ಚಿಕ್ಕನಾಯಕನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಅಧಿಕ ರಕ್ತದೊತ್ತಡದಿನಾರಣೆ ಆಚರಿಸಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ನಡೆದಕಾರ್ಯಕ್ರಮದಲ್ಲಿ ಹೃದಯರೋಗ ತಜ್ಙ ಡಾ. ನಟರಾಜ್ ರವರು ರಕ್ತದೊತ್ತಡದ ತಪಾಸಣೆ, ಚಿಕಿತ್ಸೆ, ಸಮತೋಲನ ಆಹಾರದ ಕುರಿತು ಮಾಹಿತಿ ನೀಡಿ ದುಶ್ಚಟಗಳಿಂದ ದೂರವಿರಬೇಕೆಂದರು. ಹಿರಿಯ ತಜ್ಞವೈದ್ಯರಾದ ಚೇತನ್ ಮಾತನಾಡಿ, ರಕ್ತದೊತ್ತಡ ನಿಯಂತ್ರಣಿಸಲು ಆಹಾರ ಕ್ರಮದಲ್ಲಿ ಬದಲಾವಣೆ ಹಾಗೂ ದೈಹಿಕ ಹಾಗೂ ಮಾನಸಿಕವಾಗಿ ಶಾಂತಿ ಯಿಂದಿರಲು ಧ್ಯಾನ ಹಾಗೂ ಯೋಗಗಳು ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಯಶವಂತ್ ರವರು ಗೃಹ ಆರೋಗ್ಯ ಹಾಗೂ ಎನ್‌ಸಿಡಿ ವಿಬಾಗದ ಚಟುವಟಿಕೆಗಳ ಮಾಹಿತಿ ನೀಡಿದರು. ಡಾ, ಕವಿತ ಮಾತನಾಡಿ, ಗರ್ಭಿಣಿಯರು ಆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಆರೋಗ್ಯ ತಪಾಸಣೆ ಹಾಗೂ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಪ್ರ ಯೋಗಗಳನ್ನು ಮಾಡಬಾರದಾಗಿ ಎಚ್ಚರಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೆ.ಜೆ. ಕೃಷ್ಣೇಗೌಡ ಹಾಗೂ ಜಾಕೀರ್‌ಹುಸೇನ್ ಮತ್ತು ಕೀರ್ತಿ ಮಾತ ನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯರ ಸೇವೆ ಹಾಗೂ ಸೌಲಭ್ಯಗಳನ್ನು ರೋಗಿಗಳು ಸದ್ಬಳಕೆ ಮಾಡಿಕೊಳ್ಳಿರೆಂದರು. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ಪಡೆಯವಂತೆ ಸಲಹೆ ನೀಡಿದರು. ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಸಿ.ವಿ. ವೆಂಕಟರಾಮಯ್ಯ ಸ್ವಾಗತಿಸಿದರು. ಆಪ್ತ ಸಮಾಲೋಚಕ ಬಾಲಕೃಷ್ಣ ವಂದಿಸಿದರು.
(Visited 1 times, 1 visits today)