
ತುಮಕೂರು: ಹಿಂದೆಲ್ಲಾ ಮಕ್ಕಳಿಗೆ ಊಟ ಮಾಡಿಸುವಾಗ ಪೋಷಕರು ಚಂದಮಾಮ ಹಾಗೂ ಪಂಚ ತಂತ್ರದ ಕಥೆಗಳನ್ನು ಹೇಳುತ್ತಿದ್ದರು. ಈಗ ಆ ಕಥೆ ಹೇಳಿ ಊಟ ಮಾಡಿಸುವ ಪೋಷಕರು ಕಾಣುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಎಂ.ಎನ್. ವಿಷಾದಿಸಿದರು.
ತುಮಕೂರಿನ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗ ಮಕ್ಕಳಿಗೆ ಪೋಷಕರು ಊಟ ಮಾಡಿಸುವಾಗ ಮೊಬೈಲ್ ಅನ್ನು ಕೊಡುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಷಾದಿಸಿದರು. ಹೀಗಾಗಿ ಚಂದಮಾಮ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡುವ ಪೋಷಕರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಮೊಬೈಲ್ ನಲ್ಲಿ ಮಕ್ಕಳು ಕಳೆದು ಹೋಗಿರುವ ಆಂತಕ ಇದೆ. ಇದು ಮಕ್ಕಳ ಸಮಸ್ಯೆಯಲ್ಲ, ಪೋಷಕರ ಸಮಸ್ಯೆ. ಮನೆಗಳಲ್ಲೂ ಕೂಡ ರೋಬರ್ಟ್ ಗಳು ಬಂದಿವೆ. ಮೊಬೈಲ್ ನಿಂದ ಮಕ್ಕಳು ಹೊರಗೆ ಬರುವುದು ಕಷ್ಟ. ಆದರೆ ಪೋಷಕರು ಮಕ್ಕಳನ್ನು ಮೊಬೈಲ್ ನಿಂದ ತಪ್ಪಿಸಿ ಕಥೆಗಳನ್ನು, ಹಾಡುಗಳನ್ನು ಹೇಳಿಕೊಡುವ ಕೆಲಸ ಮಾಡಬೇಕು ಎಂದರು.
ಮಕ್ಕಳ ಆಸೆಯಂತೆ ಮಕ್ಕಳನ್ನು ಬೆಳೆಸಬೇಕು. ಪೋಷಕರ ಆಸೆಯಂತೆ ಮಕ್ಕಳನ್ನು ಬೆಳೆಸಬೇಡಿ ಎಂದು ಸಲಹೆ ನೀಡಿದ ಚೇತನಕುಮಾರ್ ಕೆಲ ಮಕ್ಕಳಿಗೆ ಮಾತಿನ ಚಾಕಚಕ್ಯತೆ ಇರುತ್ತದೆ. ಅವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದಾರೆAಬುದನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಅವರನ್ನು ತೊಡಗಿಕೊಳ್ಳಲು ಪ್ರೇರೇಪಿಸಿದರೆ ಅವರು ಆ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ ಎಂದರು.
ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಕಂಪೇರ್ ಮಾಡಬೇಡಿ. ನಿಮ್ಮ ಮಕ್ಕಳು ನಿಮಗೆ ಸಾಟಿ ಎಂದು ಭಾವಿಸಿ. ಅವರಿಗೆ ಯಾವತ್ತೂ ಕೂಡ ನಿರುತ್ಯಾಹ ಮೂಡಿಸಬೇಡಿ ಎಂದರು. ಕಳೆದ ೧೫ ದಿವಸಗಳಿಂದ ಹಲವಾರು ವಿಷಯಗಳನ್ನು ಕಲಿತಿದ್ದಾರೆ. ಯಕ್ಷಗಾನವನ್ನು ಕೂಡ ಕಲಿತಿದ್ದಾರೆ. ಇವತ್ತು ಅದನ್ನು ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ ಎಂದರು.
ಶಾಲೆಯಿAದ ಮಕ್ಕಳು ಬಂದ ಕೂಡಲೇ ಓದಿ ಓದಿ ಎಂದು ಒತ್ತಡ ಹಾಕಬೇಡಿ. ಅವರಿಗೆ ಜ್ಞಾನ ಪಡೆಯುವ ವಿಷಯಗಳನ್ನು ಹೇಳಿಕೊಡಿ ಎಂದು ಸಲಹೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ತುಮಕೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಲವಾರು ರಚನಾತ್ಮಕ ಕೆಲಸಗಳು ನಡೆಯುತ್ತಿದೆ. ತಿಪಟೂರು ತಾಲೂಕು ಕೊನೆಹಳ್ಳಿಯಲ್ಲಿ ಮೂಡಲಪಾಯ ಯಕ್ಷಗಾನ ಕೇಂದ್ರವಿದ್ದು ಅಲ್ಲಿ ಊರಿನವರೆಲ್ಲಾ ಆ ಕಲಾ ಪ್ರಕಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ತುಮಕೂರು ಜಿಲ್ಲೆಗೆ ಬಯಲು ಸೀಮೆ ರಂಗಾಯಣದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ ಉಗಮ ಶ್ರೀನಿವಾಸ್ ಅವರು ತುಮಕೂರು, ಕೋಲಾರ, ಚಿತ್ರದುರ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮುಂತಾದ ಜಿಲ್ಲೆಗಳನ್ನು ಒಳಗೊಂಡು ತುಮಕೂರಿನಲ್ಲಿ ಬಯಲು ಸೀಮೆ ರಂಗಾಯಣ ಸ್ಥಾಪಿಸಬೇಕೆಂದು ತಿಳಿಸಿದರು.
ಈ ಸಂಬAಧ ಈಗಾಗಲೇ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ಬರೆದಿದ್ದು ಸರ್ಕಾರ ತುಮಕೂರಿಗೆ ಬಯಲು ಸೀಮೆ ರಂಗಾಯಣ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ತುಮಕೂರು ಬುಡಕಟ್ಟು, ತತ್ವಪದ ಹೀಗೆ ಬಹು ಮಾಧ್ಯಮದ ಕೇಂದ್ರವಾಗಿದೆ. ಜುಂಜಪ್ಪನ ಕೇಂದ್ರ ಕೂಡ ತುಮಕೂರು ಆಗಿದ್ದು ರಂಗಭೂಮಿ ಸೇರಿದಂತೆ ಎಲ್ಲ ಕಲಾ ಪ್ರಾಕಾರಗಳಲ್ಲೂ ಕೂಡ ವಿಶಿಷ್ಟ ಸ್ಥಾನ ಹೊಂದಿದೆ. ಹೀಗಾಗಿ ತುಮಕೂರಿಗೆ ಬಯಲು ಸೀಮೆ ರಂಗಾಯಣ ಮಂಜೂರು ಮಾಡಬೇಕೆಂದು ಕೋರಿದರು.
ಈಗಾಗಲೇ ದಾವಣಗೆರೆ, ಮೈಸೂರು, ಶಿವಮೊಗ್ಗ, ಧಾರವಾಡ, ಕಲ್ಬುರ್ಗಿ ಮುಂತಾದ ಕಡೆ ರಂಗಾಯಣವಿದೆ. ಬೆಂಗಳೂರಿನಲ್ಲಿ ರಂಗಾಯಣ ಮಾಡಬೇಕಾಗಿದೆ. ಆದರೆ ಬೆಂಗಳೂರಿನಲ್ಲಿ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಕಚೇರಿ ಇದೆ. ಹೀಗಾಗಿ ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿಗೆ ಬಯಲು ಸೀಮೆ ರಂಗಾಯಣ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ದಿನೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ, ಮಮತಾ ಉಪಸ್ಥಿತರಿದ್ದರು.
(Visited 1 times, 1 visits today)