
ತುಮಕೂರು: ಇಪಿಎಸ್-೯೫ ಪಿಂಚಣಿದಾರರು ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಕಳೆದ ಹತ್ತು ವರ್ಷಗಳಿಂದ ಮನವಿ ಮಾಡ್ತಿದ್ದಾರೆ. ಬೇಡಿಕೆ ಈಡೇರಿಸುವಂತೆ ಹೋರಾಟವನ್ನೂ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಇಪಿಎಸ್ -೯೫ ಪಿಂಚಣಿದಾರರ ಬೇಡಿಕೆ ಈಡೇರಿಸುವಲ್ಲಿ ಮುಂದಾಗಿಲ್ಲ ಎಂಬ ಆಕ್ರೋಶದ ಕಿಚ್ಚು ಪಿಂಚಣಿದಾರರಿAದ ಕೇಳಿಬಂದಿದೆ. ಹತ್ತು ವರ್ಷಗಳಿಂದಲೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಪಿಂಚಣಿದಾರರು ಹೋರಾಟಕ್ಕಿಳಿಯುವ ಪರಿಸ್ಥಿತಿ ಅನಿವಾರ್ಯವಾಗಿದ್ದು, ಇದರ ಭಾಗವಾಗಿ ತುಮಕೂರಿನ ಇಪಿಎಸ್- ೯೫ ಪಿಂಚಣಿದಾರರು ತುಮಕೂರಿನ ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆ ಮುಂದೆ ತಮ್ಮ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಎನ್‌ಎಸ್‌ಇ ಸಹ ಕಾರ್ಯದರ್ಶಿ ಕೆ.ಎಸ್.ರಾಜಣ್ಣ ಅವರು ಪ್ರತಿಭಟನೆ ಮಾತನಾಡುತ್ತಾ ಇಪಿಎಸ್-೯೫ ಪಿಂಚಣಿದಾರರು ಕನಿಷ್ಠ ಮಾಸಿಕ ಪಿಂಚಣಿಯನ್ನು ೭೫೦೦ ಕ್ಕೆ ಹೆಚ್ಚಿಸಬೇಕು. ವಿಧವಾ ಪಿಂಚಣಿ ಕೊಡಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಕಳೆದ ೧೦ ವರ್ಷಗಳಿಂದ ಪಿಂಚಣಿದಾರರು ನಿರಂತರ ಹೋರಾಟ ನಡೆಸುತ್ತಾ, ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅಲ್ಪ ಪ್ರಮಾಣದ ಪಿಂಚಣಿ ಹಾಗೂ ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಪಿಂಚಣಿದಾರರ ಸಂಕಷ್ಟ ಹೆಚ್ಚುತ್ತಿದೆ. ಕೂಡಲೇ ಸರ್ಕಾರ ನಮ್ಮ ಸಮಸ್ಯೆ ಈಡೇರಿಸಬೇಕು. ಇಲ್ಲವಾದಲ್ಲಿ ನಾವು ರಾಷ್ಟçಪತಿಗೆ ದಯಾಮರಣ ಕೋರುತ್ತೇವೆ ಎಂದು ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ.
ಎನ್‌ಎಸ್‌ಇ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡುತ್ತಾ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ ಹೋರಾಟ ಮಾಡಿದ್ದೇವೆ. ಆದರೂ, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಒಂದಿಷ್ಟು ಗಮನ ಕೊಡುತ್ತಿಲ್ಲ. ಹೀಗೆ ಆದರೆ ನಾವು ಉಗ್ರವಾದ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಇಪಿಎಸ್- ೯೫ ಪಿಂಚಣಿದಾರರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಎನ್‌ಎಸ್‌ಇ ಉಪಾಧ್ಯಕ್ಷ ಪ್ರಭಾಕರ್ ಮಾತನಾಡುತ್ತಾ ಇಪಿಎಸ್- ೯೫ ಪಿಂಚಣಿದಾರರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮೂಲಕ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಮುಂದಿಡಲು ಮುಂದಾಗಿ ಸಚಿವ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು. ಆದರೆ, ಅವಕಾಶ ಸಿಗದೇ ತುಮಕೂರು ಟೌನ್ ಹಾಲ್ ನಲ್ಲಿಯೇ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಎನ್.ಎ.ಸಿ.,ಈ.ಪಿ.ಎಸ್ ೯೫ ಜಿಲ್ಲಾಧ್ಯಕ್ಷ ರಮೇಶ್, ಉಪಾಧ್ಯಕ್ಷ ಪ್ರಭಾಕರ್, ಸಹ ಕಾರ್ಯದರ್ಶಿ ಕೆ.ಎಸ್.ರಾಜಣ್ಣ, ಪುಟ್ಟರಾಜು,ದೊಡ್ಡೆಗೌಡ, ನಾಗರಾಜು ಸೇರಿದಂತೆ ನೂರಾರು ಪಿಂಚಣಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

