BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ
  • ೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ
  • ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು
  • ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ
  • ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ
  • ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್
  • ಬೂತ್ ಏಜೆಂಟ್ ನೇಮಿಸಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸೂಚನೆ
  • ಮೊಟ್ಟೆ ದರವನ್ನು ಪರಿಷ್ಕರಿಸುವಂತೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಸಂವಾದ
ತುಮಕೂರು

ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಸಂವಾದ

By News Desk BenkiyabaleUpdated:June 05, 2025 2:22 pm

ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೆಲನ್ ಕೆಲರ್ ಶಾಲೆಯಲ್ಲಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳು ಹಾಗೂ ಅವರ ತಾಯಂದಿರೊAದಿಗೆ ಸಂವಾದ ನಡೆಸಿದರು.
ನಗರದ ಜಯನಗರ ಪೂರ್ವ ಹೆಲನ್ ಕೆಲರ್ ಇಂಟಿಗ್ರೇಟೆಡ್ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ನಡೆಯುತ್ತಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳು ಮತ್ತು ತಾಯಂದಿರ ತರಬೇತಿ ಕೇಂದ್ರಕ್ಕೆ ಅವರು ಬುಧವಾರ ಭೇಟಿ ನೀಡಿ ಕೇಂದ್ರದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿರುವ ವಿಶೇಷ ತರಬೇತಿ ಕುರಿತು ಸಂವಾದ ನಡೆಸಿದರು.
ನಂತರ ಮಾತನಾಡಿದ ಅವರು, ಕೇಂದ್ರದ ತರಬೇತಿಯನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣ ಹಾಗೂ ವಾಕ್ ದೋಷವಿರುವ ಮಕ್ಕಳು ಹಾಗೂ ಅವರ ತಾಯಂದಿರು ಪಡೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ತರಬೇತಿ ಕೇಂದ್ರದ ಮುಖ್ಯಸ್ಥೆ ಗಾಯಿತ್ರಿ ರವೀಶ್ ಅವರಿಗೆ ಸಲಹೆ ನೀಡಿದರು.
ಜಿಲ್ಲಾಡಳಿತದಿಂದ ವಿಶೇಷ ಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮಕ್ಕಳು ಹಾಗೂ ಅವರ ತಾಯಂದಿರಿಗಾಗಿ ಮುಂದಿನ ವಾರ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕೆಂದು ಸ್ಥಳದಲ್ಲಿದ್ದ ವಿಕಲಚೇತನ ಕಲ್ಯಾಣಾಧಿಕಾರಿ ಚಿದಾನಂದ ಮೂರ್ತಿ ಅವರಿಗೆ ಸೂಚನೆ ನೀಡಿದರು.
ಹೆಲನ್ ಕೆಲರ್ ಶಾಲೆಯ ಮುಖ್ಯಸ್ಥೆ ಗಾಯಿತ್ರಿ ರವೀಶ್ ತರಬೇತಿ ಕೇಂದ್ರದ ಬಗ್ಗೆ ಮಾಹಿತಿ ನೀಡುತ್ತಾ, ಈ ತರಬೇತಿ ಕೇಂದ್ರದಲ್ಲಿ ವಾಕ್ ಶ್ರವಣದೋಷವುಳ್ಳ ೦-೪ ವರ್ಷದೊಳಗಿನ ೧೫ ಮಕ್ಕಳು ಹಾಗೂ ೫-೧೦ ವರ್ಷದೊಳಗಿನ ೧೨ ಮಕ್ಕಳು ಮತ್ತು ಅವರ ತಾಯಂದಿರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ೦-೪ ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಪ್ರತಿ ತಿಂಗಳು ೪,೦೦೦ ರೂ.ಗಳ ಗೌರವಧನ ನೀಡಲಾಗುತ್ತಿದೆ. ಈ ಗೌರವಧನವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತಿದೆ. ೫-೧೦ ವರ್ಷದೊಳಗಿನ ಮಕ್ಕಳು ಮತ್ತು ಅವರ ತಾಯಂದಿರಿಗೆ ಹೆಲನ್ ಕೆಲರ್ ಇಂಟಿಗ್ರೇಟೆಡ್ ಎಜುಕೇಷನ್ ಸೊಸೈಟಿ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತಿಗೆ ಹಾಜರಾಗುವ ಮಕ್ಕಳು ಮತ್ತು ತಾಯಂದಿರಿಗೆ ನಗರದ ಬಸ್ ನಿಲ್ದಾಣದಿಂದ ತರಬೇತಿ ಕೇಂದ್ರಕ್ಕೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ತರಬೇತಿ ಮಧ್ಯಂತರದಲ್ಲಿ ಹಾಜರಾಗಲು ಸಾಧ್ಯವಾಗದ ಮಕ್ಕಳು ಮತ್ತು ತಾಯಂದಿರಿಗೆ ಆನ್‌ಲೈನ್ ಮೂಲಕ ವಾಕ್, ಸಂವಹನೆ ಮತ್ತು ಭಾಷಾ ತರಬೇತಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಸಾಮಾನ್ಯರಂತೆ ಕಂಡು ಬರುವುದರಿಂದ ದೋಷವನ್ನು ಬಹು ಬೇಗ ಪತ್ತೆ ಹಚ್ಚಲು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಮಗು ಜನಿಸಿದ ೧ ವರ್ಷದೊಳಗಾಗಿ ವಾಕ್ ಮತ್ತು ಶ್ರವಣ ದೋಷವನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ನೀಡಿದಲ್ಲಿ ಸಾಮಾನ್ಯ ಮಕ್ಕಳಂತೆ ಅವರ ಭವಿಷ್ಯವನ್ನು ರೂಪಿಸಬಹುದು. ಇಲ್ಲದೇ ಹೋದರೆ ಜೀವನ ಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ತರಬೇತಿ ಕೇಂದ್ರದಲ್ಲಿ ೧೮ ವರ್ಷ ಮೇಲ್ಪಟ್ಟ ವಾಕ್ ಮತ್ತು ಶ್ರವಣದೋಷ, ಚಲನ-ವಲನ ತೊಂದರೆ, ಪಾರ್ಶ್ವ ದೃಷ್ಟಿ ದೋಷ, ಸೌಮ್ಯ ರೀತಿ ಮಾನಸಿಕ ಅಸ್ವಸ್ಥರಿಗೆ ಚೆಶೈರ್ ಡಿಸೇಬಲಿಟಿ ಟ್ರಸ್ಟ್ ವತಿಯಿಂದ ೧ ತಿಂಗಳ ಕಂಪ್ಯೂಟರ್, ಸಾಫ್ಟ್ ಸ್ಕಿಲ್, ಇಂಗ್ಲೀಷ್ ಭಾಷಾ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುವುದು. ಅಲ್ಲದೆ ವಿಶೇಷ ಚೇತನ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ಸೇರಿದಂತೆ ವಿವಿಧ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದ ನಂತರ ೬ ತಿಂಗಳವರೆಗೆ ಅವರ ಅನುಸರಣೆ ಮಾಡಲಾಗುವುದು ಎಂದು ತಿಳಿಸಿದರು.
ವಿಕಲಚೇತನ ಕಲ್ಯಾಣಾಧಿಕಾರಿ ಚಿದಾನಂದ ಮೂರ್ತಿ ಮಾತನಾಡಿ, ವಿಕಲಚೇತನರಿಗಾಗಿ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಮಾಹಿತಿ, ದೂರು, ಸಲಹೆ-ಸೂಚನೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: ೦೮೧೬-೨೦೦೫೦೫೩/ ೨೨೭೦೦೨೯ನ್ನು ಸಂಪರ್ಕಿಸಬೇಕೆAದು ತಿಳಿಸಿದರು.

(Visited 1 times, 1 visits today)
tumkur ಜಿಲ್ಲಾಧಿಕಾರಿ ಶುಭ ಕಲ್ಯಾಣ್
Previous Articleನರೇಗಾ ಕಾಮಗಾರಿ ಅಭಿವೃದ್ಧಿ: ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ವಿಶೇಷ ಹೆಗ್ಗಳಿಕೆ ಗಳಿಸಿದೆ: ತಹಶೀಲ್ದಾರ್
Next Article ವನ್ಯಜೀವಿ ಸಂರಕ್ಷಣೆಯ ಕುರಿತು ಉಪನ್ಯಾಸ ಕಾರ್ಯಕ್ರಮ
News Desk Benkiyabale

Related Posts

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm news

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm news

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm news
ತಾಜಾ ಸುದ್ಧಿಗಳು

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm

ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ

July 09, 2026 2:34 pm

ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್

July 09, 2026 2:32 pm
Our Youtube Channel
Our Picks

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm

ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ

July 09, 2026 2:34 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

By News Desk BenkiyabaleJuly 09, 2026 4:59 pm

ಪಾವಗಡ: ಬಡ ಜನರಿಗಾಗಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆ ಹಾಗೂ ನೆರೆಯ ರಾಜ್ಯಕ್ಕೆ ಸಾಗಿಸುತ್ತಿದ್ದ ಬೃಹತ್ ಜಾಲವನ್ನು…

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.