
ತುರುವೇಕೆರೆ: ಪದವೀಧರ ಮತದಾರರ ನೋಂದಣಿ ದಿನಾಂಕವನ್ನು ಚುನಾವಣಾ ಆಯೋಗ ವಿಸ್ತರಿಸಬೇಕೆಂದು ತಿಪಟೂರು ಸರ್ಕಾರಿ ಪ್ರ ಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ತೀ ರ್ಥಕುಮಾರ್ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ಪದವೀಧರ ಮತದಾರರನ್ನು ಮತದಾರ ಪಟ್ಟಿಗೆ ನೋಂದಾ ವಣೆ ಮಾಡಿಕೊಳ್ಳಲು ತಾಲೂಕಿನ ವಿವಿಧ ಇಲಾಖಾ ಗೆಜೆಟೆಡ್ ಆಫೀಸರ್ ಗಳನ್ನು ಈ ಹಿಂದೆ ನೇಮಕ ಮಾಡಲಾಗುತ್ತಿತ್ತು. ಆ ದರೆ ಈ ಬಾರಿ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮಾತ್ರ ನೇಮಿಸಿದೆ. ಇದರಿಂದ ಮತದಾರ ನೋಂದಣಿ ಪ್ರಕ್ರಿಯೆ ಕುಂಠಿತವಾಗಿದೆ. ತಹಸೀಲ್ದಾರ್ ಮತ್ತು ಕ್ಷೇತ್ರಶಿ ಕ್ಷಣಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಆಗದೇ ಸಮಸ್ಯೆ ಆಗಿದೆ. ಅನಿವಾರ್ಯವಾಗಿ ಹೊರಗಡೆ ಹೋದಲ್ಲಿ ನೋಂದಣಿ ಮಾಡಿಸಲು ಬರುವ ಪದವೀಧರರಿಗೆ ತೊಂದರೆಯಾಗುತ್ತಿದೆ. ಈ ತೊಂದರೆಯಿAದಾಗಿ ತಿಪಟೂರು, ತುರುವೇಕೆರೆ. ಗುಬ್ಬಿ, ಚಿಕ್ಕನಾಯ ಕನಹಳ್ಳಿ, ಕುಣಿಗಲ್ ಸೇರಿದಂತೆ ಇನ್ನಿತರ ತಾಲೂಕುಗಳಲ್ಲಿ ನೋಂದಣಿ ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು ತೀರ್ಥಕುಮಾರ್ ದೂರಿದರು.
ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗದಿರುವ ಹಿನ್ನೆಲೆಯಲ್ಲಿ ನ ೬ ಕ್ಕೆ ಅಂತ್ಯವಾಗಲಿದ್ದ ನೋಂದಣಿ ಪ್ರಕ್ರಿಯೆ ದಿನಾಂಕವನ್ನು ಮುಂದೂ ಡಬೇಕು ಅಲ್ಲದೇ ಹೆಚ್ಚುವರಿಯಾಗಿ ವಿವಿಧ ಇಲಾಖೆಗಳಲ್ಲಿ ಇರುವ ಗೆಜೆಟೆಡ್ ಅಧಿಕಾರಿಗಳಿಗೂ ನೋಂದಣಿ ಮಾಡಿಕೊಳ್ಳುವ ಅಧಿಕಾರ ವನ್ನು ನೀಡಬೇಕೆಂದು ಅವರು ಆಗ್ರಹಿಸಿದರು.
ಈ ಸಂಧರ್ಭಧಲ್ಲಿ ಟಿ.ಶಿವಾನಂದ್, ಎಸ್.ಕಂಚೀಪತಿ, ತಾಲೂಕು ಕಾಡುಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮೇನಹಳ್ಳಿ ರವಿ, ಜುಂಜೇಗೌಡ, ಕೆ.ಎಸ್.ವಿನಯ್ ಕುಮಾರ್ ಉಪಸ್ಥಿತರಿದ್ದರು.





