BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
  • ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ
  • ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ
  • ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ
  • ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು
  • ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೆಂಪೇಗೌಡರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿ
news

ಕೆಂಪೇಗೌಡರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿ

ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
By News Desk BenkiyabaleUpdated:June 27, 2026 5:27 pm

ತುಮಕೂರು: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಅವರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಿ.ಸುರೇಶ್‌ಗೌಡ ತಿಳಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ. ಜಿಲ್ಲಾ ಕಸಾಪ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ದಕ್ಷ ಆಡಳಿತಗಾರರಾಗಿ ಅವರು ಮಾಡಿದ ಅಭಿವೃದ್ದಿ ಇಂದು ಬೆಂಗಳೂರನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಕೆಂಪೇಗೌಡರನ್ನು ಇಂದು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ. ಆದರೆ ಅವರು ಅಂದು ನೀಡಿದ ಯೋಜನೆಗಳನ್ನು ಹೇಗೆ ನಮ್ಮ ಜಿಲ್ಲೆಯ ಬೆಳವಣಿಗೆಗೆ ಬಳಕೆ ಮಾಡಬಹುದು ಎಂಬುದನ್ನು ಇಂದಿನ ಯುವಜನರು ಚಿಂತಿಸಬೇಕಿದೆ. ಅವರು ದೂರದೃಷ್ಟಿಯ ಯೋಜನೆಗಳು, ಅವುಗಳ ಉಪಯೋಗ ಕುರಿತು ಪುಸ್ತಕ ಮುದ್ರಿಸಿ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು.
ಇಂದು ಸಾಂಕೇತಿಕವಾಗಿ ಜಿಲ್ಲಾಡಳಿತ ಜಯಂತಿಯನ್ನು ಆಚರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬಿಜಿಎಸ್ ವೃತ್ತದಲ್ಲಿ ಅವರ ನಾಮಫಲಕ ಆನಾವರಣ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ತಹಶೀಲ್ದಾರ್ ರಾಜೇಶ್ವರಿ ಮಾತನಾಡಿ, ಕೆಂಪೇಗೌಡ ಅವರು ಒಂದು ಸಮುದಾಯಕ್ಕೆ ಸಿಮೀತರಾದವರಲ್ಲ, ಅವರು ವಿಶ್ವಮಾನವರು. ಎಲ್ಲ ವರ್ಗದ ಜನರು ಅವರ ಕುಲ ಕಸುಬಿನಿಂದ ಬಂದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಒದಗಿಸಿ, ಜನರ ಅರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕಾರಣರಾಗಿದ್ದರು. ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಜನರ ಬದುಕಿಗೆ ಆಸರೆ ಒದಗಿಸಿದ್ದರು. ಇಂದಿಗೂ ಬೆಂಗಳೂರು ವಿಶ್ವದಲ್ಲಿಯೇ ಗಮನ ಸೆಳೆಯುವ ನಗರವಾಗಿದ್ದರೆ ಅದಕ್ಕೆ ಕೆಂಪೇಗೌಡರ ದೂರದೃಷ್ಠಿಯೇ ಕಾರಣ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಜನರಿಗೆ ಕುಲಕಸುಬಿನ ಆಧಾರದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟು, ಗಡಿಗಳನ್ನು ನಿರ್ಮಿಸಿ, ನಗರದ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಿದ ಕೆಂಪೇಗೌಡರು, ವಿಜಯನಗರದ ಅರಸರ ಒಪ್ಪಿಗೆ ಪಡೆದು ಸ್ವಂತ ನಾಣ್ಯ ಚಲಾವಣೆಗೆ ತಂದು, ನಾಡಿನ ಬೆಳವಣಿಗೆಗೆ ಪೂರಕ ವಾತಾವರಣದ ಸೃಷ್ಟಿ ಮಾಡಿದ್ದರು. ಇಂತಹವರ ಜಯಂತಿಯನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ಆಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.
ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ, ೧೫೩೨ ರಿಂದ ೧೫೯೭ ರವರೆಗೆ ಸುಮಾರು ೫೫ ವರ್ಷಗಳ ಕಾಲ ಯಲಹಂಕ ನಾಡಪ್ರಭುಗಳಾಗಿ ಆಳ್ವಿಕೆ ನಡೆಸಿದ ಕೆಂಪೇಗೌಡರು ವಿಜಯನಗರ ಅರಸ ಅಚ್ಚುತರಾಯನ ಅನುಮತಿ ಪಡೆದು ಕೋಟೆ ನಿರ್ಮಿಸಿ ಅಧಿಕಾರ ನಡೆಸಿದರು. ಕುಲಕಸುಬು ಆಧಾರಿತ ಪೇಟೆಗಳನ್ನು ನಿರ್ಮಿಸಿ, ಜನರು ಅರ್ಥಿಕವಾಗಿ ಅಭಿವೃದ್ದಿ ಹೊಂದಲು ಅಗತ್ಯ ವಾತಾವರಣ ಸೃಷ್ಟಿಸಿದರು. ಕೃಷಿ ಮತ್ತು ನೀರಾವರಿಗೆ ಒತ್ತು ನೀಡಿದ ಕೆಂಪೇಗೌಡರು, ಬೆಂಗಳೂರಿನಲ್ಲಿ ೫೪೭ ಕೆರೆಗಳು, ಒಂದು ಸಾವಿರಕ್ಕೂ ಹೆಚ್ಚು ಕುಂಟೆಗಳನ್ನು ನಿರ್ಮಿಸಿ, ಜನ-ಜಾನುವಾರು ಹಾಗೂ ಕೃಷಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದರು. ಅವರ ಆಡಳಿತ ಮಾಗಡಿ, ಶಿವನಸಮುದ್ರ, ಕೊರಟಗೆರೆ, ಕುಣಿಗಲ್ ವರೆಗೆ ವಿಸ್ತರಣೆಗೊಂಡಿತ್ತು. ಕೆಂಪಾಪುರ ಮುಂತಾದ ಕಡೆಗಳಲ್ಲಿ ಇರುವ ಹಿರಿಯರ ಸಮಾಧಿಗಳನ್ನು ಸಂರಕ್ಷಿಸಿ, ಸ್ಮಾರಕವಾಗಿಸುವ ಕೆಲಸ ಆಗಬೇಕು ಎಂದರು.
ಸಮಾರAಭದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ಹಿರಿಯರಾದ ಲಕ್ಕಪ್ಪಗೌಡ, ಲಲಿತಾ ಮಲ್ಲಪ್ಪ, ನರಸೇಗೌಡ, ಮನೋಹರಗೌಡ, ಸಿದ್ದರಾಜೇಗೌಡ, ಸಿದ್ದಲಿಂಗೇಗೌಡ, ಅಶ್ವಥಗೌಡ, ಡಿಡಿಪಿಐ ರಾಧಾ, ರೇವಣ್ಣ, ರಾಮಮೂರ್ತಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
jothi ganesh karnataka kempegowda jayanthi nadaprabhu kempegowda Suresh gowda tumkur news
Previous Articleಕೊಲೆ ಆರೋಪಿಗಳು ಕೇರಳದಲ್ಲಿ ಅರೆಸ್ಟ್
Next Article ಎಸ್‌ಐಆರ್ ಬಗ್ಗೆ ವಿರೋಧ ಪಕ್ಷದ ಆರೋಪಗಳು ಸರಿಯಲ್ಲ
News Desk Benkiyabale

Related Posts

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm news

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm news

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm news
ತಾಜಾ ಸುದ್ಧಿಗಳು
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
news

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm
news

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm
news

ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ

August 11, 2026 4:49 pm
news

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm
news

ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ

August 11, 2026 4:44 pm
Our Youtube Channel
Our Picks

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm

ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ

August 11, 2026 4:49 pm

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

By News Desk BenkiyabaleAugust 11, 2026 4:53 pm

ತುಮಕೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹತ್ಯೆಗೀಡಾದ ಶ್ರೀ ಪರೆಂಬದೂರಿನಿAದ ಹೊರಟಿರುವ ರಾಜೀವ್ ಸದ್ಬಾವನ ರಥಯಾತ್ರೆ ತುಮಕೂರು…

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm

ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ

August 11, 2026 4:49 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.