
ತುರುವೇಕೆರೆ: ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಂದಿನ ಕ್ಷೀರ ಭವನದಲ್ಲಿ ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ವತಿಯಿಂದ ಕೃಷಿ ಆಶ್ರಮ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಇ.ಸ್ಟಾಂಪಿ0ಗ್ ಮತ್ತು ರೈತ ಸೇವಾ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಲವು ಕಡೆಗಳಲ್ಲಿ ಮಳೆ ಹೆಚ್ಚಾಗಿ ನೆರೆ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿವೆ. ಆದರೆ ರಾಜ್ಯ ಸರ್ಕಾರ ರೈತರ ನೆರವಿಗೆ ದಾವಿಸಿಲ್ಲ ಪರಿಹಾರ ನೀಡುವಲ್ಲಿ ವಿಪಲವಾಗಿದೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಕೊಡಿಸಲು ರೈತ ಪರವಾದ ಸಂಘಗಳು ಸಹಕಾರಿಯಾಗಬೇಕಿದೆ. ಇಂತಹ ಸಂಘಗಳಿ0ದ ರೈತರಿಗೆ ಬೇಕಾದ ಸವಲತ್ತು ತರಬೇತಿಗಳನ್ನು ನೀಡಿ ರೈತರ ಜೀವನ ಸುದಾರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ತುಮಕೂರು ಶಕ್ತಿ ಪೀಠ ಸಂಸ್ಥಾಪಕ ಕುಂದರಹಳ್ಳಿ ರಮೇಶ್ ಮಾತನಾಡಿ ಕೇಂದ್ರ, ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡುತ್ತಿದ್ದರೂ ರೈತರಿಗೆ ಮಾತ್ರ ತಲುಪುತ್ತಿಲ್ಲ ರೈತರ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕಿದೆ. ರೈತರು ಸಂಘಟಿತರಾಗಬೇಕಿದೆ ಸಂಘಗಳ ರೈತರು ಒಗ್ಗಾಟ್ಟಾಗುವ ಮೂಲಕ ತಮಗೆ ಸಿಗುವ ಸವಲತ್ತುಗಳನ್ನು ಪಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ತಾಲೂಕು ಅಧ್ಯಕ್ಷ ಹೆಚ್.ಎಸ್.ನಾಗರಾಜು, ತುಮುಲ್ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ, ಪರಿವರ್ತನ ಸಮೂಹ ಸಂಸ್ಥೆಯ ಅದ್ಯಕ್ಷ ಹೆಚ್.ಪಿ.ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಎಂ.ಎಸ್.ರಾಮಯ್ಯ ಇನ್ಸ್ ಟೂಟ್ ಆಪ್ ಟೆಕ್ನಾಲಜಿ ನಿವೃತ್ತ ಪ್ರಾದ್ಯಾಪಕ ಡಾ.ನಾಗಭೂಷಣ್, ನುಗ್ಗೆ ಬೆಳೆ ಸಂಸೋಧಕ ಮಧುರನಾಥ್, ಉಪಾಧ್ಯಕ್ಷ ಡಿ.ಜೆ.ಬಸವರಾಜು ಖಜಾಂಚಿ ಸೋಮಶೇಖರ್, ನಿರ್ದೇಶಕರುಗಳಾದ ವಿಜೇಯೆಂದ್ರ, ಎಂ.ಕೆ.ಗಿರೀಶ್, ಮೃತ್ಯಂಜಯ, ಕಿರಣ್ ಕುಮಾರ್, ಸೋಮಶೇಖರ್, ಸುರೇಶ್, ದೇವರಾಜು, ಗೋವಿಂದಯ್ಯ, ಪ್ರಕಾಶ್, ರೇಣುಕಪ್ಪ, ಶ್ರೀನಿವಾಸ್, ಪಾರ್ವತಿಯೋಗೀಶ್, ಬಸವರಾಜು, ನಂಜುAಡಪ್ಪ ಸೇರಿದಂತೆ ರೈತರು ಇದ್ದರು.





