BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ
  • ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ
  • ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ
  • ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ
  • ತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಜಗತ್ತಿಗೆ ಮಾದರಿ
  • ಬದುಕಿನ ಜಟಕಬಂಡಿಗೆ ಡಿವಿಜಿ ಕಗ್ಗವೇ ದಾರಿದೀಪ
  • ಏ4: ಸಚಿವರ ನೇತೃತ್ವದಲ್ಲಿ “ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ”
  • ಡಾ. ವಸಂತ ಮುರಳಿ ಅವರಿಗೆೆ ಒಲಿದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ
ಇತರೆ ಸುದ್ಧಿಗಳು

ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ

By News Desk BenkiyabaleUpdated:March 26, 2026 5:20 pm

ತುಮಕೂರು: ಯಶಸ್ಸು ಎಂಬುದು ಬದುಕಿನ ಸಾರ್ಥಕತೆಯ ಮೊದಲ ಮೆಟ್ಟಿಲು. ಮಕ್ಕಳಿಗೆ ಹಸಿವು, ಬಡತನ ಮತ್ತು ಅವಮಾನದ ಅರಿವಿದ್ದಾಗ ಮಾತ್ರ ಅವರಿಗೆ ಸಾಧನೆಯ ಹಾದಿಯಲ್ಲಿ ದೃಢವಾದ ಪ್ರೇರಣೆ ಲಭ್ಯವಾಗುತ್ತದೆ ಎಂದು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮ ಶೇಖರ್ ಅವರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಮಾ. ೨೬ರ ಗುರುವಾರದಂದು ಆಯೋಜಿಸಲಾಗಿದ್ದ ೨೦೨೫-೨೬ನೇ ಸಾಲಿನ ಪ್ರೇರಣಾ ಉಪನ್ಯಾಸ – ೦೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಶಸ್ಸಿನ ಹಾದಿಯ ಬಗ್ಗೆ ವಿವರಿಸಿದ ಅವರು, ಯಶಸ್ಸು ಎಂಬುದು ನಮ್ಮ ಆಸೆ ಮತ್ತು ಆಕಾಂಕ್ಷೆಗಳಿಗೆ ಸಿಗುವ ತೃಪ್ತ ಭಾವನೆ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ, ಕಠಿಣ ಶ್ರಮ, ಏಕಾಗ್ರತೆ ಮತ್ತು ಛಲದಿಂದ ಮಾತ್ರ ಇದನ್ನು ಪಡೆಯಲು ಸಾಧ್ಯ. ಪೋಷಕರ ಕನಸುಗಳೊಂದಿಗೆ ವಿದ್ಯಾರ್ಥಿಗಳ ಕನಸುಗಳು ಸಮೀಕರಣಗೊಂಡಾಗ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಶಿಷ್ಯರು ತಮ್ಮ ಗುರುಗಳನ್ನು ಮೀರಿಸುವಂತಹ ಸ್ಥಾನಕ್ಕೇರಬೇಕು ಎಂದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನದ ಹಾದಿಯು ವಿದ್ಯಾರ್ಥಿಗಳಿಗೆ ಮಾದರಿಯಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಮಹಾರಾಜ್ ಅವರು ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮ ಅತ್ಯಂತ ಅವಶ್ಯಕ. ಗುರಿ ಇಲ್ಲದ ಜೀವನ ವ್ಯರ್ಥ. ಬದುಕು ಅಂದುಕೊ0ಡಷ್ಟು ಸುಲಭವಲ್ಲ, ಹಾಗಾಗಿ ಮನುಷ್ಯ ಮನುಷ್ಯನಾಗಿಯೇ ಬದುಕುವುದು ಮೊದಲ ಗುರಿಯಾಗಲಿ. ಪ್ರಾಣಿಗಳಂತೆ ಶಿಸ್ತಿಲ್ಲದ ಬದುಕನ್ನು ಬಿಟ್ಟು ಪ್ರಾಮಾಣಿಕತೆಯನ್ನು ಜೀವ ನದ ಆಧಾರವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತುಮಕೂರು ವಿವಿಯ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ. ಪಿ. ಪರಮಶಿವಯ್ಯ ಮಾತನಾಡಿ, ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದೆ. ಯುವಜನತೆ ಸಮಯವನ್ನು ವ್ಯರ್ಥ ಮಾಡದೆ, ಕಠಿಣ ಶ್ರಮ ಮತ್ತು ಶಿಸ್ತಿನಿಂದ ಸಾರ್ಥಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರೇರಣಾ ಉಪನ್ಯಾಸ ಸಮಿತಿ ಅಧ್ಯಕ್ಷರಾದ ಪ್ರೊ. ಜಿ. ಸುದರ್ಶನ ರೆಡ್ಡಿ ಸ್ವಾಗತಿಸಿದರು. ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀನಿವಾಸ್ ಎಸ್. ವಂದಿಸಿದರು. ವೇದಿಕೆಯಲ್ಲಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಹೆಚ್. ಎಸ್., ಸಮಿತಿ ಸಂಚಾಲಕರಾದ ಡಾ. ನೀಲಕಂಠ ಎನ್. ಟಿ., ಡಾ.ಅಶ್ವಿನಿ, ಡಾ. ವನಜಾಕ್ಷಿ ಇ. ಇನ್ನಿತರರು ಉಪಸ್ಥಿತರಿದ್ದರು.

(Visited 1 times, 1 visits today)
Previous Articleತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಜಗತ್ತಿಗೆ ಮಾದರಿ
Next Article ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ
News Desk Benkiyabale

Related Posts

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

March 26, 2026 5:25 pm ಇತರೆ ಸುದ್ಧಿಗಳು

ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ

March 26, 2026 5:23 pm ಇತರೆ ಸುದ್ಧಿಗಳು

ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ

March 26, 2026 5:21 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

March 26, 2026 5:25 pm
ಇತರೆ ಸುದ್ಧಿಗಳು

ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ

March 26, 2026 5:23 pm
ಇತರೆ ಸುದ್ಧಿಗಳು

ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ

March 26, 2026 5:21 pm
ಇತರೆ ಸುದ್ಧಿಗಳು

ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ

March 26, 2026 5:20 pm
ಇತರೆ ಸುದ್ಧಿಗಳು

ತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಜಗತ್ತಿಗೆ ಮಾದರಿ

March 26, 2026 5:19 pm
ತುಮಕೂರು ಜಿಲ್ಲಾ ಸುದ್ಧಿಗಳು

ಬದುಕಿನ ಜಟಕಬಂಡಿಗೆ ಡಿವಿಜಿ ಕಗ್ಗವೇ ದಾರಿದೀಪ

March 25, 2026 4:58 pm
Our Youtube Channel
Our Picks

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

March 26, 2026 5:25 pm

ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ

March 26, 2026 5:23 pm

ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ

March 26, 2026 5:21 pm

ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ

March 26, 2026 5:20 pm

ತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಜಗತ್ತಿಗೆ ಮಾದರಿ

March 26, 2026 5:19 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಹುಳಿಯಾರಿನಲ್ಲಿ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟನೆ

By News Desk BenkiyabaleMarch 26, 2026 5:25 pm

ಹುಳಿಯಾರು: ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಅತ್ಯಗತ್ಯ ಎಂದು ಗೀತಕ್ಕ ಅವರು ಅಭಿಪ್ರಾಯಪಟ್ಟರು.…

ಹುಳಿಯಾರಿನ ಗಾಂಧಿ ಪೇಟೆಯಲ್ಲಿ ಮನೆ ಕಳ್ಳತನ

March 26, 2026 5:23 pm

ಬಡವರು, ಶೋಷಿತರ ಪರ ಹೋರಾಡಿದ ಜಿ.ಎಂ.ಸಣ್ಣಮುದ್ದಯ್ಯ: ಸಿದ್ಧಲಿಂಗಪ್ಪ

March 26, 2026 5:21 pm

ಬಡತನ, ಅವಮಾನಗಳ ಅರಿವು ಯಶಸ್ಸಿನ ಪ್ರೇರಣೆಯಾಗಲಿ

March 26, 2026 5:20 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.