
ಚಿಕ್ಕನಾಯಕನಹಳ್ಳಿ: ತಾಲೂಕಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರುಗಳು ಹಾಗೂ ದಿನಗುತ್ತಿಗೆ ನೌಕರರ ನಡುವಿನ ವೈಮನಸ್ಯದಿಂದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಪರಿಸರ ಅದಕ್ಕೆ ಇದೆ ಎಂದು ರೈತ ಸಂಘದ ಹಾಗೂ ಸುಭಾಷ್ ಚಂದ್ರ ಬೋಸ್ ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಜಿಲ್ಲಾ ಆಯುಷ್ ಅಧಿಕಾರಿಗೆ ನೀಡಿದ ದೂರಿನ ಅನ್ವಯ ಇಂದು ಚಿಕ್ಕನಾಯಕನಹಳ್ಳಿ ಆಯುರ್ವೇದ ಆಸ್ಪತ್ರೆಗೆ ಬೇಟಿ ನೀಡಿ ದೂರುದಾರರ ಸಮಕ್ಷಮ ಸಭೆ ನಡೆಸಲಾಯಿತು.
ದೂರುದಾರರಾದ ಮಧುಸೂದನ್ ಮಾತನಾಡಿ ವೈದ್ಯರು ಹಾಗೂ ಸಿಬ್ಬಂದಿಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಸ್ಥಳೀಯ ರೋಗಿಗಳಿಗೆ ಚಿಕಿತ್ಸೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು. ಗೈರು ಹಾಜರಾಗಿರುವ ವೈದ್ಯ ವೀಣಾಕುಮಾರಿ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಾಯಿಸಿದರು. ಸುಮಾರು ಏಳೆಂಟು ವರ್ಷಗಳಿಂದ ಇರುವಂತ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವಂತೆ ಹಾಗೂ ಆಸ್ಪತ್ರೆಯ ಸ್ವಾಸ್ಥ÷್ಯ ಕಾಪಾಡುವಂತೆ ಮನವಿ ಮಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಗಂಗಾಧರ್ ದೂರು ಸ್ವೀಕರಿಸಿ ಮಾತನಾಡುತ್ತಾ ಈಗಾಗಲೇ ತನಿಕಾ ತಂಡವನ್ನು ರಚಿಸಲಾಗಿದ್ದು ಈ ವಾರದಲ್ಲಿ ಆಸ್ಪತ್ರೆಗೆ ಭೇಟಿ ನೀಡುವುದಲ್ಲದೆ ಪ್ರತಿ ದೂರುದಾರರ ಸಮಕ್ಷಮ ಆಸ್ಪತ್ರೆ ಸಿಬ್ಬಂದಿ ವೈದ್ಯರು ಹಾಗೂ ನಿಮ್ಮೊಂದಿಗೆ ಮಾಹಿತಿಯನ್ನು ದಾಖಲಿಸಿ ವರದಿ ಸಿದ್ದಪಡಿಸುವಂತೆ ನೀಡಲಾಗಿದ್ದು ಅವರು ನೀಡಿದ ವರದಿಯನ್ನುಯ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸಮಿತಿ ಎದುರು ತಂದು ಆನಂತರ ತಪ್ಪಿಸ್ತಸ್ಥರಿಗೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಜಿಲ್ಲಾ ಆಡಳಿತ ಅಧಿಕಾರಿ ಎ ಎಸ್ ಪ್ರಸನ್ನ ಮಾತನಾಡಿ ಡಾಕ್ಟರ್ ವೀಣಾ ಕುಮಾರಿ ಅವರ ವೈಯಕ್ತಿಕ ಕಾರಣದಿಂದಾಗಿ ಕರ್ತವ್ಯಕ್ಕೆ ಹಾಜರಾಗಿಲ್ಲ ಇರೋ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅದಕ್ಕೆ ಪೂರಕವಾಗಿ ತನಿಕ ತಂಡ ನೀಡಿದ ವರದಿ ಅನ್ವಯ ನಮ್ಮ ಜಿಲ್ಲಾ ಆಯುಷ್ ಕೇಂದ್ರದ ಮೂಲಕ ಜಿಲ್ಲಾಧಿಕಾರಿಗಳ ಸಮಿತಿಯ ಮುಂದೆ ತರುವುದು ನಮ್ಮ ಕರ್ತವ್ಯ ಆಗಿದೆ ಡಿ ಗ್ರೂಪ್ ನೌಕರರು ಕಾಯಂ ನೌಕರರಲ್ಲ ಕಾನೂನಿನ ಆತ್ಮಕ ತೊಡಕನ್ನು ನಮ್ಮ ಹಂತದಲ್ಲಿ ಬಗೆಹರಿಸಲಾಗದು. ಸೆಂಟ್ರಲ್ ಸ್ಪಾನ್ಸರ್ ಸ್ಕೀಮ್ ಅಡಿಯಲ್ಲಿ ಡಿ ಗ್ರೂಪ್ ನೌಕರರು ನೇಮಕವಾಗಿರುವುದು ಜಿಲ್ಲಾಧಿಕಾರಿಗಳ ಸೂಚನೆಯ ನಂತರವೇ ಅವರನ್ನು ತೆಗೆದು ಹಾಕಬಹುದು ವಿನಹ ಚೇಂಜ್ ಮಾಡಲು ಸಾಧ್ಯವಿಲ್ಲ.
ಜಿಲ್ಲಾ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾಕ್ಟರ್ ರಶೀದ್ ಅಹಮದ್ ನಮ್ಮ ಉದ್ದೇಶ ಸ್ಥಳೀಯ ನಾಗರಿಕರಿಗೆ ನಮ್ಮ ಆಸ್ಪತ್ರೆಯ ಸೇವೆಯನ್ನು ಚೆನ್ನಾಗಿ ಕೊಡುವುದು ನಮ್ಮ ಉದ್ದೇಶ ಬೇರೇನು ಅಲ್ಲ ಕಮಿಟಿ ಎದುರು ದೂರುದಾರರು ಸ್ಪಷ್ಟ ದಾಖಲೆ ನೀಡಿ ಮನವರಿಕೆ ಮಾಡಿಕೊಡಿ ಆ ವರದಿ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು
ಚಿಕ್ಕನಾಯಕನಹಳ್ಳಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಯಶ್ರೀ ಸೇರಿದಂತೆ ಮಧು ಆಟೋ ಮಂಜು ಹರ್ಷ ಜಿ ಟಿ ವೆಂಕಟೇಶ್ ನೀಲಕಂಠಪ್ಪ ಹುಸೇನ್ ಗುಂಡ ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

