ತುಮಕೂರು: ನಗರದ ಹೊರಪೇಟೆ ಕರಿಬಸವೇಶ್ವರ ಸ್ವಾಮಿ ಮಠದ ಜಗದ್ಗುರು ಲಿಂಗೈಕ್ಯ ಚನ್ನಬಸವ ರಾಜೇಂದ್ರ ಮಹಾಸ್ವಾಮಿಗಳವರ ಮಾಸಿಕ ಪುಣ್ಯ ಸಂಸ್ಮರಣೋತ್ಸವ ನೆರವೇರಿತು. ವಿವಿಧ ಮಠಗಳ ಸ್ವಾಮೀಜಿಗಳು, ಸಮಾಜದ ಗಣ್ಯರು ಭಾಗವಹಿಸಿ ಲಿಂಗೈಕ್ಯ ಜಗದ್ಗುರುಗಳಿಗೆ ಭಕ್ತಿ ಸಮರ್ಪಣೆ ಮಾಡಿದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಲಿಂಗೈಕ್ಯ ಚನ್ನಬಸವ ರಾಜೇಂದ್ರ ಸ್ವಾಮೀಜಿಗಳು ಮಠದ ಪರಂಪರೆ, ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದರು. ಸಾಮಾಜಿಕ ಪರಿವರ್ತನೆಗಾಗಿ ಜನ ಜಾಗೃತಿ ಮೂಡಿಸುತ್ತಿದ್ದರು. ಕಷ್ಟವೆಂದು ಬಂದವರಿಗೆ ಸಾಂತ್ವನ ಹೇಳಿ ಸಹಾಯ ಮಾಡುತ್ತಿದ್ದರು ಎಂದರು.
ಸುಮಾರು ೯೯ ವರ್ಷ ಕಾಲ ಬಾಳಿದ್ದ ಸ್ವಾಮೀಜಿಗಳು ಮಠದ ಆಸ್ತಿಯನ್ನು ರಕ್ಷಣೆ ಮಾಡಿ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ ತಾವೇ ಸಮಾಜದ ಆಸ್ತಿಯಾಗಿದ್ದರು. ಅವರ ಪರಂಪರೆಯನ್ನು ಅವರ ಉತ್ತರಾಧಿಕಾರಿಗಳು ಮುಂದುವರೆಸಿಕೊAಡು ಹೋಗಬೇಕು ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮತ್ತಿತರ ಗಣ್ಯರು ಭಾಗವಹಿಸಿ ಪೂಜ್ಯರಿಗೆ ಭಕ್ತಿ ನಮನ ಸಲ್ಲಿಸಿದರು.
ಕರಿಬಸವೇಶ್ವರಸ್ವಾಮಿ ಮಠದ ಉತ್ತರಾಧಿಕಾರಿಗಳಾದ ಡಾ.ಕರಿಬಸವ ರಾಜೇಂದ್ರ ಮಹಾ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಜಗದ್ಗುರು ಚನ್ನಬಸವ ರಾಜೇಂದ್ರ ಸ್ವಾಮೀಜಿಗಳು ಕೇವಲ ಧರ್ಮ ಜಾಗೃತಿ ಮಾಡದೆ ಸಮಾಜದ ಪಿಡುಗುಗಳ ನಿವಾರಣೆಗೆ ಪ್ರಯತ್ನ ಮಾಡಿದ್ದರು. ಮದ್ಯ ವ್ಯಸನಿಗಳ ಮನವೊಲಿಸಿ ಅವರು ಕುಡಿತದಿಂದ, ದುಶ್ಚಟಗಳಿಂದ ದೂರವಾಗಲು ಕಾರಣರಾಗಿದ್ದಾರೆ. ಇಂತಹ ಅನೇಕ ಸಮಾಜ ಸುಧಾರಣಾ ಕಾರ್ಯಗಳನ್ನು ಪೂಜ್ಯವರು ಮಾಡಿ ಎಲ್ಲಾ ಮಠಾಧೀಶರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಮಠದ ಉತ್ತರಾಧಿಕಾರಿಯಾಗಿರುವ ತಾವು, ಹಿರಿಯ ಜಗದ್ಗುರುಗಳು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳು, ಅನುಸರಿಸುತ್ತಿದ್ದ ಕಾರ್ಯಗಳನ್ನು ತಾವು ಚಾಚೂ ತಪ್ಪದೆ ಮುಂದುವರೆಸಿಕೊAಡು ಹೋಗುವುದಾಗಿ ತಿಳಿಸಿದರು.
ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿಯವರು ಮಾಸಿಕ ಪುಣ್ಯ ಸಂಸ್ಮರಣೋತ್ಸವದ ದಿವ್ಯ ಸಾನಿಧ್ಯ ವಹಿಸುವರು.ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ ಪ್ರಾಸ್ತಾವಿಕ ನುಡಿ ನುಡಿದರು.
ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಹೆಬ್ಬೂರು ರಾಮೇನಹಳ್ಳಿ ಮಠದ ಶಿವ ಪಂಚಾಕ್ಷರಿ ಸ್ವಾಮೀಜಿ, ಮಾಕನಹಳ್ಳಿ ಜಂಗಮ ಮಠದ ಗಂಗಾಧರ ಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಮಠದ ಬಸವ ರಮಾನಂದ ಸ್ವಾಮೀಜಿ, ವಿಜಯಪುರದ ಮಹದೇವ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ನವಗ್ರಹ ಲಕ್ಷ್ಮೀ ದೇವಸ್ಥಾನದ ನಾಗೇಂದ್ರ ಸ್ವಾಮೀಜಿ ಅವರು ಚನ್ನಬಸವ ರಾಜೇಂದ್ರ ಸ್ವಾಮೀಜಿಗೆ ನುಡಿ ನಮನ ಸಲ್ಲಿಸಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎನ್. ಬಸವಯ್ಯ, ವಿ೩ ವೆಂಚರ್ಸ್ ಮಾಲೀಕ, ಯುವ ಮುಖಂಡ ಅರಕೆರೆ ರವೀಶ್, ಮುಖಂಡರಾದ ಟಿ.ಸಿ.ದಯಾನಂದ್, ಟಿ.ಸಿ. ಬಸವರಾಜು, ಮನು ಹರಳೂರು, ಪ್ರತಾಪ್ ಮಲ್ಲಣ್ಣ, ಅನುಸೂಯಮ್ಮ, ಟಿ.ಎಸ್. ಗಟ್ಟಿ, ಫೋಟೋ ರೇಣುಕಾ ಪ್ರಸಾದ್, ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)





