ಎ.ಸಿ.ಬಿ ಬಲೆಗೆ ಬಿದ್ದ ಕೊರಟಗೆರೆ ಸರ್ವೇಯರ್

ಕೊರಟಗೆರೆ:

      ಕೊರಟಗೆರೆ ತಾಲ್ಲೂಕು ಕಛೇರಿಯಲ್ಲಿಯ ಭೂ ದಾಖಲೆಗಳ ಸಹಾಯ ನಿರ್ದೇಶಕರ ಕಛೇರಿಯಲ್ಲಿ 4:20 ರ ಸಮಯದಲ್ಲಿ 5000(ಐದು ಸಾವಿರ) ಲಂಚ ಪಡೆಯುವಾಗ ಎ.ಸಿ.ಬಿ ಬಲೆಗೆ ಸರ್ವೇಯರ್ ಎಚ್. ಆರ್. ಮಮತಾ ಬಿದ್ದಿದ್ದಾರೆ.

      ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿ ಕುರಂಕೋಟೆ ಗ್ರಾಮದ ನಿವಾಸಿಯೊಬ್ಬರು ಸರ್ವೇ ಹದ್ದುಬಸ್ತು ಕೋರಿ ತೋವಿನಕೆರೆ ನಾಡ ಕಛೇರಿಗೆ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಿದ್ದು ಸರ್ವೇಯರ್ , ಹೆಚ್.ಆರ್ ಮಮತ ಸರ್ವೇ ಮಾಡಿಕೊಟ್ಟಿದ್ದು ಭೂ ದಾಖಲೆಗಳ ಸಹಾಯ ನಿರ್ದೇಶಕರ ಕಛೇರಿ, ತಾಲ್ಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಬೇಡಿಕೆ ಇಟ್ಟಿದ್ದ 10,000 (ಹತ್ತು ಸಾವಿರ ) ರೂಗಳ ಪೈಕಿ 5000(ಐದು ಸಾವಿರ) ಹಣ ಪಡೆಯುವಾಗ ಎ.ಸಿ.ಬಿ.ಬಲೆಗೆ ಬಿದ್ದಿದ್ದಾರೆ.

 

(Visited 16 times, 1 visits today)

Related posts