
ತುಮಕೂರು: ನಗರದ ಲಯನ್ ಮಾರ್ಷಲ್ಸ್ ಆರ್ಟ್ ಕರಾಟೆ ಟ್ರೆöÊನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಹರಿಯಾಣದ ಗುರುಗ್ರಾಮ್‌ನ ಕಮ್ಯುನಿಕ್ ಸೆಂಟರ್ ಹಾಲ್‌ನಲ್ಲಿ ನಡೆದ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಹರಿಯಾಣದಲ್ಲಿ ೨ ದಿನಗಳ ಕಾಲ ನಡೆದ ಈ ಚಾಂಪಿಯನ್ ಶಿಪ್‌ನಲ್ಲಿ ತುಮಕೂರಿನ ಲಯನ್ ಮಾರ್ಷಲ್ಸ್ ಆರ್ಟ್ ಕರಾಟೆ ಟ್ರೆöÊನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದ್ದಾರೆ.
ಪ್ರಥಮ ಬಹುಮಾನ
ಉತ್ತಮ ಕರಾಟೆ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ವಂಶಿ ಕೆ.ಪಿ., ಪೋಷಿತ್ ಎಂ. ರಾಜು, ಸುಶಾಂತ್ ನಾಯಕ್ ಹಾಗೂ ಖುಷಿ ಕೆ.ಪಿ. ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.
ದ್ವಿತೀಯ ಬಹುಮಾನ
ಅದ್ವಿಕ್ ಹೆಚ್.ಎಸ್., ಶ್ರೀರಂಗ, ಶ್ರೀನಿಧಿ, ದರ್ಶಿತ್, ಲೇಖಶ್ರೀ, ಶ್ರೀಹರಿ, ಅಭಿರಾಮ್, ಚೇತನ್‌ಕುಮಾರ್, ಶ್ರೀನಿವಾಸ್ ಹಾಗೂ ಜೇಂಕಾರ್ ಅವರು ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಗರದ ಲಯನ್ ಮಾರ್ಷಲ್ಸ್ ಆರ್ಟ್ ಕರಾಟೆ ಟ್ರೆöÊನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿರುವ ವಿದ್ಯಾರ್ಥಿಗಳನ್ನು ಕರಾಟೆ ಮುಖ್ಯ ತರಬೇತುದಾರರಾದ ಸಿಹಾನ್, ಪ್ರಕಾಶ್, ತರಬೇತುದಾರರಾದ ಸೆನ್ಸ್ ವಿಜಯ್, ಸೆನ್ಸ್ ಕಾರ್ತಿಕ್ ಅಭಿನಂದಿಸಿದ್ದಾರೆ.





