BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ
  • ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್
  • ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
  • ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ
  • ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮದರ್ ಥೆರೆಸಾರವರ ಜನ್ಮದಿನಾಚರಣೆ
news

ಮದರ್ ಥೆರೆಸಾರವರ ಜನ್ಮದಿನಾಚರಣೆ

By News Desk BenkiyabaleUpdated:August 28, 2026 5:11 pm

ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಮದರ್ ಥೆರೆಸಾ ರವರ ಜನ್ಮದಿನಾಚರಣೆಯನ್ನು ಇಂದು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಮೇಣದ ದೀಪವನ್ನು ಹಚ್ಚುವುದರ ಮೂಲಕ ವಿಶೇಷವಾಗಿ ಆಚರಣೆಯನ್ನು ಮಾಡಲಾಯಿತು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್. ಕೆ ನಿಧಿ ಕುಮಾರ್ ಮದರ್ ಥೆರೆಸಾ ರವರು ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಕಲ್ಕತ್ತ ಮಹಾನಗರದಲ್ಲಿ ಜಾತಿ, ಧರ್ಮ ಎಂಬ ತಾರತಮ್ಯ, ಬೇಧ ಭಾವವಿಲ್ಲದೆ ಪ್ಲೇಗ್ ಮತ್ತು ಕುಷ್ಠರೋಗ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಸಮಾಜವನ್ನು ತಮ್ಮ ಸ್ವ-ಹಸ್ತದಿಂದಲೇ ಅವರುಗಳನ್ನು ಶುಶ್ರೂಷೆ ಮಾಡಲು ಮುಂದಾಗಿ, ವಿಶೇಷ ಸೇವೆಯನ್ನು ಅರ್ಪಿಸಿದ ಮಹಾಮಾತೆ ಅವರಾಗಿದ್ದರು, ಅವರ ನಿಸ್ವಾರ್ಥ ಸೇವೆಯನ್ನು ಭಾರತೀಯರಾದ ನಾವುಗಳು ಹೃದಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಅಸ್ಪöÈಶ್ಯತೆ ಎಂಬ ಘನಘೋರ ಆಚರಣೆಯಿದ್ದಂತಹ ಕಾಲಘಟ್ಟದಲ್ಲಿ ನಮ್ಮ ದೇಶಕ್ಕೆ ಅವರ ಧರ್ಮ ಪ್ರಚಾರಕ್ಕೆಂದು ಆಗಮಿಸಿದ್ದ ಅವರು, ಅದನ್ನು ಬದಿಗೊತ್ತಿ, ದೇಶದಲ್ಲಿ ತಾಂಡವವಾಡುತ್ತಿದ್ದ ಕುಷ್ಠ ರೋಗ ಎಂಬ ಮಹಾಮಾರಿಯ ಜೊತೆ ಹೋರಾಟ ಮಾಡಿ ಸಾವಿರಾರು ಜನರನ್ನು ರಕ್ಷಿಸಿದವರು ಥೆರೆಸಾ, ನಾವುಗಳು ಇತ್ತೀಚಿನ ಆಧುನಿಕ ದಿನದಲ್ಲಿ ಕೋವಿಡ್ ಎಂಬ ಮಹಾಮಾರಿಯನ್ನು ಎದುರಿಸಿದ್ದೆವು, ಈ ಸಂದರ್ಭದಲ್ಲಿ ಕೋವಿಡ್ ರೋಗಕ್ಕೆ ಒಳಗಾದವರನ್ನು ಹೇಗೆ ನೋಡುತ್ತಿದ್ದೆವು ಎಂದು ಎಲ್ಲರ ಕಣ್ಣ ಮುಂದೆ ಇದ್ದೇ ಇದೆ, ಅದಕ್ಕಿಂತ ಘೋರವಾದ ಪರಿಸ್ಥಿತಿಯನ್ನು ಅಂದಿನ ಸಂದರ್ಭದಲ್ಲಿ ಅವರು ಎದುರಿಸಿದ್ದು ಇದೀಗ ಇತಿಹಾಸ ಎಂದು ತಿಳಿಸಿದರು.
ನಂತರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ.ರವರು ಮಾತನಾಡುತ್ತಾ ಮಾನವೀಯತೆ ಮತ್ತು ಕಾರುಣ್ಯದ ಸಾಕಾರ ಮೂರ್ತಿ. ಮದರ್ ಥೆರೇಸಾ ಅವರು ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯನ್ನು ಸ್ಥಾಪಿಸಿ ಸಮಾಜದಿಂದ ತ್ಯಜಿಸಲ್ಪಟ್ಟ ಅನಾಥರಿಗೆ, ಬಡ ರೋಗಿಗಳಿಗೆ ಹಾಗೂ ದೀನದಲಿತರಿಗೆ ತಾಯಿಯಂತೆ ಆಸರೆಯಾದ ಕರುಣಾಮಯಿ ಅವರ ನಿಸ್ವಾರ್ಥ ಸೇವೆ ಹಾಗೂ ತ್ಯಾಗದ ಬದುಕನ್ನು ಗೌರವಿಸಿ ಜಗತ್ತು ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಿದೆ ಮತ್ತು ಭಾರತ ಸರ್ಕಾರ ಅವರ ನಿಸ್ವಾರ್ಥ ಸೇವೆಗೆ ಭಾರತರತ್ನ ನೀಡಿದೆ. ನಾವು ದೊಡ್ಡ ಕಾರ್ಯಗಳನ್ನು ಮಾಡಲಾಗದಿರಬಹುದು ಆದರೆ ಸಣ್ಣ ಕಾರ್ಯಗಳನ್ನು ಅಪಾರ ಪ್ರೀತಿಯಿಂದ ಮಾಡಬಹುದು ಎಂಬ ಅವರ ದಿವ್ಯ ನುಡಿ ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿ ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತನ್ನೇ ಗೆದ್ದ ಜಗನ್ಮಾತೆಗೆ ಪ್ರಣಾಮಗಳು ಎಂದು ಭಾವುಕರಾಗಿ ನುಡಿದರು.
ನಂತರ ಸಂವಿಧಾನ ರಕ್ಷಣಾ ಕ್ರಾಂತಿ ವೇದಿಕೆ ರಾಜ್ಯ ಅಧ್ಯಕ್ಷರ ಪ್ರಕಾಶ್ ಎಚ್. ಪಿ ಮಾತನಾಡುತ್ತ ನಮ್ಮ ದೇಶದಲ್ಲಿ ಗಲ್ಲಿಗೊಂದರAತೆ ಪವಾಡ ಪುರುಷರು ಸಿಗುತ್ತಾರೆ ಆದುದರಿಂದ ಮದರ್ ತೆರೇಸಾ ಅವರ ಪವಾಡಗಳ ಕುರಿತಂತೆ ನನಗೆ ಆಸಕ್ತಿ ಇಲ್ಲ ಆದರೆ ನಮ್ಮ ನಿಮ್ಮಂತಹ ಸಾಮಾನ್ಯ ಮನುಷ್ಯಳಾಗಿ ಸೇವೆಯ ಮೂಲಕ ಏರಿದ ಎತ್ತರ ಸದಾ ಆದರ್ಶನೀಯವಾದುದು. ಕುಷ್ಠ ರೋಗದಿಂದ ಕೊಳೆತು ಸಮಾಜದಿಂದ ಬಹಿಷ್ಕöÈತರಾದ ಜನರನ್ನು ತನ್ನ ಬಾಹುಗಳಲ್ಲಿ ತೆಗೆದು ಕೊಂಡು, ಅವರನ್ನು ಆರೈಕೆ ಮಾಡಿ, ಅವರನ್ನು ರೋಗ ಮುಕ್ತರನ್ನಾಗಿ ಮಾಡುವಲ್ಲಿ ಯಶಸ್ವಿಯಾದ ಮಹಾನ್ ಮಾತೆ ಇಂದು ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ, ಆದರೆ ಅವರು ಮಾಡಿರುವ ನಿಸ್ವಾರ್ಥ ಸೇವೆ ಎಷ್ಟೋ ಜನರಿಗೆ ತಿಳಿದಿಲ್ಲ, ಆ ಒಂದು ಮಹತ್ಕಾರ್ಯವನ್ನು ನಾವುಗಳು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ ನಿಧಿ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ವೇದಿಕೆ ರಾಜ್ಯ ಅಧ್ಯಕ್ಷ ಪ್ರಕಾಶ್ ಎಚ್.ಪಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಲ್ಲಸ್ ಅಹ್ಮದ್, ಜಿಲ್ಲಾ ಕಾರ್ಯಾಧ್ಯಕ್ಷ ಕೆಸ್ತೂರು ನರಸಿಂಹಮೂರ್ತಿ, ಅಲ್ಪಸಂಖ್ಯಾತರ ಯುವ ಘಟಕದ ಜಿಲ್ಲಾ ಅಧ್ಯಕ್ಷ ಮೋಯಿನ್ ಅಹ್ಮದ್, ಸಂವಿಧಾನ ರಕ್ಷಣಾ ಸೇನೆ ವೇದಿಕೆ ಜಿಲ್ಲಾ ಅಧ್ಯಕ್ಷ ಶಂಕರ್ ಸೇರುದಂತೆ ಮುಖಂಡರುಗಳಾದ ಜೆ.ಬಿ.ನೇಶನ್, ಇಮ್ರಾನ್ ಅಹಮದ್, ಶಫಿ ಉಲ್ಲಾ, ಮೂರ್ತಿ, ರಂಗಸ್ವಾಮಿಯ ಕೆ ಎಸ್ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು:
Previous Articleಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ
Next Article ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು
News Desk Benkiyabale

Related Posts

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm news
ತಾಜಾ ಸುದ್ಧಿಗಳು
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm
news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
news

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
news

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
news

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm
Our Youtube Channel
Our Picks

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

By News Desk BenkiyabaleOctober 16, 2026 5:16 pm

ತುಮಕೂರು: ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಇಂದಿನ ಸಂದರ್ಭದಲ್ಲಿ ನಾಟಕಗಳು, ವಿವಿಧ ರಂಗರೂಪಗಳು ನಮ್ಮ ಮೂಲ…

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.