ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ ಸೀರತ್ ಅಭಿಯಾನದ ಭಾಗವಾಗಿ ಮುಂದಿನ ನವೆಂಬರ್ ಮಾಹೆಯಲ್ಲಿ ನಡೆಯುವ ಪ್ರಭಂಧ ಸ್ಪರ್ಧೆಯ ರೂಪುರೇಷೆಗಳನ್ನು ಸಿದ್ದಪಡಿಸುವ ನಿಟ್ಟಿನಲ್ಲಿ ಇಂದು ವಿವಿಧ ಶಾಲಾ, ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವರ್ಗದವರ ಸಭೆಯನ್ನು ಆಯೋಜಿಸಲಾಗಿತ್ತು.
ಜಮಾಆತೆ ಇಸ್ಲಾಮೀ ಹಿಂದ್ನ ಸ್ಥಾನಿಯ ಅಧ್ಯಕ್ಷರಾದ ಆಸ್ರಾರ್ ಅಹಮದ್ ಅವರ ನೇತೃತ್ವದಲ್ಲಿ ವಿವಿಧ ಶಾಲೆ ಮತ್ತು ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಯರುಗಳು ಭಾಗವಹಿಸಿ, ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪ್ರಭಂಧಕ್ಕೆ ಹೆಸರು ನೊಂದಾಯಿಸುವ ಕ್ಯೂ ಆರ್.ಕೋಡ್ ಒಳಗೊಂಡ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಜಮಾಆತೆ ಇಸ್ಲಾಮೀ ಹಿಂದ್ನ ಸ್ಥಾನಿಯ ಅಧ್ಯಕ್ಷರಾದ ಆಸ್ರಾರ್ ಅಹಮದ್,ಬಹುತ್ವದ ಭಾರತದಲ್ಲಿ ದ್ವೇಷ, ಅಸೂಯೆ, ಪರಸ್ವರರಲ್ಲಿ ಅಪನಂಬಿಕೆ, ಪ್ರೂರ್ವಾಗ್ರಹ ಪೀಡಿತ ಆಲೋಚನೆಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ಧ ವಾತಾವರಣ ಮಾಯವಾಗಿ, ಆಶಾಂತಿಯೇ ಮನೆ ಮಾಡಿರುವ ಈ ಕಾಲದಲ್ಲಿ ಎಲ್ಲಾ ಧರ್ಮದವರಲ್ಲಿ ಸೌರ್ಹಾತೆ ಮತ್ತು ಪರಸ್ವರ ನಂಬಿಕೆ ಉಂಟು ಮಾಡುವ ಉದ್ದೇಶದಿಂದ ಜಮಾಆತೆ ಇಸ್ಲಾಮಿ ಹಿಂದೆ ೨೦೨೬ ನವೆಂಬರ್ ತಿಂಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗೆ ೧೦೦ ಅಂಕಗಳಿಗೆ ಸಿಮೀತವಾಗಿ ಒಂದು ಪ್ರಭಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಕನ್ನಡ, ಇಂಗ್ಲೀಷ್ ನಲ್ಲಿ ಇರುವ ಪ್ರವಾದಿ ಮುಹಮ್ಮದ್ರನ್ನು(ಸ) ಅರಿಯಿರಿ ಎಂಬ ಪುಸಕ್ತವನ್ನು ಓದಿ, ಕನ್ನಡ,ಉರ್ದು ಮತ್ತು ಇಂಗ್ಲೀಷ್ ಮೂರು ಭಾಷೆಗಳಲ್ಲಿ ಪ್ರಬಂಧ ಬರೆಯಲು ಅವಕಾಶವಿದೆ.ಮುಸ್ಲಿಂಯೇತರರಿಗೆ ಪ್ರಥಮ ಬಹುಮಾನವಾಗಿ ೨೫ ಸಾವಿರ, ದ್ವಿತೀಯ ಬಹುಮಾನವಾಗಿ ೨೦ ಸಾವಿರ ಹಾಗೂ ತೃತೀಯ ಬಹುಮಾನವಾಗಿ ೧೫ ಸಾವಿರ ರೂಗಳನ್ನು ನೀಡಲಾಗುವುದು. ಹಾಗೆಯೇ ಮುಸ್ಲೀಂ ರಿಗೆ ೨೦,೧೫ ಮತ್ತು ೧೦ ಸಾವಿರ ರೂಗಳನ್ನು ಮೊದಲು ಮೂರು ಬಹುಮಾನವಾಗಿ ನೀಡಲಾಗುವುದು.ಪ್ರಶ್ನೆ ಪತ್ರಿಕೆ, ಮೌಲ್ಯ ಮಾಪನ ಕುರಿತಂತೆ ಸಮಿತಿ ಇಲ್ಲಿ ಬರುವ ಸಲಹೆಗಳನ್ನು ಆಧರಿಸಿ, ತೀರ್ಮಾನ ಕೈಗೊಳ್ಳಲಿದೆ. ಹೆಚ್ಚು ಹೆಚ್ಚು ಮುಸ್ಲೀಂಯೇತರರು ಪಾಲ್ಗೊಳ್ಳುವಂತೆ ಮಾಡಬೇಕಿದೆ.ಆ ಮೂಲಕ ನಮ್ಮ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶ ಜಮಾಆತೆ ಇಸ್ಲಾಮೀ ಹಿಂದ್ನದ್ದಾಗಿದೆ ಎಂದು ಆಸ್ರಾರ್ ಅಹಮದ್ ತಿಳಿಸಿದರು.
ಜಮಾಆತೆ ಇಸ್ಲಾಮೀ ಹಿಂದ್ನ ಚಿಕ್ಕಮಗಳೂರು ಘಟಕದ ಜಿಲ್ಲಾಧ್ಯಕ್ಷರಾದ ರಿಜ್ವಾನ್ ಖಾಲಿದ್ ಮಾತನಾಡಿ,ಸಮಾಜಕ್ಕೆ ಪ್ರಪಂಚದ ಎರಡನೇ ಅತಿ ದೊಡ್ಡ ಜನಸಂಖ್ಯೆ ಗುರುಗಳೆಂದು ಒಪ್ಪಿರುವ ಪ್ರವಾದಿ ಮುಹಮ್ಮದ್(ಸ)ಅವರ ಕೊಡುಗೆ ಏನು?, ಶಿಕ್ಷಣ, ಮಹಿಳೆಯರು, ಭೂಮಿ, ಸೌರ್ಹಾಧತೆ,ಶಾಂತಿಗಾಗಿ ಅವರು ಕೈಗೊಂಡ ಮಾರ್ಗಗಳೇನು ಎಂಬುದನ್ನು ಸಮಾಜಕ್ಕೆ, ಅದರಲ್ಲಿಯೂ ದಾರಿ ತಪುö್ಪತ್ತಿರುವ ಜೇನ್, ಜೀ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇದೊಂದು ಅದ್ಬುತ ಕಾರ್ಯಕ್ರಮವಾಗಿದೆ.ಜ್ಞಾನವನ್ನು ಎಲ್ಲಿಂದಲಾದರೂ ಪಡೆದುಕೋ, ನಿನ್ನ ನೀ ಅರಿತರೆ ದೇವ ಇಂತಹ ಸಂದೇಶಗಳ ಮೂಲಕ ಪ್ರವಾದಿಗಳ ಸಂದೇಶಗಳ ಮೂಲಕ ದ್ವೇಷ, ಅಸೂಯೆಗೆ ಔಷದಿ ಕಂಡು ಹಿಡಿಯುವ ಕೆಲಸ ಆಗಬೇಕೆಂದರು.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಚೇತನ್ ಪುಟ್ಟಪ್ಪ,ಮೌಲಾನ ಆಜಾದ್ ವಸತಿ ಶಾಲೆಯ ಪ್ರಾಂಶುಪಾಲರಾದ ರಿಜ್ವಾನ್ ಪಾಷ,ಶೇಖ್ ಮುಹಮ್ಮದ್ ಅನ್ವರ್ ಪಾಷ,ಎಸ್.ಜಿ.ಆರ್. ಶಾಲೆಯ ಪ್ರಾಂಶುಪಾಲರಾದ ಡಾ.ಮೋಹನ್ಕುಮಾರ್,ಜಮಾಆತೆ ಇಸ್ಲಾಮೀ ಹಿಂದ್ನ ಶೇಖ್ ಜಿಯಾವುಲ್ಲಾ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡು, ಅಭಿಯಾನದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
(Visited 1 times, 1 visits today)





