ಶೆಟ್ಟಿಗೊಂಡನಹಳ್ಳಿ ಸಮೀಪ ಮೂರು ದ್ವಿಚಕ್ರ ವಾಹನಗಳ ಅಪಘಾತ : ನಾಲ್ವರು ದುರ್ಮರಣ


ತುರುವೇಕೆರೆ:

ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಸಮೀಪ ಯಡಿಯೂರು ಕಲ್ಲೂರು ಮುಖ್ಯರಸ್ತೆಯಲ್ಲಿ ಏಕಕಾಲದಲ್ಲಿ ಮೂರು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಡಿಸ್ ಕವರ್ ಮತ್ತು ಪಲ್ಸರ್ ಬೈಕ್ ಗಳಲ್ಲಿ ತೆರಳುತ್ತಿದ್ದ ನಾಲ್ವರು ತೆರಳುತ್ತಿದ್ದರು ಎನ್ನಲಾಗಿದ್ದು ಇತ್ತ ಕಲ್ಲೂರು ಕಡೆಯಿಂದ ಸ್ಪೆಂಡರ್ ಬೈಕಿನಲ್ಲಿ ಇಬ್ಬರು ಬರುತ್ತಿದ್ದರು ಎನ್ನಲಾಗಿದೆ. ಈ ಮೂರು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ಕು ಸಾವನ್ನಪ್ಪಿದ್ದಾರೆ. ಇನ್ನು ಓರ್ವನ ಸ್ಥಿತಿ ಗಂಬೀರವಾಗಿದ್ದು ಸ್ಥಳೀಯರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದಲ್ಲಿ ಒಬ್ಬ ಅಪಾಯದಿಂದ ಪಾರಾಗಿದ್ದಾನೆ. ಮಾಯಸಂದ್ರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(Visited 1,944 times, 1 visits today)

Related posts