ಪಟ್ಟ ನಾಯಕನಹಳ್ಳಿ: ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಉದ್ದೇಶದಿಂದ ೫೦. ಕೋಟಿ ರೂಪಾಯಿ ವೆಚ್ಚ ದಲ್ಲಿ ಶಿರಾ ತಾಲೂಕಿನ ವಿವಿಧ ಭಾಗಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಜನ ಮೆಚ್ಚುವಂತಹ ಕಾಮಗಾರಿ ಮಾಡಿ ಪೂರೈಸಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಪಟ್ಟ ನಾಯಕನಹಳ್ಳಿ ಕ್ರಾಸ್ ನಿಂದ ಉದ್ದ ರಾಮನಹಳ್ಳಿ ವರೆಗೆ ೧. ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದೂರ ದೃಷ್ಟಿ ಚಿಂತನೆಯೊAದಿಗೆ ಹೇಮಾವತಿ ನೀರು ಶಿರಾ ತಾಲೂಕಿಗೆ ಹರಿಸಿರುವ ಕಾರಣ ಅಂತರ್ಜಲ ಹೆಚ್ಚಾಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿದೆ. ಎತ್ತಿನ ಹೊಳೆ ಕಾಮಗಾರಿ ಕೂಡ ಶೀಘ್ರದಲ್ಲಿಯೇ ಮುಗಿ ಯಲಿದ್ದು, ಈ ಯೋಜನೆಯಿಂದ ಹಲವಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕ್ರಿಯಾಯೋಜನೆ ರೂಪುಗೊಂಡಿದೆ ಎಂದರು.
ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ರಕ್ಷಿತಾ ಆರ್. ಕೆ. ಮಾರುತಿ, ಸದಸ್ಯೆ ಲಕ್ಷ್ಮಮ್ಮ, ನಾಗರಾಜ, ಲೋಕೋಪಯೋಗಿ ಇಲಾಖೆ ಎಇಇ ರಮೇಶ್, ಕಾಂಗ್ರೆಸ್ ಮುಖಂಡ ವೀರೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಟಿ. ನಾರಾಯಣಪ್ಪ, ಸದಸ್ಯ ನಾಗ ಣ್ಣ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮೀದೇವಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್, ಹೊಸಹಳ್ಳಿ ರಾಮಚಂದ್ರಪ್ಪ, ಶಿವಣ್ಣ, ಕಾಂತರಾಜು, ದೇವರಾಜು, ಕೆಂಚಪ್ಪ,ಮುದ್ದುಕೃಷ್ಣ ಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
(Visited 1 times, 1 visits today)