BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
  • ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ
  • ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ
  • ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು
  • ಶಿಕ್ಷಕ ರಾಷ್ಟç ನಿರ್ಮಾಣದ ಶಿಲ್ಪಿ: ಡಾ.ಶಿವಕುಮಾರಯ್ಯ
  • ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರೈತರ ಆಕ್ರೋಶಕ್ಕೆ ನಡುಗಿತು ರಾಜಧಾನಿ : ಬೇಡಿಕೆ ಈಡೇರಿಕೆಗೆ 15 ದಿನ ಗಡುವು
ಕರ್ನಾಟಕ ಸುದ್ಧಿಗಳು

ರೈತರ ಆಕ್ರೋಶಕ್ಕೆ ನಡುಗಿತು ರಾಜಧಾನಿ : ಬೇಡಿಕೆ ಈಡೇರಿಕೆಗೆ 15 ದಿನ ಗಡುವು

By News Desk BenkiyabaleUpdated:November 19, 2018 6:30 pm

ಬೆಂಗಳೂರು:

      ಕಬ್ಬಿನ ಬಾಕಿ ಬಿಡುಗಡೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮವಾರ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದರು.

      ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಹಾಸನ, ಮಂಡ್ಯ, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ, ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಿದ ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ವಾತಂತ್ರ ಉದ್ಯಾನವದವರೆಗೂ ಮೆರವಣಿಗೆ ಸಾಗಿ ವಿಧಾನಸೌಧದತ್ತ ತೆರಳಲು ಪ್ರಯತ್ನಿಸಿದರೂ, ಪೊಲೀಸರ ಮಧ್ಯಪ್ರವೇಶದಿಂದಾಗಿ ಅಲ್ಲಿಯೇ ಧರಣಿ ನಡೆಸಿದರು.

      ರೈತರು ಬೆಳೆದ ಕಬ್ಬು ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ರೈತರನ್ನು ವಂಚಿಸಲಾಗುತ್ತಿದೆ. ಈ ಮೂಲಕ ರೈತರ ಬದುಕಿನ ಜತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಸರಕಾರ ವಿರುದ್ಧ ಕಿಡಿಕಾರಿದರು.

ಸಿಎಂ ವಿರುದ್ಧ ಕಿಡಿ:

       ರವಿವಾರ ನಗರದ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದ ಸಮಾರೋಪದ ಭಾಷಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮಹಿಳೆಯ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಮಣ್ಣಿನ ಮಗ ಎನ್ನುವ ಕುಮಾರಸ್ವಾಮಿ ಈ ರೀತಿಯಾಗಿ ಮಾತನಾಡಿರುವುದು ಎಷ್ಟು ಸರಿ. ರೈತರನ್ನು ಪಕ್ಷಾತೀತವಾಗಿ ಕಾಣಬೇಕಿದೆ. ಆದರೆ, ಜೆಡಿಎಸ್‌ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹೀಗೆ ಮಾತನಾಡಿರುವುದು ಸರಿಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

      ಕ್ಷಮೆ ಯಾಚಿಸಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ ಮಹಿಳೆಯ ಬಗ್ಗೆ ಅವಮಾನಕರವಾಗಿ ಮಾತನಾಡಿರುವುದಕ್ಕೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾವು ಯಾರು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

      ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ನಾನು ಯಾರಿಗೂ ಅಗೌರವ ತೋರುವ ರೀತಿಯಲ್ಲಿ ಮಾತನಾಡುವುದಿಲ್ಲ, ಎಚ್ಚರಿಕೆಯಿಂದ ಮಾತನಾಡುತ್ತೇನೆ. ನನ್ನ ಹೇಳಿಕೆಯಲ್ಲಿ ಯಾವುದೇ ಅವಮಾನಕರವಾದ ಪದ ಬಳಕೆ ಮಾಡಿಲ್ಲ. ‘ತಾಯಿ’ ಎಂಬ ಪದ ಬಳಕೆ ಮಾಡಿದ್ದೇನೆ. ಗ್ರಾಮೀಣ ಭಾಷೆಯಲ್ಲಿ ನಾನು ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

      ರೈತ ಮುಖಂಡ ಕೆ.ಪಿ.ಗಂಗಾದರ್ ಮಾತನಾಡಿ, ಪ್ರತಿಭಟನೆ ನಡೆಸುವವರು ಗೂಂಡಾಗಳು ಎನ್ನುವ ಸಿಎಂ ಹೇಳಿಕೆ ಅನ್ನದಾತರಿಗೆ ಮಾಡಿದ ಅವಮಾನವಾಗಿದೆ. ರೈತರ ವಿಚಾರದಲ್ಲಿ ರಾಜಕೀಯ ನಡೆಸಿರುವುದು ಸರಿಯಲ್ಲ. ಅದರಲ್ಲಿಯೂ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆ ಕುರಿತು ಹಗುರವಾಗಿ ಮಾತನಾಡಿರುವುದು ಘೋರ ಅಪರಾಧ ಎಂದರು.

      ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಅಸಾಧ್ಯವೇನಿಲ್ಲ. ಮುಖ್ಯಮಂತ್ರಿಗೆ ಇಚ್ಛಾಶಕ್ತಿಯಿದ್ದರೆ ಒಂದು ದಿನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬಹುದು. ಅದರ ಬದಲಿಗೆ ಪ್ರತಿಭಟನೆ ಮಾಡುವವರನ್ನು ಯಾವ ಪಕ್ಷದವರು ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಸಂಚಾರ ಅಸ್ತವ್ಯಸ್ಥ: 

      ಸಿಟಿ ರೈಲು ನಿಲ್ದಾಣದಿಂದ ರೈತರು ಬೃಹತ್ ಮೆರವಣಿಗೆ ನಡೆಸಿ ಸ್ವಾತಂತ್ರ ಉದ್ಯಾನವನದ ರಸ್ತೆಯಲ್ಲಿಯೇ ಧರಣಿ ನಡೆಸಿದ್ದರಿಂದ ವಿವಿಧ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರು ಪ್ರಯಾಣಿಸಲು ಪರದಾಡುವಂತಾಯಿತು.

      ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್, ಮೆಜೆಸ್ಟಿಕ್‌ನಿಂದ ಯಲಹಂಕ, ಕೋರಮಂಗಲ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಕೂಡಿತ್ತು. ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಮಾರ್ಗಗಳನ್ನು ಬದಲಾವಣೆ ಮಾಡಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ರಸ್ತೆಯಲ್ಲಿಯೇ ಧರಣಿ ನಡೆಸಿದ್ದರಿಂದ ನಗರದಿಂದ ಹೊರಗೆ ಹೋಗುವ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‌ಗಳು, ಖಾಸಗಿ ವಾಹನಗಳು, ಆಟೋಗಳು, ಸರಕು ಸಾಗಾಣಿಕೆ ವಾಹನಗಳು ಗಂಟೆಗಟ್ಟಲೇ ಸಾಲುಗಳಲ್ಲಿ ನಿಲ್ಲುವಂತಾಗಿತ್ತು.

15 ದಿನಗಳ ಗಡುವು

      ಕಬ್ಬಿನ ಬಾಕಿ ಬಿಡುಗಡೆ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಶೀಘ್ರ ಸಾಲ ಮನ್ನಾ ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಮುಂದಿನ 15 ದಿನಗಳೊಳಗೆ ಈಡೇರಿಸಬೇಕು. ಇಲ್ಲದಿದ್ದರೆ, ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿ ಪ್ರತಿಭಟನಾ ಧರಣಿಯನ್ನು ವಾಪಸ್ ಪಡೆದರು.

ಬಿಗಿ ಭದ್ರತೆ

      ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ಡಿಸಿಪಿಗಳಾದ ಅನುಚೇತ್ ಹಾಗೂ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಸ್ವಾತಂತ್ರ ಉದ್ಯಾನವನ, ಮೆಜೆಸ್ಟಿಕ್, ಕೆ.ಆರ್.ವೃತ್ತ, ವಿಧಾನಸೌಧ, ರಾಜಭವನ ಸುತ್ತಮುತ್ತಲೂ ಭಾರಿ ಭದ್ರತೆ ಏರ್ಪಡಿಸಿದ್ದರು. ಸ್ವಾತಂತ್ರ ಉದ್ಯಾನವನದಲ್ಲಿ ಒಂದು ಸಾವಿರ ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಎರಡು ವಾಟರ್ ಜೆಟ್, ಅಶ್ರುವಾಯು ವಾಹನ, ಅಗ್ನಿಶಾಮಕ ಪಡೆ ಸೇರಿದಂತೆ ವಿವಿಧ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

(Visited 33 times, 1 visits today)
Previous Articleಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನ
Next Article ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ..? : ಸಿಎಂ ಸ್ಪಷ್ಟನೆ ..!
News Desk Benkiyabale

Related Posts

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm news
ತಾಜಾ ಸುದ್ಧಿಗಳು
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm
news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm
news

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm
news

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm
news

ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು

September 07, 2026 4:51 pm
Our Youtube Channel
Our Picks

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm

ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು

September 07, 2026 4:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

By News Desk BenkiyabaleSeptember 08, 2026 5:26 pm

ಪಾವಗಡ ಮುಂಬರುವ ಶ್ರೀ ಗಣೇಶ ಚತುರ್ಥಿ ಸೇರಿದಂತೆ ಯಾವುದೇ ಸಾರ್ವಜನಿಕ ಹಬ್ಬ ಹರಿದಿನಗಳು ಹಾಗೂ ಸಮಾರಂಭಗಳಲ್ಲಿ ಧ್ವನಿವರ್ಧಕ ಡಿಜೆ ಬಳಕೆಯನ್ನು…

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.