
ತುಮಕೂರಿನ: ಸಿದ್ದಾರ್ಥ ಪ್ರಥಮ ದರ್ಜೆ ವಾಣಿಜ್ಯ ವಿಭಾಗದ ವತಿ ಯಿಂದ ಆಯೋಜಿಸಲಾದ ಯುವ ಸಿದ್ದಾರ್ಥ-೨೫ ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಂತರ ತುಮಕೂರು ಜಿಲ್ಲೆಯ ಪಿಯು ಉಪ ನಿರ್ದೇಶಕರಾದ ಡಾ. ಬಾಲ ಗುರುಮೂರ್ತಿ ರವರು ವಾಣಿಜ್ಯ ವಿದ್ಯಾರ್ಥಿ ಗಳಿಗೆ ಶಿಕ್ಷಣದ ಗುಣಮಟ್ಟದ ಜೊತೆ ಕೌಶಲ್ಯ ಜ್ಞಾನ ಹೆಚ್ಚಿಸಲು ಉತ್ತಮ ವೇದಿಕೆಯಾಗಿದ್ದು ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಬಿ. ನಂಜು0ಡಪ್ಪ ರವರು ಮಾತನಾಡುತ್ತಾ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ಸದಾ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಿ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ಸದಾ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಪಿಯು ಉಪ ನಿರ್ದೇ ಶಕರಾದ ಡಾ. ಬಾಲ ಗುರುಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಹೇಮಲತಾ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಬಿ ನಂಜು0ಡಪ್ಪ, ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಹಾಯ ಆಡಳಿತಾಧಿಕಾರಿ ಕೆ.ಎಚ್ ಕಲಂದರ್ ಪಾಷಾ, ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಕೆ ಎಸ್ ಸಿದ್ದರಾಜು, ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಭಾನುಪ್ರಕಾಶ್, ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಆಯೋಜಕರಾದ ವಿನಯ್ ಕುಮಾರ್ ಎಂ, ಎಂ.ಕಾ0 ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಮತ್ತೊಬ್ಬ ಆಯೋಜಕರಾದ ಸೈಯದ್ ಬಾಬು ಹೆಚ್ .ಬಿ ,ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಂಗಸ್ವಾಮಿ ಎಂ.ಆರ್, ಮತ್ತು ವಿವಿಧ ಪಿಯು ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಎಲ್ಲಾ ವಿಭಾಗದ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಸುಮಾರು ೫೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದರು ‘ಯುವ ಸಿದ್ದಾರ್ಥ-೨೫’ ರ ಚಾಂಪಿಯನ್ ಶಿಪನ್ನು ಸಿದ್ದಾರ್ಥ ಪದವಿ ಪೂರ್ವ ಕಾಲೇಜು ಸರಸ್ವರೀಪುರಂ ಪಡೆದುಕೊಂಡಿತು.





