
ತುಮಕೂರು: ಜಿಲ್ಲಾ ಆಸ್ಪತ್ರೆಯನ್ನು ಪಿಪಿ ಮಾಧರಿಯಲ್ಲಿ ಖಾಸಗೀಕರಣ ಮಾಡುತ್ತಿರುವುದರ ವಿರುದ್ಧ ಇಂದು ಜಿಲ್ಲೆಯ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನ, ಸ್ಲಂ ಜನಾಂದೋಲನ ಕರ್ನಾಟಕ ಸಿಐಟಿಯು,ಎಐಎಂಎಸ್‌ಎಸ್, ಎಪಿಸಿಆರ್, ಬಹುಜನ ಸಮಾಜಪಾರ್ಟಿ, ತಮಟೆ ಕೂಲಿ ಕಾರ್ಮಿಕರ ಸಂಘಟನೆ ಪಾವಗಡ, ಸಫಾಯಿಕರ್ಮಚಾರಿಗಳ ಕಾವಲು ಸಮಿತಿ, ಪ್ರಾಂತರೈತ ಸಂಘ, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ, ಜನವಾದಿ ಮಹಿಳಾ ಸಂಘಟನೆ, ನೂರಾರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪ್ರತಿಭಟನೆ ಮಾಡಿ, ಖಾಸಗೀಕರಣ ಮಾಡುವ ಕುತಂತ್ರವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ನವೆಂಬರ್ ೭ ರಂದು ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಜಿಲ್ಲಾಸ್ಪತ್ರೆಯನ್ನು ಉನ್ನತೀಕರಿಸುವ ಶಂಕುಸ್ಥಾಪನೆ ಹಾಗೂ ಮಡಿಕಲ್ ಕಾಲೇಜ್, ಘೋಷಣೆಗೆ ಬರುತ್ತಿದ್ದು ತುಮಕೂರು ಜಿಲ್ಲಾಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಇದು ಬಡವರು ರೈತರು ಅಸಂಘಟಿತ ವಲಯದ ಮಹಿಳೆಯರು ಹೆಚ್ಚಾಗಿ ಆರೋಗ್ಯ ಸೇವೆಗಾಗಿ ಬಳಸಿಕೊಳ್ಳುತ್ತಿದ್ದು ಇದನ್ನು ಸರ್ಕಾರವೇ ನಡೆಸಬೇಕೆಂದು ಒತ್ತಾಯಿಸಲಾಯಿತು
ಸಾರ್ವತ್ರಿಕ ಆರೋಗ್ಯ ನೀತಿಯನ್ನು ರಾಜ್ಯ ಸರ್ಕಾರ ರೂಪಿಸ ಬೇಕು ಸಿ.ಯತಿರಾಜ್, ಹಿರಿಯ ಪರಿಸರವಾದಿ ಸಿ.ಯತಿರಾಜು ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿ ಆರೋಗ್ಯ ಎಲ್ಲೆರಿಗೂ ಉಚಿತವಾಗಿ ಗುಣ ಮಟ್ಟದ ಸೌಲಭ್ಯಗಳು ದೊರೆಯಲು ರಾಜ್ಯ ಸರ್ಕಾರ ಸಾರ್ವತ್ರಿಕ ಆರೋಗ್ಯ ನೀತಿಯನ್ನು ರೂಪಿಸಬೇಕು ಆಗ ಮಾತ್ರ ಆರೋಗ್ಯ ಮೂಲಭೂತ ಹಕ್ಕಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರತಿಪಾಧಿಸಿದರು.
ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾರ್ವತ್ರಿಕ ಆರೋಗ್ಯ ಆಂದೋಲನದ ಡಾ. ಕೆ.ಬಿ ಓಬಲೇಶ್ ರಾಜ್ಯ ಸರ್ಕಾರ ೨೦೨೪-೨೫ರ ಬಜೆಟ್ ಪ್ರಸ್ತಾವನೆಯಲ್ಲಿ ರಾಜ್ಯದ ೮ ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ ಮಾಧರಿಯಲ್ಲಿ ಅಂದರೆ ಖಾಸಗೀ ಕಂಪನಿಗಳ ಸಹಭಾಗಿತ್ವದಲ್ಲಿ ಖಾಸಗೀಕರಣ ಮಾಡಲು ಈಗಾಗಲೇ ಕ್ರಿಯಾಯೋಜನೆ ರೂಪಿಸಿದೆ ಇದರ ಭಾಗವಾಗಿ ೨೦೨೪ ರಲ್ಲಿ ಆರೋಗ್ಯ ಇಲಾಖೆಯಿಂದ ಐಡೆಕ್ ಎಂಬ ಕಂಪನಿಯ ಜೊತೆ ತುಮಕೂರು ಜಿಲ್ಲಾಸ್ಪತ್ರೆಯನ್ನು ಖಾಸಗೀಯವರಿಗೆ ವಹಿಸುವ ಪ್ರಕ್ರಿಯೆಗಳನ್ನು ಪ್ರಾರಂಭಿದೆ ಇದು ಸಂವಿಧಾನ ವಿರೋಧಿ, ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನರಿಗೆ ಇದರಿಂದ ತೊಂದರೆಯಾಗಲಿದೆ ಇದುವರೆಗೂ, ಕಡುಬಡ ಜನರು, ಹಿರಿಯ ನಾಗರೀಕರು, ಅಸಂಘಟಿತ ಮಹಿಳೆಯರು ಮತ್ತು ಮಕ್ಕಳು ಆರೋಗ್ಯ ಸೇವೆಗಾಗಿ ಬಳಸುತ್ತಿದ್ದ ಜಿಲ್ಲಾಸ್ಪತ್ರೆ ಮುಂದಿನ ದಿನಗಳಲ್ಲಿ ಖಾಸಗಿಯವರಿಗೆ ವಹಿಸುವುದು ಸರ್ಕಾರದ ಧ್ವಂದ್ವ ನಿಲುವು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಣಾ ಅಧಿಕಾರಿಯಾದ ಜಿ.ಪ್ರಭು ಮಾತನಾಡಿದರು, ನಾಳೆ ಮುಖ್ಯಮಂತ್ರಿಗಳು ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮತ್ತು ತುಮಕೂರು ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಿಸುವ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಇದು ಸರ್ಕಾರದ ಹಿಡಿತದಲ್ಲಿಯೇ ಉಳಿಸಿಕೊಳ್ಳಲಾಗುವುದು. ಜನರ ಬಗ್ಗೆ ಕಾಳಜಿಯಿರುವ ಮುಖಂಡರ ವಿಶ್ಲೇಷಣೆಯಂತೆ ಪಿಪಿಪಿ ಮಾಧರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನಾ ವರದಿ ಪ್ರಾಥಮಿಕ ಹಂತದಲ್ಲಿ ಇದರ ಬಗ್ಗೆ ಸರ್ಕಾರ ಇದುವರೆಗೂ ತೀರ್ಮಾನ ಕೈಗೊಂಡಿಲ್ಲ ನಾಳೆಯ ಕಾರ್ಯಕ್ರಮ ಜಿಲ್ಲಾಆಸ್ಪತ್ರೆಗೆ ೭೮ ವರ್ಷಗಳಾಗುತ್ತಿರುವುದರಿಂದ ಉನ್ನತೀಕರಿಸಲು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು ಇದು ಖಾಸಗೀಕರಣ ಮಾಡುವ ಉದ್ದೇಶ ಹೊಂದಿಲ್ಲ ಈ ಬಗ್ಗೆ ಕೂಲಂಕುಶವಾದ ಸಭೆಯನ್ನು ಮಾಡುವುದಾಗಿ ಹೇಳಿದರು. ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಹಜ್ಗರ್ ಬೇಗ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ,ಚಂದ್ರುಶೇಖರ್, ಡಿವೈಎಸ್‌ಪಿ ಚಂದ್ರುಶೇಖರ್ ಉಪಸ್ಥಿತರಿದ್ದರು.





