ಕೊರಟಗೆರೆ: ಮಹಿಳೆಯರು ಮೂಢನಂಬಿಕೆಗಳು ಹಾಗೂ ಅನಗತ್ಯ ಸಾಮಾಜಿಕ ಕಟ್ಟು ಪಾಡುಗಳಿಂದ ಹೊರಬಂದು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಪುರುಷರಷ್ಟೇ ಆತ್ಮವಿಶ್ವಾಸ ದಿಂದ ದುಡಿದು ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಸಮಾ ಜದ ಮುಖ್ಯವಾಹಿನಿಗೆ ಬರಬೇಕು ಎಂದು ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಜಮೀಲಾ ಬೀ ಹೇಳಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂ ಕಿನ ಅಕ್ಕಿರಾಂಪುರದಲ್ಲಿ ಅಭಿನವ ರಂಗ ಸಂಪನ್ಮೂಲ ಕೇಂದ್ರ (ರಿ.), ತುಮಕೂರು ವತಿಯಿಂದ ಆಯೋಜಿಸಿದ್ದ ಕರುನಾಡಿನಲ್ಲಿ ಹೆಂಗೆಳಯರ ಬಾಂಧವ್ಯ (ಹಾಡು, ಆಟ, ಹರಟೆ) ಕಾರ್ಯಕ್ರ ಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಜಮೀಲಾ ಬೀ, ಮಹಿಳೆಯರು ಮೂಢನಂಬಿಕೆಗಳಿAದ ಹೊರಬಂದು ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದು ಕೊಳ್ಳುವಷ್ಟು ಶಿಕ್ಷಣ, ಆತ್ಮಸ್ಥೆöÊರ್ಯ ಮತ್ತು ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಬೇಕು. ಮಹಿಳೆ ಯರು ಪುರುಷರಷ್ಟೇ ದುಡಿದು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಬೇಕು ಎಂದು ಹೇಳಿದರು.
ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಯಾವುದೇ ಕ್ಷೇತ್ರದಲ್ಲೂ ಹಿಂದೆ ಬೀಳದೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಾವಿತ್ರಿಬಾಯಿ ಫುಲೆ ಅವರ ಜೀವನ ಮಹಿಳೆಯರಿಗೆ ಸ್ಫೂರ್ತಿ: ಬೈರಪ್ಪ: ಕಾರ್ಯಕ್ರ ಮದಲ್ಲಿ ಮಾತನಾಡಿದ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರಾದ ಬೈರಪ್ಪ, ಮಹಿಳಾ ಶಿಕ್ಷಣದ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಸಾಧನೆಯನ್ನು ಪರಿಚಯಿಸಿದರು.
ಮುಸ್ಲಿಂ ಮಹಿಳೆಯರು ಸ್ವಾವಲಂಬಿಗಳಾಗಲಿ, ಹೀನಾ: ಉರ್ದು ಶಾಲೆಯ ಶಿಕ್ಷಕಿ ಹೀನಾ ಮುಸ್ಲಿಂ ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ತಮ್ಮ ಮುಂದಿನ ಜೀವನವನ್ನು ಆತ್ಮವಿಶ್ವಾಸದಿಂದ ಮುನ್ನಡೆಸುವಂತಾಗಬೇಕು ಎಂದರು.
ರಜಿಯಾ ಸುಲ್ತಾನ, ಸಾ.ರಾ. ಅಬೂಬಕ್ಕರ್ ಸಾಧನೆ ಸ್ಮರಣೆ: ಆಸ್ಮಾ ಖಾನಂ ಅವರು ಇತಿಹಾಸದ ಪ್ರಸಿದ್ಧ ಮಹಿಳಾ ಆಡಳಿತಗಾರ್ತಿ ರಜಿಯಾ ಸುಲ್ತಾನ ಹಾಗೂ ಕನ್ನಡದ ಖ್ಯಾತ ಲೇಖಕಿ ಸಾ.ರಾ. ಅಬೂಬಕ್ಕರ್ ಅವರ ಜೀವನ ಮತ್ತು ಸಾಧನೆಯ ಕುರಿತು ಪರಿಚಯ ನೀಡಿದರು.
ಹಾಡು, ಹರಟೆ, ಆಟಗಳ ಮೂಲಕ ಸಂಭ್ರಮ: ಕಾರ್ಯಕ್ರಮದ ನಂತರ ಕೆಲವು ಮಹಿಳೆಯರು ಅಂತಾಕ್ಷರಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಇನ್ನು ಕೆಲವರು ತಮ್ಮ ಜೀವನದ ಅನುಭವಗಳು ಹಾಗೂ ಸಣ್ಣಪುಟ್ಟ ಸ್ಫೂರ್ತಿದಾಯಕ ಕಥೆಗಳನ್ನು ಹಂಚಿಕೊAಡರು. ಅಭಿನವ ರಂಗ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಹಾಗೂ ರಂಗ ನಿರ್ದೇಶಕ ಅನುರಾಗ್ ಭೀಮಸಂದ್ರ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕರುನಾಡಿನಲ್ಲಿ ಹೆಂಗೆಳಯರ ಬಾಂಧವ್ಯ: ಕಾರ್ಯಕ್ರಮವು ಮುಸ್ಲಿಂ ಮಹಿಳೆಯರ ಶಿಕ್ಷಣ, ಸ್ವಾವಲಂಬನೆ, ಆತ್ಮಸ್ಥೆöÊರ್ಯ ಮತ್ತು ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಹಾಡು, ಆಟ ಮತ್ತು ಹರಟೆಯ ಮೂಲಕ ಸಂತೋಷದ ವಾತಾವರಣವನ್ನು ಸೃಷ್ಟಿಸಿತು.
(Visited 1 times, 1 visits today)





