BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ
  • ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ
  • ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ
  • ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ
  • ೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ
  • ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು
  • ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ
  • ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಂಘಟನೆಗಳಿಗೆ ಸೈದಾಂತಿ ಬದ್ಧತೆ ಅಗತ್ಯ
ತುಮಕೂರು

ಸಂಘಟನೆಗಳಿಗೆ ಸೈದಾಂತಿ ಬದ್ಧತೆ ಅಗತ್ಯ

By News Desk BenkiyabaleUpdated:April 15, 2025 4:13 pm

 

ತುಮಕೂರು: ಇಂದು ಸುಳ್ಳು ಹೋರಾಟಗಾರರನ್ನು ಸೃಷ್ಟಿ ಸಲಾಗುತ್ತಿದೆ. ಸಂಘಟನೆಗಳಿಗೆ ಸೈದಾಂತಿ ಬದ್ಧತೆ ಅಗತ್ಯವಾಗಿದೆ, ಸೈದಾಂತಿಕ ಬದ್ದತೆಯ ಹೋರಾಟಗಳೆ ಇವತ್ತು ಜನರನ್ನ ಸಂಕಷ್ಟಗಳಿAದ ಪಾರುಮಾಡಲು ಸಾಧ್ಯ ಎಂದು ಪ್ರೊ.ಕೆ. ದೊರೆರಾಜು ತಿಳಿಸಿದರು.
ತುಮಕೂರು ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ತುಮಕೂರು ಪೌರಕಾರ್ಮಿಕರ ಸಂಘ, ರಿ, ಸಿಐಟಿಯು, ಕರ್ನಾ ಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ರಿ. ಕಸದ ಆಟೋ ಚಾಲಕರು ಮತ್ತು ಸಹಾಯಕರು, ಲೋರ‍್ಸ್ ಮತ್ತು ಕ್ಲೀರ‍್ಸ್ ಸಂಘ ರಿ. ನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘ ರಿ, ಜಂಟಿಯಾಗಿ ಸಂಘಟಿಸಿದ್ದ ಡಾಕ್ಟರ್;; ಬಾಬು ಜಗಜೀವನ್ ರಾಮ್ ಹಾಗು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ಇಂದು ಜಾತಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ತಮ್ಮ ನಾಯಕರ ಅನುಕೂಲಕ್ಕಾಗಿ ಸಂಘ ಟನೆಗಳನ್ನು ಕಟ್ಟುತ್ತಿದ್ದಾರೆ, ಜಾತಿ- ಜಾತಿಗಳ ನಡುವೆ ವೈಷಮ್ಯವನ್ನು ಹುಟ್ಟು ಹಾಕಿ ಸಮಾಜದಲ್ಲಿ ಜನ ಸಮುದಾಯಗಳ ಛಿದ್ರಿಕರಣಕ್ಕೆ ಕಾರಣವಾಗುತ್ತಿದ್ದಾರೆ, ಇದು ಆರೋಗ್ಯಕರ ಸಮಾಜಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದವರು. ಸಾಮಾಜಿಕ ಬದುಕು ಕಟ್ಟಿಕೊಳ್ಳಲು ನಾವೆಲ್ಲರೂ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ ಎಂದರು.
ಸಮುದಾಯಗಳಿಗೆ ಘನತೆಯ ಬದುಕು ಕಟ್ಟಿ ಕೊಳ್ಳಲು, ಭಾರತೀಯ ಸಂವಿಧಾನ ಕಾರಣ ಅದಕ್ಕೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದವರು .
ಅಂಬೇಡ್ಕರ್ ಅವರನ್ನು ಆರಾಧಿಸಿ ಅದ್ದೂರಿ ತನ ತೋರುವ ಬದಲು ಅವರ ತತ್ವಗಳ ಆಚರಣೆ ಇಂದಿನ ತುರ್ತು ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಮುನಿಸಿಪಲ್ ಕಾರ್ಮಿಕರು ಕಳೆದ ೨೩ ವರ್ಷಗಳಿಂದ ನಿರಂತರವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೂಡಾ; ಜಗಜೀವನ ರಾಮ್ ಅವರ ಜಯಂತಿಗಳನ್ನು ಆಚರಿಸುತ್ತಿರುವುದು ಹಾಗೆ ಮುನಿಸಿಪಲ್ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಹಿಸುತ್ತಿರುವುದರ ಜೊತೆಗೆ ಕಾರ್ಮಿಕರ ಬದುಕಿನ ಪ್ರಶ್ನೆಗಳಲ್ಲಿ ಬದ್ಧತೆಯ ಹೋರಾಟಕ್ಕೆ ಅವರು ಸಿಐಟಿಯು ಸಂಘ ಟನೆಯನ್ನು ಅಭಿನಂದಿಸಿದರು
ಮತ್ತೊಬ್ಬ ಅತಿಥಿಯಾಗಿ ಮಾತನಾಡಿದ ಸಿಐಟಿ ಯುನ ರಾಜ್ಯ ಕಾರ್ಯದರ್ಶಿ ಕೆ. ಮಹಂತೇಶ್ ಅವರು ಮಾತನಾಡಿ, ಆಧುನಿಕ ನಾಗರಿಕ ಸಮಾಜದಲ್ಲೂ ಅಸ್ಪೃಶ್ಯತೆ ಆಚರಣೆ ಇನ್ನೂ ಇರುವುದು ನಾಚಿಕೆಗೇಡಿನ ವಿಚಾರ ಎಂದರು. ಅಂಬೇಡ್ಕರ್ ಅವರು ಹಾಗೂ ಜೀವನ ರಾಮ್ ಅವರ ಕೊಡುಗೆಗಳನ್ನು ವಿವರಿಸಿದವರು .ದಲಿತ ಹಾಗೂ ದಮನಿತ ಸಮುದಾಯಗಳು ಶಿಕ್ಷಣವನ್ನು ನಿರ್ಲಕ್ಷಿಸದೆ ಮಕ್ಕಳನ್ನು ಶಶಿತರಾಗಿಸಲು ಹೆಚ್ಚು ಗಮನ ನೀಡುವಂತೆ ಕೊರಿದರು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ ಬಾಲಕೃಷ್ಣ ಅವರು ಮಾತನಾಡಿ ೩೬೪ ದಿನವೂ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಉಲ್ಲಂಘಿಸುವವರು ಇಂದು ಆಂಬೇಡ್ಕರ್ ಅವರಿಗೆ ಜೊತೆ ಸರಿಸಮವಾದ ಕಟ್ ಔಟ್ ಹಾಕಿಸಿಕೊಂಡು ವಿಜ್ಜರಂಭಿಸುವುದು ವಿಪರ್ಯಾಸ ಎಂದರು. ಅಂಬೇಡ್ಕರ್ ನೀಡಿರುವ ಶಿಕ್ಷಣ ಸಂಘಟನೆ ಹೋರಾ ಟವನ್ನು ಬಿಡದೆ ಮುಂದುವರಿಸಬೇಕೆAದರು
ಹಮಾಲಿ ಕಾರ್ಮಿಕರ ಸಂಘಟನೆಯ ಗಂಗಾಧರ್, ನೀರು ಸರಬರಾಜು ನೌಕgರÀ ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ್, ಮಹಾನಗರಪಾಲಿಕೆಯ ವ್ಯವಸ್ಥಾಪಕ ಮನೋಹರ್, Pಸದ ಲಾರಿ ಚಾಲಕರ ಸಂಘಟನೆಯ ಅಧ್ಯಕ್ಷ ಪ್ರಕಾಶ್, ಕಸದ ವಾಹನ ಚಾಲಕರು, ಸಹಾಯಕರು ಲೋಡರ್ಗಳು ಮತ್ತು ಕ್ಲೀನರ್‌ಗಳ ಸಂಘದ ಶ್ರೀನಿವಾಸ್ ಅವರು ಸಮಾ ರಂಭದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಡಾ; ಬಾಬು ಜನಜೀವನ್ ರಾಮ್ ಪ್ರಶಸ್ತಿ ಪುರಸ್ಕೃತ ಚಿಂಕ ಪ್ರೋ; ಕೆ. ದೋರೈ ರಾಜು ಅವರನ್ನು ಅಭಿನಂಧಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಮುನಿಸಿಪಲ್ ಕಾರ್ಮಿಕರ ಮಕ್ಕಳನ್ನು ಸಮಾರಂಭದಲ್ಲಿ ಸಮಾರಂಭದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ತುಮಕೂರು ಮಹಾ ನಗರ ಪಾಲಿಕೆಯಲ್ಲಿ ಎರಡು ಸುತ್ತಿನಲ್ಲಿ ಪೌರ ಕಾರ್ಮಿಕರ ಕಾಯಂಮಾತಿಗೆ ಪ್ರಮಾಣಿಕವಾಗಿ ದುಡಿದವರ ಪೈಕಿ ವ್ಯವಸ್ಥಾಪಕ ಮಧುಸೂಧನ್ ಅವರನ್ನು ಸನ್ಮಾನಿಸಲಾಯಿತು. ಕಳೆದ ೨೫ -೩೦ ವರ್ಷಗಳಿಂದ ತುಮಕೂರು ನಗರದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡಿದ ಪೌರಕಾರ್ಮಿಕರಾದ ಸಂತೆಪೇಟೆ ವೆಂಕಟೇಶ್& ರಂಗಸ್ವಾಮಿಯ ಹಾಗೂ ಚಿಕ್ಕಣ್ಣ ಇವರಿಗೆ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ವಹಿಸಿದ್ದರು .ಆರಂಭದಲ್ಲಿ ರಾಜೇಶ್ ಅವರು ಸ್ವಾಗತಿಸಿದರೆ ಪ್ರಧಾನ ಕಾರ್ಯದರ್ಶಿ ಎಂ ಕೆ ಸುಬ್ರಹ್ಮಣ್ಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

(Visited 1 times, 1 visits today)
Ambedkar tumkur
Previous Articleತುಮಕೂರಿನ ವಿದ್ಯಾರ್ಥಿಗಳು ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮೂರು ಉತ್ತಮ ಸ್ಥಾನ ಗಳಿಸಿದ್ದಾರೆ
Next Article ೨೦೨೬ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು
News Desk Benkiyabale

Related Posts

ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ

July 10, 2026 12:00 pm news

ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ

July 10, 2026 11:58 am news

ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ

July 10, 2026 11:56 am news
ತಾಜಾ ಸುದ್ಧಿಗಳು

ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ

July 10, 2026 12:00 pm

ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ

July 10, 2026 11:58 am

ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ

July 10, 2026 11:56 am

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm
Our Youtube Channel
Our Picks

ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ

July 10, 2026 12:00 pm

ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ

July 10, 2026 11:58 am

ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ

July 10, 2026 11:56 am

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ

By News Desk BenkiyabaleJuly 10, 2026 12:00 pm

ತುಮಕೂರು: ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ೧೭ನೇ ಪಟ್ಟಾಭಿಷೇಕ ಹಾಗೂ ೪೦ನೇ ಜನ್ಮ ವರ್ಧಂತ್ಯೋತ್ಸವ ಅಂಗವಾಗಿ…

ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ

July 10, 2026 11:58 am

ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ

July 10, 2026 11:56 am

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.