
ತುಮಕೂರು: ವಿರ್ದ್ಯಾಥಿ ಮತ್ತು ಶಿಕ್ಷಕರ ನಡುವೆ ಪರಸ್ಪರ ನಂಬಿಕೆ-ವಿಶ್ವಾಸ ಮುಖ್ಯ. ಆಗ ಮಾತ್ರ ಶೈಕ್ಷಣಿಕ ಸಾಧನೆಯ ಮೆಟ್ಟಿಲನ್ನು ಏರಲು ಸಾಧ್ಯ ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಎಂಜನಿಯರಿAಗ್ ಕಾಲೇಜಿನ ಜಿಪಿ ನೆಕ್ಸೆಸ್ ಸಭಾಂಗಣದಲ್ಲಿ ಗರುವಾರದಂದು ಏರ್ಪಡಿಸಲಾಗಿದ್ದ ಎಂಸಿಎ, ಎಂಬಿಎ ಮತ್ತು ಎಂಟೆಕ್ ಪದವಿ ಕೋರ್ಸ್ಗಳ ಪ್ರಥಮ ವರ್ಷದ ತರಗತಿಗಳ ಉದ್ಗಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಿರಂತರ ಪರಿಶ್ರಮವು ವಿರ್ದ್ಯಾಥಿಗಳ ಜೀವನಕ್ಕೆ ಅಗತ್ಯ. ಸಮಾಜದಲ್ಲಿನ ಪ್ರತಿಯೋಬ್ಬ ವ್ಯಕ್ತಿಯೊಂದಿಗೆ ನಿಮ್ಮ ಸಂಪರ್ಕ ಇರಬೇಕು. ಅವರಿಂದ ಕಲಿತು ನಿಮ್ಮ ಜ್ಞಾನವನ್ನು ವೃದಿಸಿಕೊಳ್ಳಬೇಕು ಎಂದರು.
ಸಾಮಾಜಿಕ ಸಮಸ್ಯೆಗಳಲ್ಲಿ ವಿಫಲ ಪ್ರಯತ್ನಗಳನ್ನು ಮೆಟ್ಟಿನಿಂತು ನಿರಂತರ ಕಲಿಕೆಯಡೆಗೆ ನಿಮ್ಮ ಮನಸನ್ನು ಸದೃಡಗೊಳಿಸಿಕೊಂಡು, ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಹೇಳಿದ ಸ್ವಾಮೀಜಿ, ವಿರ್ದ್ಯಾಥಿ ಮತ್ತು ಶಿಕ್ಷಕರ ನಡುವೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಮುಖ್ಯ. ಆಗ ಮಾತ್ರ ಸಾಧನೆಯ ಮೆಟ್ಟಿಲನ್ನು ಹೇರಲು ಸಾದ್ಯ್ಯವಾಗುತ್ತದೆ ಎಂದರು
ಒಳ್ಳೆಯ ಕೆಲಸಗಳು ನಮ್ಮ ಬೆಳವಣಿಗೆಗೆ ಕಾರಣವಾಗುತ್ತದೆ. ವಂಚನೆಯ ಮಾರ್ಗಗಳಿಂದ ನಾವು ಸಾಗಿದರೆ ಮುಂದೆ ನಮ್ಮ ಭವಿಷ್ಯ ತೊಂದರೆಗೆ ಸಿಲುಕುತ್ತದೆ. ಜಗತ್ತಿನಲ್ಲಿ ಅನ್ಯೆತಿಕ ಚಟುವಟಿಕೆಗಳಿಂದ ಯಶಸ್ಸನ್ನು ಕಂಡ ಮಾದರಿಗಳಿಲ್ಲ. ಅದ್ದಂರಿದ ಯಾವಾಗಲು ಧನಾತ್ಮಕವಾಗಿ ಯೋಚಿಸಿ ಎಂದು ವಿದ್ಯಾರ್ಥಿಗಳಿಗೆ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಕರೆ ನೀಡಿದರು.
ಪ್ರತಿದಿನ ಅಧ್ಯಯನ ಮಾಡುವುದು ನಮ್ಮ ಜ್ಞಾನವನ್ನು ವೃಧಿಸುವುದರ ಜೊತೆಗೆ ಸೃಜನಶೀಲತೆ ಹೆಚ್ಚುತ್ತದೆ. ಆತ್ಮ ಗೌರವವನ್ನು ಮೊದಲು ನಾವು ಪ್ರೀತಿಸಬೇಕು. ನಂತರ ನಮ್ಮನು ಎಲ್ಲರೂ ನಂಬುತ್ತಾರೆ. ಸಮಾಜದಲ್ಲಿ ವಿರ್ದ್ಯಾಥಿಗಳ ವರ್ತನೆ ಅವರನ್ನು ಗುರುತ್ತಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್ ನೈತಿಕ ಶಿಕ್ಷಣದತ್ತ ಗಮನ ಹರಿಸುವಂತೆ ವಿರ್ದ್ಯಾಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡೀನ್ ಡಾ.ರೇಣುಕಾಲತಾ, ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ ಡಿ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಸಿ ರೂಪಾ, ಎಮ್ ಟೆಕ್‌ನ ವಿವಿಧ ವಿಭಾದದ ಮುಖ್ಯಸ್ಥರಾದ ಡಾ. ರವೀರಾಮ್, ಡಾ.ಪ್ರದೀಪ್, ಡಾ.ಹೇಮಂತ್ ಕುಮಾರ್, ಡಾ.ಚಂದ್ರಶೇಖರ್, ಡಾ.ಸಹನಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.





