಲಕ ಹೆಣ್ಣು ಅಬಲೆಯಲ್ಲ ಸಬಲೆ ಎಂದು ತಿಳಿಸಿದರು.
ಬೆಂಗಳೂರು ಅಕ್ವಿನ್ ಫೈನಾನ್ಸಿಯಲ್ ಸೊಲ್ಯೋ ಷನ್ ಸಂಸ್ಥೆಯ ಅಧ್ಯಕ್ಷ ವಿಜಯ್‌ಕುಮಾರ್ ಮಾತ ನಾಡಿ, ಮಹಿಳೆಯರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಯ ಮುನ್ನಡೆಗೆ ತರತಕ್ಕದ್ದು ಪುರುಷರ ಕೆಲಸವಾಗಿದೆ, ಕೊರಟಗೆರೆಯಲ್ಲಿ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮೂಲಕ ಸಾವಿರಾರು ಮಹಿಳೆಯರು ಉಚಿತವಾಗಿ ಕಂಪ್ಯೋಟರ್, ಹೊಲಿಗೆ ಹಾಗೂ ಕಸೂತಿ ತರಬೇತಿ ಪಡೆದು ಸ್ವತಂತ್ರ ಜೀವನ ನಡೆಸು ತ್ತಿರುವುದು ಉತ್ತಮ ಸಾಧನೆಯಾಗಿದೆ ಎಂದು ತಿಳಿಸಿದ ಅವರು ಬೀಮ್ ಸಂಸ್ಥೆಯಲ್ಲಿ ಮಹಿಳಾ ಶಿಕ್ಷಕಿಯರಿಂದಲೇ ತರಬೇತಿ ನೀಡಲಾಗುತ್ತಿದ್ದು ಇಲ್ಲಿ ಬರುವ ಪ್ರತಿ ಹೆಣ್ಣು ಮಕ್ಕಳಿಗೂ ವಿಶೇಷ ಭದ್ರತೆ ಒದಗಿಸಿದ್ದು ಗ್ರಾಮೀಣ ಭಾಗದ ಮಹಿಳೆಯರು ಕಲಿತು ಸಾಧನೆ ಮಾಡಿದರೆ ಗ್ರಾಮಕ್ಕೂ ಮತ್ತು ತಮ್ಮ ಕುಟುಂಬಕ್ಕೂ ಗೌರವ ತಂದು ಕೊಟ್ಟ ಹಾಗೆ ಎಂದು ತಿಳಿಸಿದರು
ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಸ್ಥಾಪಕ ಆಧ್ಯಕ್ಷ ರವಿಕುಮಾರ್ ಮಾತನಾಡಿ ಮಹಿಳೆರಯರು ದೇವತೆಯ ರೂಪ ಹೊಂದಿದ್ದಾರೆ ಮಹಿಳೆಯರು ಕೇವಲ ಅಡುಗೆ ಮೆನೆಗೆ ಹಾಗೂ ಪುರುಷರು ಸೇವೆಗೆ ಮೀಸಲಾಗದೆ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿ ತಿಯನ್ನು ಹೊಂದಿ ಸಾಧನೆಯನ್ನು ಮಾಡಿದ್ದಾರೆ, ಬಾಹ್ಯಾಕಾಶ ಗಗನಯಾನ ಸೇರಿದಂತೆ ಇತರೆ ವಲಯಗಳಲ್ಲಿ ಗಣನೀಯ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದ್ದು ಮಹಿಳೆಯರು ಸಮಾಜ ಮುಖಿಯಾಗಿ ಬೆಳೆದರೆ ದೇಶ ನಾಡು ಸಮೃದ್ದಿ ಯಾಗುವದರ ಜೊತೆಗೆ ಮಕ್ಕಳನ್ನು ಪುರುಷರನ್ನು ಸರಿಪಡಿಸಲು ಸಹಕಾರಿಯಗುತ್ತದೆ ಎಂದು ತಿಳಿಸಿದ ಅವರು ಇತಿಹಾಸದಿಂದಲೂ ಪ್ರತಿಯೊಬ್ಬ ಪುರುಷನ ಯಶಸ್ವಿನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾ ಶಯಗಳನ್ನು ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್ ಮಾತನಾಡಿ ಮಹಿಳೆ ಯರಿಗೆ ಸರ್ಕಾರ ಶೇ. ೩೩ ರಷ್ಟು ಮೀಸಲತಿ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಕಾಣಬಹುದು, ಮಹಿಳೆಯರು ಮಹಿಳಾ ದಿನಾಚ ರಣೆಗಳು ಮಾಡುವ ಮೂಲಕ ಮಹಿಳೆಯರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬಹದು ಎಂಬ ತಾಂತ್ರಿಕವಾದ ಯೋಜನೆಗಳನ್ನು ರೂಪಿಸುವ ನಿಟ್ಟನಲ್ಲಿ ಚರ್ಚಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಫಲಾನು ಭವಿಗಳಾದ ನಾಗಲಕ್ಮೀ, ಅನಂತಲಕ್ಷಿö್ಮ, ನಿಕಿತಾ ಮಾತನಾಡಿದರು ವೇದಿಕೆಯಲ್ಲಿ ಶಿಕ್ಷಕಿಯರಾದ ಶ್ರೀದೇವಿ, ನಾಗಮಣಿ, ಫರಹತ್ ಉನ್ನೀಸಾ, ಚೈತ್ರ, ಸುಧಾ ಸೇರಿದಂತೆ ತರಬೇತಿ ಪಡೆದ ೪೦೦ ಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು.





