ತುಮಕೂರು: ರಾಜಕೀಯ ಅಧಿಕಾರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ರಾಜಮಾರ್ಗವಾಗಿದ್ದು, ರಾಜಕೀಯ ಅಧಿಕಾರಕ್ಕಾಗಿ ಅವಕಾಶ ವಂಚಿತ ಎಲ್ಲ ತಳಸಮುದಾಯಗಳು ಒಗ್ಗೂಡುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಪಾದಿಸಿದ್ದಾರೆ
ನಗರದ ಏಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾ ಶಾಖೆವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ೩೯೮ ನೇ ಜಯಂತೋತ್ಸವ ಹಾಗು ಕೆಕೆಎಂಪಿಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಪಿ.ಜಿ.ಆರ್.ಸಿಂಧ್ಯ,ಮೋರೆ ಅವರನ್ನು ಬಿಟ್ಟರೆ ಉಳಿದಂತೆ ಮರಾಠ ಸಮುದಾಯದಲ್ಲಿ ರಾಜಕೀಯ ಧರೀಣರಿಲ್ಲ. ಹಿಂದೆ ಬೆಳಗಾವಿ ಭಾಗದಿಂದ ಸುಮಾರು ಐದರಿಂದ ಆರು ಜನರು ವಿಧಾನಸಭೆಗೆ ಆಯ್ಕೆಯಾಗುತಿದ್ದರು.ಆದರೆ ಪರಿಸ್ಥಿತಿ ಬದಲಾಗಿದೆ.ರಾಜಕಾರಣದಲ್ಲಿ ಮಾರಾಠಿಗರ ಪ್ರಾತಿನಿಧ್ಯ ಕಡಿಮೆಯಾಗಿದೆ. ಹಾಗಾಗಿ ರಾಜಕೀಯ ಅಧಿಕಾರ ವಂಚಿತ ಎಲ್ಲಾ ಸಮುದಾಯಗಳು ಒಗ್ಗೂಡುವ ಅಗತ್ತವಿದೆ ಎಂದರು.
ಮರಾಠ ಎಂದರೆ ಧೈರ್ಯ, ಸಹಾಸ,ಆತ್ಮಗೌರವಕ್ಕೆ ಹೆಸರು ವಾಸಿಯಾದ ಸಮುದಾಯ. ದೇಶ ಮತ್ತು ರಾಜ್ಯಕ್ಕೆ ಇವರ ಕೊಡುಗೆ ಅಪಾರ. ಈ ಇತಿಹಾಸವನ್ಬು ನಮ್ಮ ಯುವ ಪಿಳೀಗೆಗೆ ಪರಿಚಯೀಸುವ ಕೆಲಸ ಆಗಬೇಕಿದೆ.ಅಲ್ಲದೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಹಿರಿಯರನ್ನು,ಕಿರಿಯರಿಗೆ ಪರಿಚಯಿಸಿ, ಅವರು ಸಹ ಸಾಧನೆಯತ್ತ ಮುಖ ಮಾಡುವಂತೆ ಪ್ರೋತ್ಸಾಹಿಸುವ ಕೆಲಸವನ್ನು ಕೆಕೆಎಂಪಿ ಮಾಡಬೇಕು.ಹಣ,ಆಸ್ತಿಗಿಂತ ವಿದ್ಯೆಗೆ ಎಲ್ಲಡೆ ಗೌರವವಿದೆ.ಹಾಗಾಗಿ ಮರಾಠ ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವಕಾಶಗಳನ್ಬು ಸದುಪಯೋಗ ಪಡಿಸಿಕೊಳ್ಳಲು ಪ್ರೇರೆಪಿಸಬೇಕೆಂದು ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಬೆಂಗಳೂರಿನ ಗವಿಪುರಂನ ಗೋಸಾಯಿ ಮಠದ ವೇದಾಂತಚಾರ್ಯ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಆಶೀರ್ವಚನ ನೀಡಿ,ಮರಾಠ ಸಮುದಾಯ ಅರ್ಥಿಕವಾಗಿ, ರಾಜಕೀಯವಾಗಿ ಬೆಳೆಯಲು ಜನರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ.ಹಿಂದೂ ಧರ್ಮದ ಸಂರಕ್ಷಣೆಗೆ ಹೇಗೆ ಶಿವಾಜಿ ಮಹಾರಾಜರು, ಹಗಲಿರುಳು ಕೆಲಸ ಮಾಡಿದರೋ, ಅದೇ ರೀತಿ ವಿದ್ಯಾವಂತ ಮರಾಠ ಯುವಜನರು, ಸಮುದಾಯದ ಎಲ್ಲಾ ರೀತಿಯ ಬೆಳೆವಣಿಗೆಗೆ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜೋತಿಗಣೇಶ್ ಮಾತನಾಡಿದರು. ಲೇಖಕರಾದ ಕು.ಹಾರಿಕ ಮಂಜುನಾಥ್ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದರು. ಕೆಕೆಎಂಪಿಯ ರಾಜ್ಯಾಧ್ಯಕ್ಷರಾದ ಎಸ್.ಸುರೇಶ್ ಸಾಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಕೆಎಂಪಿ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುನೀಲ್ ಚೌವಾಣ್, ಆರ್.ವೆಂಕಟರಾವ್ ಮರಾಠ ಹಾಸ್ಟಲ್ ಸಮಿತಿ ಅಧ್ಯಕ್ಷರಾದ ಟಿ.ಆರ್.ವೆಂಕಟರಾವ್ ಚೌವಾಣ್, ಕೆಕೆಎಂಪಿ ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಜನಾರ್ಧನ್ ಸೋನಾಲೆ, ಗೌರವಾಧ್ಯಕ್ಷ ಆರ್.ನಾಗೇಶರಾವ್ ಗಾಯಕವಾಡ್, ಕಾರ್ಯದರ್ಶಿ ಟಿ.ವಿ.ಶ್ರೀನಿವಾಸರಾವ್ ಸಾಳಂಕೆ,ಖಜಾAಚಿ ಹರೀಶರಾವ್ ಮೋರೆ, ಜಂಟಿ ಕಾರ್ಯದರ್ಶಿ ರಮೇಶರಾವ್ ಸಿಂಧೆ, ಸಂಘಟನಾ ಕಾರ್ಯದರ್ಶಿ ಗಂಗೋಜಿರಾವ್ ನಲವಡೆ, ನಿರ್ದೇಶಕರಾದ ರಾಮಕೃಷ್ಣ ರಾವ್ ಕರಂಡೆ, ಆರುಣ್ ಕುಮಾರ್ ರಾವ್ ಸಿಂಧೆ( ಬನಶಂಕರಿ ಬಾಬು ), ಹೇಮೋಜಿರಾವ್ ಸಿಂಧೆ, ಪಾಂಡುರಾವ್ ಮೋರೆ, ಗಣೇಶ್ ರಾವ್ ಬೋಸ್ಲೆ, ಮೋಹನ್ ರಾವ್ ಮೋರೆ, ಉದಯಶಂಕರ್ ಸೋನಾಲೆ, ನಾಗೇಶರಾವ್ ಮೋರೆ, ಲೋಕೇಶ್ ರಾವ್ ಸಾವಂತ್, ಮುರುಳೀಧರ್ ವಿ.ಎ.ಸೋನಾಲೆ, ಹರ್ಷ ಕದಂ, ತುಳಸಿಬಾಯಿ ಸೋನಾಲೆ, ನಂದಕುಮಾರಿ ಯಾದವ್ ಮತ್ತಿತರರು ಪಾಲ್ಗೊಂಡಿದ್ದರು