BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ
  • ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ
  • ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ
  • ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ
  • ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು
  • ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ
  • ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ
  • ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಂಗ ಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ
ಇತರೆ ಸುದ್ಧಿಗಳು

ರಂಗ ಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ

ಮೈಸೂರು ರಂಗಾಯಣ ರಂಗ ಉತ್ಸವಕ್ಕೆ ಚಾಲನೆ ನೀಡಿ ಕೆ. ದೊರೈರಾಜು ಅಭಿಮತ
By News Desk BenkiyabaleUpdated:November 18, 2025 1:45 pm

ತುಮಕೂರು: ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳು ಜಾಸ್ತಿಯಾಗುತ್ತಿದೆ ಎಂದು ಪ್ರಗತಿ ಪರ ಚಿಂತಕ ದೊರೈರಾಜು ಅವರು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ರಂಗಮ0ದಿರದಲ್ಲಿ ಮೈಸೂರು ರಂಗಾಯಣ ವತಿಯಿಂದ ಆಯೋಜಿಸಲಾಗಿದ್ದ ರಂಗ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೈಸೂರಿನ ರಂಗಾಯಣ ತುಮಕೂರಿನಲ್ಲಿ ಒಂದು ವಾರಗಳ ಕಾಲ ರಂಗ ಉತ್ಸವ ಆಚರಿಸುತ್ತಿರುವುದು ಖುಷಿಯ ಸಂಗತಿ. ಈ ಮೂಲಕ ರಂಗಭೂಮಿ ಹೆಚ್ಚೆಚ್ಚು ಸಕ್ರಿಯಗೊಳ್ಳುವಂತಾಗಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಜೀವನೋತ್ಸಾಹ ತುಂಬುವ0ತಹ ಕಥಾ ಹಂದರಗಳುಳ್ಳ ನಾಟಕಗಳು ಹೆಚ್ಚೆಚ್ಚು ಬರಲಿ ಎಂದ ಅವರು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಕುಟುಂಬದ ಎಲ್ಲರಿಗಾಗಿ ಈ ನಾಟಕ ಆಯೋಜಿಸುತ್ತಿರುವುದು ಸ್ವಾಗತಾರ್ಹ ಎಂದರು.
ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ ರಂಗಾಯಣ ಮೈಸೂರು ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯ ಮೂಲಕ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಮಾನಸಿಕ ಹಾಗೂ ದೈಹಿಕ ಸಹಜ ವಿಕಾಸಕ್ಕೆ ಪೂರಕವಾಗುವಂತೆ ಈ ರಂಗ ಉತ್ಸವ ಹಮ್ಮಿಕೊಂಡಿದೆ ಎಂದರು.
ನಾಟಕಗಳನ್ನು ಪ್ರದರ್ಶಿಸುವ ಮೂಲಕ ಆರೋಗ್ಯಕರ ರಂಜನೆ ಕೊಡುವುದರ ಜೊತೆಗೆ ಅವರಲ್ಲಿ ಹೊಸ ಬಗೆಯ ಸಾಂಸ್ಕೃತಿಕ ಎಚ್ಚರವನ್ನು ಮೂಡಿಸುವುದು, ಸಾಮಾಜಿಕ ಅರಿವು, ವ್ಯಕ್ತಿತ್ವ ಹಾಗೂ ಕಲ್ಪನಾ ಶಕ್ತಿಯನ್ನು ವಿಸ್ತಾರಗೊಳಿಸುವುದು ಈ ರಂಗ ಉತ್ಸವದ ಆಶಯವಾಗಿದೆ ಎಂದರು.
ಮಕ್ಕಳಿಗಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಈ ಕಾಲವು ಸೃಷ್ಟಿಸುತ್ತಿರುವ ರಮ್ಯಲೋಕ ವಿನ್ಯಾಸಗಳು ಏಕಕಾಲದಲ್ಲಿ ಕಾಲ-ದೇಶ- ಭಾಷೆಗಳ ಹಂಗಿಲ್ಲದೆ ವಿವಿಧ ಲಯಗಳಲ್ಲಿ ಮಕ್ಕಳ ಪ್ರಜ್ಞೆಯನ್ನು ಪ್ರವೇಶಿಸಿ ಅವರ ನಿಜ ಜಗತ್ತಿನ ವಾಸ್ತವವಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಂದು ಮಗುವೂ ಸಮುದಾಯದಿಂದ ಬೇರ್ಪಟ್ಟು ಪ್ರತ್ಯೇಕವಾಗುತ್ತಿರುವಂತೆ ಭಾಸವಾಗುತ್ತಿದೆ. ಮಕ್ಕಳಷ್ಟೆ ಅಲ್ಲದೆ ಯುವ ಸಮುದಾಯಗಳೂ ಕೂಡ ಆಧುನಿಕ ತಂತ್ರಜ್ಞಾನದ ಭಾಗವಾಗುತ್ತಿರುವ ಕಾಲವನ್ನು ಸರಿಯಾಗಿ ಗ್ರಹಿಸಿ ಅರಿವಾಗಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ ಎಂದರು.
ಒ0ದು ವಾರಗಳ ಕಾಲ ನಡೆಯುವ ಈ ಉತ್ಸವದಲ್ಲಿ ೩ ಸಾವಿರ ಮಕ್ಕಳು ನಾಟಕ ನೋಡಲಿದ್ದಾರೆ. ಕೊನೆಯ ಎರಡು ದಿವಸ ಸಾರ್ವಜನಿಕ ಪ್ರದರ್ಶನಗಳು ಇರಲಿವೆ ಎಂದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಮಾತನಾಡಿ ಮೈಸೂರು ರಂಗಾಯಣ ತುಮಕೂರಿನಲ್ಲಿ ರಂಗ ಉತ್ಸವದ ಮೂಲಕ ಹೊಸ ಅಭಿಯಾನಕ್ಕೆ ಕಾರಣೀಭೂತವಾಗಿದೆ. ಈ ಹಿಂದೆ ಕೂಡ ಈ ನಾಟಕ ತುಮಕೂರಿನಲ್ಲಿ ಪ್ರದರ್ಶಿಸಲಾಗಿತ್ತು. ಪೋಷಕರಿಗೆ ಹಾಗೂ ಮಕ್ಕಳಿಗೆ ಉತ್ತಮ ಸಂದೇಶ ನೀಡುವ ಕಥಾ ಹಂದರ ಈ ನಾಟಕದಲ್ಲಿದೆ. ಹೆಚ್ಚೆಚ್ಚು ಮಕ್ಕಳು ಹಾಗೂ ಪೋಷಕರು ಈ ನಾಟಕ ನೋಡುವಂತಾಗಲಿ ಎಂದರು.
ಡಿಡಿಪಿಐ ರಘುಚಂದ್ರ ಮಾತನಾಡಿ ನಾಟಕ ಕಲೆಗಳು ಸದಾ ಜೀವಂತವಾಗಿರುತ್ತದೆ. ಈಗ ಮೈಸೂರು ರಂಗಾಯಣ ಮಕ್ಕಳು ಹಾಗೂ ಪೋಷಕರನ್ನು ಗುರಿಯಾಗಿಸಿಕೊಂಡು ಮೈ ಫ್ಯಾಮಿಲಿ ನಾಟಕ ಪ್ರದರ್ಶಿಸುತ್ತಿರುವುದು ಸಮಯೋಚಿತವಾಗಿದೆ ಎಂದು ರಂಗ ಉತ್ಸವಕ್ಕೆ ಶುಭ ಕೋರಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ಮೈಸೂರು ರಂಗಾಯಣ ರಂಗ ಉತ್ಸವ ತುಮಕೂರು ಜಿಲ್ಲೆಯಲ್ಲಿ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಇಡೀ ರಾಜ್ಯದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮಾತನಾಡಿದರು. ಮೈಸೂರು ರಂಗಾಯಣ ಉಪನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಸ್ವಾಗತಿಸಿದರು.ರಂಗ ಉತ್ಸವದ ಸಂಚಾಲಕ ಯೋಗಾನಂದ ಅರಸೀಕೆರೆ ನಿರೂಪಿಸಿದರು. ವೇದಿಕೆಯಲ್ಲಿ ಸುನೀಲಾ ಮತ್ತಿತರರು ಇದ್ದರು.

(Visited 1 times, 1 visits today)
Previous Articleಪ್ರತಿಯೋಬ್ಬರು ಕನ್ನಡ ಭಾಷಾ ಪ್ರೇಮ ಬೆಳೆಸಿಕೊಳ್ಳಿ
Next Article ರಾಜಕಾರಣ, ಮಾಧ್ಯಮ ಸಮಾಜದ ಎರಡು ಕಣ್ಣುಗಳಂತೆ
News Desk Benkiyabale

Related Posts

ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ

August 25, 2026 3:57 pm news

ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ

August 25, 2026 3:56 pm news

ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ

August 25, 2026 3:51 pm news
ತಾಜಾ ಸುದ್ಧಿಗಳು
news

ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ

August 25, 2026 3:57 pm
news

ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ

August 25, 2026 3:56 pm
news

ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ

August 25, 2026 3:51 pm
news

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

August 25, 2026 3:49 pm
news

ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು

August 25, 2026 3:47 pm
news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm
Our Youtube Channel
Our Picks

ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ

August 25, 2026 3:57 pm

ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ

August 25, 2026 3:56 pm

ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ

August 25, 2026 3:51 pm

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

August 25, 2026 3:49 pm

ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು

August 25, 2026 3:47 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ

By News Desk BenkiyabaleAugust 25, 2026 3:57 pm

ಕೊರಟಗೆರೆ: ವಿಧಾನ ಸಭಾ ಕ್ಷೇತ್ರದ ಎಲ್ಲಾ ನಾಗರೀಕರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳುವಂತೆ…

ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ

August 25, 2026 3:56 pm

ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ

August 25, 2026 3:51 pm

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

August 25, 2026 3:49 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.