
ತುಮಕೂರು: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಅಭಿವೃದ್ಧಿ ಕ್ಷೇತ್ರದಲ್ಲಿನ ಸಾಧನೆಯನ್ನ ಗುರುತಿಸಿ ವ್ಯಕ್ತಿ ವಿಭಾಗದಲ್ಲಿ ನೀಡಲಾಗುವ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಜಿಲ್ಲೆಯ ಕೊರಟಗೆರೆ ತಾಲೂಕಿನ ತೀತಾ ಗ್ರಾಮದ ಡಾ. ವಸಂತ ಮುರಳಿ ಅವರಿಗೆ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕೆಪಿಸಿಸಿ ಮಹಿಳಾ ಘಟಕಕಾರ್ಯಕರ್ತೆ, ಅಖಿಲ ಭಾರತ ವಿಶ್ವಕರ್ಮ ರಾಜ್ಯ ಮಹಿಳಾ ಅಧ್ಯಕ್ಷರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿವಿಧ ಸಾಧನೆಗೈದು ಕೊರಟಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು ೧೨೦೦ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳನ್ನ ರಚಿಸಿ ಸರ್ಕಾರದಿಂದ ಸಾಲ ಸೌಲಭ್ಯ ಮತ್ತು ಅನುದಾನಗಳನ್ನ ಕೊಡಿಸಲು ಮುಂದಾದ ವಸಂತ ಮುರುಳಿಯವರ ಅನುಪಮಾ ಸಾಧನೆಯನ್ನ ಗುರುರ್ತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯಮಟ್ಟದ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ತುಮಕೂರು ನಗರದ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಕಚೇರಿಯಲ್ಲಿ ಸಚಿವರು ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳಾದ ಡಾ.ಕೆ. ನಾಗಣ್ಣ ಅವರಿಗೆ ಅಭಿನಂದನೆ ಸಲ್ಲಿಸಿ, ನಂತರ ಮಾತನಾಡಿದ ವಸಂತ ಮುರಳಿ ಅವರು ಮಾತನಾಡಿ ನಾನು ಮಾಡಿದ ಸಾಮಾಜಿಕ ಸಾಧನೆಯನ್ನು ಗುರುತಿಸಿ ಸರ್ಕಾರ ನನಗೆ ರಾಜ್ಯ ಮಟ್ಟದ ಕಿತ್ತೂರಾಣಿ ಚೆನ್ನಮ್ಮ ಮಹಿಳಾ ಪ್ರಶಸ್ತಿಯನ್ನು ನೀಡಿದೆ ಇದರಿಂದ ನನಗೆ ಇನ್ನೂ ಹೆಚ್ಚು ಜವಾಬ್ದಾರಿ ಹೆಚ್ಚಾಗಿದ್ದು ಮಹಿಳಾ ಕ್ಷೇತ್ರದಲ್ಲಿನ ಮಹಿಳೆಯರನ್ನ ಗುರುತಿಸಿ ಅವರನ್ನ ಸ್ವಾವಲಂಬಿಗಳನ್ನಾಗಿ ಮಾಡಿ ಮಹಿಳೆರಿಗಾಗಿ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಬೇಕಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಡಾ. ಜಿ ಪರಮೇಶ್ವರ್ ಅವರು ದೇಶದಲ್ಲಿ ಇರುವ ವಿಶೇಷ ಮಹಿಳಾ ಮೀಸಲಾತಿಯನ್ನು ಉಪಯೋಗಿಸಿಕೊಂಡು ಡಿಸಿ, ಸಿಇಓ, ಆಯುಕ್ತರು ತಹಶೀ ಲ್ದಾರ್,ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನಾಗಿ ಅಭಿವೃದ್ದಿಯ ದೃಷ್ಠಿಯಿಂದ ಮಹಿಳೆಯರಿಗೆ ಹೆಚ್ಚಿನ ಅಧಿಕಾರವನ್ನು ದೊರಕಿಸಿ ಕೊಟ್ಟಿದ್ದಾರೆ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಕೂಡಾ ಆಗಿಯೇ ಅಚ್ಚುಕಟ್ಟಾದ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದ್ದು ನಾನು ಮಾಡಿರುವ ಕಾರ್ಯವನ್ನು ಗುರುತಿಸಿ ರಾಜ್ಯ ಮಟ್ಟದ ಮಹಿಳಾ ಪ್ರಶಸ್ತಿಯನ್ನು ದೊರಕಿಸಿಕೊಡಲು ಕಾರಣರಾದ ಪರಮೇಶ್ವರ್ ಅವರಿಗೆ ವಿಶೇಷ ಧನ್ಯವಾದಗಳನ್ನ ಸಮರ್ಪಿ ಸುತ್ತೇನೆ ಎಂದರು.
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳಾದ ಡಾ.ಕೆ ನಾಗಣ್ಣ ಅವರು ಮಾತನಾಡಿ ತುಮಕೂರು ಜಿಲ್ಲೆಗೆ ಮಹಿಳಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಸಂತ ಮುರಳಿಯವರಿಗೆ ರಾಜ್ಯ ಮಟ್ಟದ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿ ಬಂದಿರುವುದು ಸ್ವಾಗತಾರ್ಹವಾಗಿದ್ದು ಅವರಿಗೆ ಸಚಿವರ ಪರವಾಗಿ ವಿಶೇಷ ಅಭಿನಂದನೆ ತಿಳಿಸುತ್ತೇನೆ, ಡಾ. ಬಿ ಆರ್ ಅಂಬೇಡ್ಕರ್ ಅವರ ಕನಸಿನಂತೆ ಡಾ ಜಿ ಪರಮೇಶ್ವರ್ ಅವರು ಸಮ ಸಮಾಜದ ಚಿಂತನೆ ಹೊಂದಿ ಮಹಿಳೆಯರ ಅಭಿವೃದ್ಧಿಗಾಗಿ ಮಹಿಳೆಯರಿಗೆ ಹೆಚ್ಚು ಒತ್ತು ಕೊಟ್ಟು ಸ್ವಾವಲಂಬಿಯ ಜೀವನ ನಡೆಸಲು ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಈ ನಿಟ್ಟಿನಲ್ಲಿ ಕೊರಟಗೆರೆ ಕ್ಷೇತ್ರದ ಮಹಿಳಾ ಸಾಧಕಿಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು.





