BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ
  • ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್
news

ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್

By News Desk BenkiyabaleUpdated:October 02, 2026 6:39 pm

ತುಮಕೂರು: ಭಾರತದಿಂದ ಬ್ರಿಟೀಷರನ್ನು ತೊಲಗಿಸಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡುವಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ಮಾರ್ಗವು ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿAದು ಏರ್ಪಡಿಸಿದ್ದ ೧೫೭ನೇ “ ಗಾಂಧೀ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತಿçÃಜಿಯವರ ೧೨೨ನೇ ಜಯಂತಿ ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ಜೀವನವೇ ಸಮಾಜಕ್ಕೆ ಒಂದು ಸಂದೇಶ. ದೇಶದ ಸ್ವಾತಂತ್ರö್ಯಕ್ಕಾಗಿ ಅವರು ಅನುಸರಿಸಿದ ಸತ್ಯ ಮತ್ತು ಅಹಿಂಸೆ ಮಾರ್ಗವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಗಾಂಧೀಜಿಯವರ ಆದರ್ಶಗಳನ್ನು ಜಗತ್ತಿನ ಎಲ್ಲ ಖಂಡಗಳಲ್ಲಿಯೂ ಸ್ಮರಿಸಲಾಗುತ್ತದೆ. ಇಂದಿನ ಯುವಜನರು, ವಿದ್ಯಾರ್ಥಿಗಳು ಗಾಂಧಿಯವರ ಬದುಕು, ಸ್ವಾತಂತ್ರö್ಯ ಚಳುವಳಿ, ಸರಳತೆ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳನ್ನು ಅರಿತು ದೇಶವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ಗಾಂಧೀಜಿಯವರು ಕಂಡ “ ಗ್ರಾಮ ಸ್ವರಾಜ್ಯ ” ಹಾಗೂ ಶಾಸ್ತಿçÃಜಿಯವರು ಕಂಡ “ ಜೈ ಜವಾನ್ ಜೈ ಕಿಸಾನ್ ” ಕನಸನ್ನು ನನಸಾಗಿಸಲು ಜಿಲ್ಲಾಡಳಿತ ಶ್ರಮಿಸುತ್ತಿದ್ದು, ಕಳೆದ ೩ ವರ್ಷಗಳಲ್ಲಿ ೧.೫ ಲಕ್ಷ ಜನರಿಗೆ ಕಂದಾಯ ಸೇವೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ ಕಡು ಬಡವರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತ ಪಣ ತೊಟ್ಟಿದ್ದು, ಈಗಾಗಲೇ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ ಗಾಂಧೀಜಿ ಹಾಗೂ ಶಾಸ್ತಿçÃಜಿ ಅವರ ಉತ್ತಮ ಚಿಂತನೆಗಳು ನಾವಿಂದು ನೆಮ್ಮದಿಯಾಗಿ ಬದುಕಲು ಕಾರಣವಾಗಿವೆ. ಸಮಾಜದ ಒಳಿತಿಗಾಗಿ ಈ ಮಹನೀಯರು ತಮ್ಮ ಉತ್ತಮ ಆಲೋಚನೆಗಳನ್ನು ಆಚರಣೆಗೆ ತರುವ ಮೂಲಕ ಜನ ಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ. ಪ್ರಯತ್ನ ಹಾಗೂ ಪರಿಶ್ರಮದಿಂದ ನಾವೂ ಸಹ ಜನ ಮಾನಸದಲ್ಲಿ ಉಳಿಯಬಹುದೆಂದು ಇಂದಿನ ಯವಜನಾಂಗ ಮನಗಾಣಬೇಕು. ಗಾಂಧೀಜಿಯವರ ಸ್ವಚ್ಛ ಭಾರತದ ಪರಿಕಲ್ಪನೆ ಹಾಗೂ ಶಾಸ್ತಿçÃಜಿಯವರ ಸಮರ್ಥ ಆಡಳಿತ ನಮಗೆಲ್ಲ ಮಾದರಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ತುಮಕೂರು ವಿ.ವಿ. ರಾಜ್ಯಶಾಸ್ತç ಅಧ್ಯಾಪಕ ಅಕಾಡೆಮಿ ನಿರ್ದೇಶಕ ಪ್ರೊ: ಆರ್.ಎಲ್. ಸುನಿಲ್ ಕುಮಾರ್ ಅವರು ಗಾಂಧೀಜಿಯವರ ಬಾಲ್ಯ, ವ್ಯಾಸಂಗ, ವೃತ್ತಿ ಬದುಕು, ಸ್ವಾತಂತ್ರö್ಯ ಹೋರಾಟದಲ್ಲಿನ ಪಾತ್ರ, ರೈತರ ಪರವಾಗಿ ಕೈಗೊಂಡ ಸತ್ಯಾಗ್ರಹ, ಬ್ರಿಟೀಷರನ್ನು ಭಾರತ ಬಿಟ್ಟು ಓಡಿಸಲು ಹೋರಾಡಿದ ಕ್ವಿಟ್ ಇಂಡಿಯಾ ಚಳುವಳಿ, ನೈತಿಕ ಮೌಲ್ಯಗಳು ಸೇರಿದಂತೆ ಹಲವಾರು ಸ್ವಾತಂತ್ರö್ಯ ಹೋರಾಟದ ಮಜಲುಗಳ ಮೇಲೆ ಬೆಳಕು ಚೆಲ್ಲಿದರು.
ಗಾಂಧೀಜಿಯವರದು ಪಾಪವನ್ನು ವಿರೋಧಿಸಿ-ಪಾಪಿಗಳನ್ನು ಕ್ಷಮಿಸಿ ಎಂಬ ಉದಾರತೆ ಹೊಂದಿದ್ದ ವ್ಯಕ್ತಿತ್ವ. ಬುದ್ಧನ ನೀತಿಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಅವರ ಸತ್ಯ ಮತ್ತು ಅಹಿಂಸೆ ಮಾರ್ಗದಂತಹ ಆದರ್ಶ ನೀತಿಯಿಂದ ಪ್ರೇರಿತವಾದ ವಿಶ್ವಸಂಸ್ಥೆಯು ಅಕ್ಟೋಬರ್ ೨ರಂದು ವಿಶ್ವದಾದ್ಯಂತ “ಅಂತರಾಷ್ಟಿçÃಯ ಅಹಿಂಸಾ ದಿನ” ವನ್ನಾಗಿ ಆಚರಣೆಯನ್ನು ಜಾರಿಗೆ ತಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಗಾಂಧೀಜಿಯವರು ಮಹಾತ್ಮರೆನಿಸಿಕೊಂಡ ಕುರಿತು ವಿವರಿಸಿದರು.
ದೇಶದ ರೈಲ್ವೆ ಮಂತ್ರಿಯಾಗಿ, ೨ನೇ ಪ್ರಧಾನಿಯಾಗಿ ಲಾಲ್ ಬಹಾದ್ದೂರ್ ಶಾಸ್ತಿçÃಯವರ ಸಮರ್ಥ ಕಾರ್ಯನಿರ್ವಹಣೆ, ವರದಕ್ಷಿಣೆ ನಿರಾಕರಣೆ ನೀತಿ, ರೈತಪರ ಕಾಳಜಿ ಬಗ್ಗೆ ಮಾಹಿತಿ ನೀಡಿದ ಅವರು ಶಾಸ್ತಿçÃಜಿಯವರು ಕಡುಬಡತನದಲ್ಲಿ ಹುಟ್ಟಿದರೂ ಅವರ ವಿಚಾರಧಾರೆಗಳಿಂದ ದೇಶದ ಪ್ರಧಾನಿಯಂತಹ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದರಲ್ಲದೆ ಬಡತನ ಶಾಪವಲ್ಲ-ಬಡತನವೇ ಸಾಧನೆಯ ಮೆಟ್ಟಿಲಾಗಬೇಕೆಂದು ಇಡೀ ದೇಶಕ್ಕೆ ತೋರಿಸಿಕೊಟ್ಟ ಶ್ರಮಜೀವಿಯಾಗಿದ್ದರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ಮತ್ತು ಸಂಗಡಿಗರು ರಘುಪತಿ ರಾಘವ ರಾಜಾರಾಂ, ರಾಮ ನಾಮವ ನುಡಿ-ನುಡಿ, ಭಜಮನ ರಾಮ್, ಮತ್ತಿತರ ಭಜನಾ ಗೀತೆಗಳನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಇಲಾಖೆ ಹೊರತಂದಿರುವ “ಗಾಂಧಿ ದರ್ಶನ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಗಾಂಧೀ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರೌಢಶಾಲಾ, ಪದವಿಪೂರ್ವ ಕಾಲೇಜು ಹಾಗೂ ಕಾಲೇಜು/ಸ್ನಾತಕೋತ್ತರ ವಿಭಾಗ ಸೇರಿದಂತೆ ೩ ವಿಭಾಗಗಳಲ್ಲಿ ಏರ್ಪಡಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ವಿಜೇತ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೆ. ರಾಜಶೇಖರ್ ನಿರೂಪಿಸಿದರು. ಅನಿಲ್‌ಕುಮಾರ್ ಸ್ವಾಗತಿಸಿದರು.
ವಾರ್ತಾ ಸಹಾಯಕಿ ಆರ್. ರೂಪಕಲಾ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕಿ ಭಾವನ ಬಸವರಾಜ್, ಜಿಲಾ ಖಜಾನೆಯ ಉಪನಿರ್ದೇಶಕಿ ಉಮಾ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಎಂ.ಎಚ್. ನಂಜುAಡಪ್ಪ, ಗ್ರೇಡ್-೨ ತಹಶೀಲ್ದಾರ್ ಕಮಲಮ್ಮ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ, ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳು ಮತ್ತು ಪೋಷಕರು, ಸಾರ್ವಜನಿಕರು, ಮತ್ತಿತರರು ಉಪಸ್ಥಿತರಿದ್ದರು.
ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರು :-
ಪ್ರೌಢಶಾಲಾ ವಿಭಾಗದಲ್ಲಿ ತುಮಕೂರು ತಾಲ್ಲೂಕು ಸ್ವಾಂದೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕು. ಲೇಖನ ಬಿ.ಎಂ. ಅವರು ಗಾಂಧೀಜಿ ಕಲಿಸಿದ ಸರಳ ಜೀವನ-ಮಹಾನ್ ಸಂದೇಶ ಕುರಿತು ರಚಿಸಿದ ಪ್ರಬಂಧಕ್ಕಾಗಿ ಪ್ರಥಮ ಬಹುಮಾನ, ಗುಬ್ಬಿ ತಾಲ್ಲೂಕು ಸಿ.ಎಸ್. ಪುರ ಕೆ.ಪಿ.ಎಸ್.ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕು.ಅಮೃತ ಹೆಚ್.ಆರ್. ಅವರು ರಚಿಸಿದ ಗಾಂಧೀಜಿಯ ಜೀವನ ಕಥೆಯಿಂದ ಕಲಿಯುವ ಐದು ಪಾಠಗಳು ಕುರಿತ ಪ್ರಬಂಧಕ್ಕಾಗಿ ದ್ವಿತೀಯ ಬಹುಮಾನ ಹಾಗೂ ಗುಬ್ಬಿ ತಾಲ್ಲೂಕು ಮಡೇನಹಳ್ಳಿ ಸರ್ಕಾರಿ ಪ್ರೌಢಶಾಲೆ ೯ನೇ ತರಗತಿ ವಿದ್ಯಾರ್ಥಿನಿ ಕು. ಚಿನ್ಮಯಿ ಜೆ.ಎನ್. ಅವರು ರಚಿಸಿದ ಗಾಂಧೀಜಿ ಕಲಿಸಿದ ಸರಳ ಜೀವನ-ಮಹಾನ್ ಸಂದೇಶ ಕುರಿತ ಪ್ರಬಂಧಕ್ಕಾಗಿ ತೃತೀಯ ಬಹುಮಾನ ದೊರೆತಿದೆ.
ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ತುಮಕೂರು ನಗರದ ಶ್ರೀ ಶಾರದಾಂಬ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ(ವಿಜ್ಞಾನ ವಿಭಾಗ) ವಿದ್ಯಾರ್ಥಿನಿ ಕು. ವರಲಕ್ಷಿö್ಮÃ ಅವರು ಸತ್ಯ ಮತ್ತು ಅಹಿಂಸೆ-ನನ್ನ ಜೀವನದ ದಾರಿ, ಕುಣಿಗಲ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ(ವಾಣಿಜ್ಯ ವಿಭಾಗ) ವಿದ್ಯಾರ್ಥಿನಿ ಕು. ಮಾನ್ಯ ಆರ್. ಅವರು ಸತ್ಯ ಮತ್ತು ಅಹಿಂಸೆ-ನನ್ನ ಜೀವನದ ದಾರಿ ಹಾಗೂ ಪಾವಗಡ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು. ಅನಘ ಅವರು ರಚಿಸಿದ ಅಸಮಾನತೆ ನಿವಾರಣೆಗೆ ಗಾಂಧೀಜಿ ಅವರ ಕೊಡುಗೆ ಕುರಿತ ಪ್ರಬಂಧಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಲಭಿಸಿದೆ.
ಕಾಲೇಜು/ಸ್ನಾತಕೋತ್ತರ ವಿಭಾಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ(ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ) ವಿದ್ಯಾರ್ಥಿನಿ ಕು. ರಂಗಲಕ್ಷಿö್ಮ ಎಚ್. ಅವರು ರಚಿಸಿದ ಸತ್ಯಾಗ್ರಹ ಇಂದಿನ ಕಾಲದ ಅವಶ್ಯಕತೆ ಕುರಿತ ಪ್ರಬಂಧಕ್ಕಾಗಿ ಪ್ರಥಮ ಬಹುಮಾನ ಹಾಗೂ ಕು.ಸುಪ್ರಿತ ಜಿ. ಅವರು ರಚಿಸಿದ ಗಾಂಧೀಜಿಯ ಶಿಕ್ಷಣ, ತತ್ವ-ನೈತಿಕತೆ, ಕೌಶಲ್ಯ, ಸೇವಾಭಾವ ಕುರಿತ ಪ್ರಬಂಧಕ್ಕಾಗಿ ದ್ವಿತೀಯ ಬಹುಮಾನ ಮತ್ತು ದ್ವಿತೀಯ ವರ್ಷದ ಪದವಿ(ಕಲಾ ವಿಭಾಗ) ವಿದ್ಯಾರ್ಥಿನಿ ಕು. ಮೇಘನ ಅವರು ರಚಿಸಿದ ನೈತಿಕ ರಾಜಕಾರಣ-ಗಾಂಧೀಜಿಯ ತತ್ವಗಳ ಇಂದಿನ ಪ್ರಾಸಂಗಿಕತೆ ಕುರಿತ ಪ್ರಬಂಧಕ್ಕಾಗಿ ತೃತೀಯ ಬಹುಮಾನ ದೊರೆತಿದೆ.

(Visited 1 times, 1 visits today)
GANDI JAYANTHI kannada news karnataka Koratagere local news tumakur tumkur tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
Next Article ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ
News Desk Benkiyabale

Related Posts

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

October 02, 2026 6:41 pm news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news
ತಾಜಾ ಸುದ್ಧಿಗಳು
news

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

October 02, 2026 6:41 pm
news

ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್

October 02, 2026 6:39 pm
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
Our Youtube Channel
Our Picks

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

October 02, 2026 6:41 pm

ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್

October 02, 2026 6:39 pm

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

By News Desk BenkiyabaleOctober 02, 2026 6:41 pm

ಹುಳಿಯಾರು: ಜನಸಾಮಾನ್ಯರ ಹಾಗೂ ಬಡವರ ಹಸಿವು ನೀಗಿಸಬೇಕಿದ್ದ ಇಲ್ಲಿನ ಇಂದಿರಾ ಕ್ಯಾಂಟೀನ್ ಸೂಕ್ತ ನಿರ್ವಹಣೆ ಮತ್ತು ನಿರ್ಲಕ್ಷ÷್ಯದಿಂದಾಗಿ ಕಳೆದ ಒಂದು…

ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್

October 02, 2026 6:39 pm

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.