ಚಾಲಕನ ಅತಿವೇಗದ ಚಾಲನೆಗೆ ಆಟೋ ಡ್ರೈವರ್ ಬಲಿ

ಕೊರಟಗೆರೆ:

      ಅಶೋಕ್ ಲೇಲ್ಯಾಂಡ್ ವಾಹನ ಸವಾರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಓವರ್‍ಟೇಕ್ ಮಾಡುವ ವೇಳೆ ಎದುರಿಗೆ ಆಗಮಿಸುತ್ತೀದ್ದ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಡ್ರೈವರ್ ಸ್ಥಳದಲ್ಲಿಯೇ ಮೃತಪಟ್ಟರೇ ಆಟೋ ಮೂರು ಪಲ್ಟಿ ಹೊಡೆದಿರುವ ಘಟನೆ ಬುಧವಾರ ಮುಂಜಾನೆ ಜರುಗಿದೆ.

     ಕೊರಟಗೆರೆ ಪಟ್ಟಣದ ಸಮೀಪದ ರಾಜ್ಯ ಹೆದ್ದಾರಿಯ ನವೀಲುಕುರಿಕೆ ಕ್ಯಾಸ್‍ನಲ್ಲಿ ಅಶೋಕ ಲೇಲ್ಯಾಂಡ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಪುಟ್ಟನರಸಯ್ಯನಪಾಳ್ಯದ ವಾಸಿಯಾದ ಮುತ್ತುರಾಜು(44) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

      100ಕೀಮೀ ವೇಗದಲ್ಲಿ ಲಾರಿ ಚಲಾಯಿಸುತ್ತೀದ್ದ ಸವಾರ ಮತ್ತೋಂದು ವಾಹನವನ್ನು ಓವರ್‍ಟೇಕ್ ಮಾಡಲು ಯತ್ನಿಸಿ ವಾಹನ ನಿಯಂತ್ರಣಕ್ಕೆ ಬರದೇ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ತನ್ನ ಮಡದಿಯ ತವರು ಮನೆ ಮಧುಗಿರಿಯ ಮಾರಿಬೀಳ್‍ನಿಂದ ತನ್ನ ಮನೆಗೆ ಬರುತ್ತೀದ್ದ ವೇಳೆ ದುರ್ಘಟನೆ ಸಂಭವಿಸಿ ಆಟೋ ಡ್ರೈವರ್ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

      ಅಶೋಕ ಲೇಲ್ಯಾಂಡ್ ಲಾರಿಯ ಸ್ಟೇರಿಂಗ್ ಬಲಭಾಗದ ಬದಲಾಗಿ ಎಡಭಾಗದಲ್ಲಿದೆ. ವಾಹನ ಸವಾರನಿಗೆ ಎಡಭಾಗ ಚಾಲನೆಯ ಅನುಭವ ಇಲ್ಲದೇ ಅಪಘಾತ ಆಗಿದೆ ಎನ್ನಲಾಗಿದೆ. ರಾಜ್ಯ ಹೆದ್ದಾರಿಯ ತುರ್ತು ವಾಹನವು ಗಂಟೆಯಾದರೂ ಸ್ಥಳಕ್ಕೆ ಆಗಮಿಸದ ಹಿನ್ನಲೆ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

      ಚಾಲಕನ ನಿಯಂತ್ರಣಕ್ಕೆ ಬರದ ಲಾರಿವು ಅಪಘಾತ ಆದ ಮೇಲೆಯು ಅರ್ಧ ಕೀಮೀ ದೂರಕ್ಕೆ ಚಲಿಸಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿ ಆಗಿದ್ದಾರೆ. ಕುಟುಂಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಸಿಪಿಐ ನಧಾಪ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

(Visited 4 times, 1 visits today)

Related posts

Leave a Comment