BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ
  • ೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ
  • ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು
  • ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ
  • ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ
  • ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್
  • ಬೂತ್ ಏಜೆಂಟ್ ನೇಮಿಸಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸೂಚನೆ
  • ಮೊಟ್ಟೆ ದರವನ್ನು ಪರಿಷ್ಕರಿಸುವಂತೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ
ಇತರೆ ಸುದ್ಧಿಗಳು

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ

By News Desk BenkiyabaleUpdated:November 18, 2025 3:51 pm

ತುಮಕೂರು: ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ ) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಶೋಕ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ತೀವ್ರವಾಗಿ ಖಂಡಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಭಾರತದ ಇತಿಹಾಸದಲ್ಲಿ ಶತ ಶತಮಾನಗಳಿಂದಲೂ ದಬ್ಬಾಳಿಕೆ,  ಶೋಷಣೆಗಳಿಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯದಿಂದ ಮುಕ್ತವಾಗಿಲ್ಲ. ಬದಲಾಗಿ ಇಂದಿಗೂ ಸಹ ಅವುಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಗಾಗಿ ಗೆದ್ದಿದೆ ಎಂಬುದು ಸುಳ್ಳು. ಚುನಾವಣೆಗೆ ೩೦ ದಿನಕ್ಕಿಂತ ಮುಂಚೆ ಸಾರ್ವಜನಿಕರ ತೆರಿಗೆ ಹಣವನ್ನು ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದಿದೆ ಎಂದು ದೂರಿದರು.
ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಿ ಬಿಜೆಪಿ ಗೆದ್ದಿದೆ ಎಂದು ಅವರು ಆರೋಪಿಸಿದ ಅವರು, ಅಭೂತಪೂರ್ವವಾಗಿ ಗೆದ್ದಿದೆ ಎಂದು ಬೀಗುತ್ತಿರುವ ಕೇಂದ್ರ ಸರ್ಕಾರದ ನಡೆ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಕಾನೂನಿನ ವಿರೋಧಿ ಎಂದರು.
ಕರ್ನಾಟಕದಲ್ಲೂ ಸಹ ರೈತರ ಅಪ್ಪಣೆಯಿಲ್ಲದೆ ದೌರ್ಜನ್ಯದಿಂದ ಭೂಸ್ವಾಧೀನ ಮಾಡಲಾಗುತ್ತಿದೆ. ಇದು ರೈತ ವಿರೋಧಿ ಎಂದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರೈತರ ಒಪ್ಪಿಗೆ ಪಡೆದು ಭೂ ಸ್ವಾಧೀನ ಮಾಡಬೇಕು. ಬಲವಂತದಿ0ದ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ವಿರೋಧಿಸುತ್ತದೆ ಎಂದರು.
ನಮ್ಮ ನಾಡಿನ ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳಿಗೆ ಪ್ರಗತಿ, ವಿರೋಧಿಯಾದ ಶ್ರೇಣಿಕೃತ ಜಾತಿ ವ್ಯವಸ್ಥೆ, ಆಚರಣೆಗೆ ಕೋಮುವಾದಿ ಹಾಗೂ ಮತೀಯ ಮೂಲಭೂತವಾದಿ, ಫ್ಯಾಸಿಸ್ಟ್ ನೀತಿಗಳೇ ಮುಖ್ಯ ಕಾರಣ. ಇವುಗಳ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಜಾತಿ ವಿನಾಶ ಮಾಡುವ ಮತ್ತು ಸಮ ಸಮಾಜ ನಿರ್ಮಾಣದ ಮೂಲಕ ಎಲ್ಲಾ ದೌರ್ಜನ್ಯಗಳನ್ನು ತಡೆಯಲು ಮುಂದಾಗಬೇಕಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮಂಡಳಿ ಸದಸ್ಯರಾದ ಕಂಬೇಗೌಡ, ಜಿಲ್ಲಾ ಖಜಾಂಚಿ ಅಶ್ವಥನಾರಾಯಣ್, ಜಿಲ್ಲಾ ಕಾರ್ಯದರ್ಶಿ, ಮಂಡಳಿ ಸದಸ್ಯ ರಾಜೇಶ್, ಚಾಮುಂಡಿ ಡೆಕಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಾಫರ್, ಜಿಲ್ಲಾ ಮಂಡಳಿ ಸದಸ್ಯರಾದ ನಾಗರಾಜ್, ಹಾಗಲವಾಡಿ ನಾಗರಾಜ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

(Visited 1 times, 1 visits today)
Previous Articleವ್ಯಕ್ತಿ ಮತ್ತು ಘಟನೆಗಳಿಂದ ಅನೇಕರು ಸ್ಪೂರ್ತಿ ಪಡೆದುಕೊಳ್ಳುತ್ತಾರೆ
Next Article ಗ್ರಾಮ ಸ್ವರಾಜ್ ಯಶಸ್ವಿಯಾಗಲು ಉತ್ತಮ ಸುಸಜ್ಜಿತ ಕಟ್ಟಡ ಅಗತ್ಯ: ಚಿದಾನಂದ್ ಎಂ.ಗೌಡ
News Desk Benkiyabale

Related Posts

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm news

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm news

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm news
ತಾಜಾ ಸುದ್ಧಿಗಳು

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm

ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ

July 09, 2026 2:34 pm

ಮೌಢ್ಯ ಬಿಟ್ಟು ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಹುಲಿಕಲ್ ನಟರಾಜ್

July 09, 2026 2:32 pm
Our Youtube Channel
Our Picks

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

July 09, 2026 4:59 pm

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm

ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ ತುಮಕೂರು ಜಿಲ್ಲೆಗೆ ೧೯ ಪದಕ

July 09, 2026 2:34 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ

By News Desk BenkiyabaleJuly 09, 2026 4:59 pm

ಪಾವಗಡ: ಬಡ ಜನರಿಗಾಗಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆ ಹಾಗೂ ನೆರೆಯ ರಾಜ್ಯಕ್ಕೆ ಸಾಗಿಸುತ್ತಿದ್ದ ಬೃಹತ್ ಜಾಲವನ್ನು…

೬೦ ಅಡಿ ಆಳದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

July 09, 2026 4:35 pm

ಕಾರೆಹಳ್ಳಿಯಲ್ಲಿ ಸಿಸ್ಟನ್ ನೀರು ಚರಂಡಿ ಪಾಲು

July 09, 2026 2:53 pm

ಪಂಚಾಯತ್ ರಾಜ್ಯ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಉಪ ಮುಖ್ಯಮಂತ್ರಿ

July 09, 2026 2:37 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.