
ತುಮಕೂರು: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಪ್ರತಿನಿತ್ಯ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಹೇ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆವರಣದಲ್ಲಿ ಸೋಆಯೋ ಜಿಸಿದ್ದಂತಹ ಸಾಹೇ ವಿಶ್ವವಿದ್ಯಾಲಯದ ಇಂಟರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಮಾತನಾಡಿ ಕ್ರೀಡೆಯಲ್ಲಿ ಸೋಲುಗೆಲುವ ಮುಖ್ಯವಲ್ಲ ಕ್ರೀಡೆಯಲ್ಲಿ ಪಾಲ್ಗೊ ಳ್ಳುವುದು ಮುಖ್ಯವಾದ್ದು, ಕ್ರೀಡಾಕೂಟಗಳು ಸೋಲು ಗೆಲುವಿನ ಅನುಭವವನ್ನು ನೀಡುತ್ತದೆ. ಗೆಲುವು ಮತ್ತು ಸೋಲು ಸಾಧನೆಯ ಹಾದಿಯಲ್ಲಿ ಮೆಟ್ಟಿಲುಗಳಿದ್ದಂತೆ ಹಾಗಾಗಿ ಸೋಲು ಗೆಲುವುಗ ಳೆರಡನ್ನು ಸಮಾ ನವಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಕ್ರೀಡಾ ಪಟುಗಳಿಗೆ ಕಿವಿಮಾತು ಹೇಳಿದರು.
ಪಂದ್ಯಾವಳಿಯಲ್ಲಿ ಸಾಹೇ ವಿಶ್ವ ವಿದ್ಯಾಲಯದ ಕುಲಸಚಿವರಾದ ಡಾ. ಅಶೋಕ್ ಮೆಹತಾ, ಪರೀ ಕ್ಷಾ ನಿಯಂತ್ರಕರಾದ ಡಾ. ಜಿ. ಗುರುಶಂಕರ್, ಡೀನ್ ಡಾ. ಎಸ್ ರೇಣುಕಾಲತಾ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ರುದ್ರೇಶ್ ಕೆ.ಆರ್, ಸಾಹೇ ವಿವಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿಕುಮಾರ್, ಸಾಹೇ ವಿವಿ ಮತ್ತು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಎಲ್ಲಾ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಎಸ್‌ಎಸ್‌ಐಟಿ ತಂಡಕ್ಕೆ ಗೆಲುವು: ಸಾಹೇ ವಿಶ್ವವಿದ್ಯಾನಿಲಯದ ಇಂಟರ್ ಕಾಲೇಜು ವಾಲಿ ಬಾಲ್ ಪಂದ್ಯಾವಳಿಯಲ್ಲಿ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಟಿ.ಬೇಗೂರು ಮೆಡಿಕಲ್ ಕಾಲೇಜು, ಪ್ಯಾರಾಮೆಡಿಕಲ್ ಕಾಲೇಜು, ಅಲೈಡ್ ಸೈನ್ಸ್ ಕಾಲೇಜು, ಹಾಗೂ ಶ್ರೀ ಸಿದ್ದಾರ್ಥ ಇಂಜಿನಿಯರಿ0ಗ್ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದ ಹಣಾಹಣಿಯಲ್ಲಿ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ತಂಡವನ್ನು ೨-೧ ಅಂತರದಲ್ಲಿ ಮಣಿಸಿದ ಎಸ್ ಎಸ್ ಐಟಿ ಕಾಲೇಜು ತಂಡ ಸಾಹೇ ಇಂಟರ್ ಕೊಲಿಜಿಯೇಟ್ ವಾಲೀಬಾಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.





