BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ
  • ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ
  • ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ
  • “ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ
  • ನಾಲ್ಕನೇ ಶ್ರಾವಣ ಶನಿವಾರ: ಬಯಲು ಆಂಜನೇಯ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ
  • ಪ್ರಬುದ್ಧ ಮನಸುಗಳ ನಿರ್ಮಾಣವೇ ಶಿಕ್ಷಕರ ಜವಾಬ್ದಾರಿ
  • ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹ
  • ಸರ್ಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗುಬ್ಬಿ : ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ
Trending

ಗುಬ್ಬಿ : ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ

By News Desk BenkiyabaleUpdated:January 12, 2022 6:22 pm

ಗುಬ್ಬಿ :

       ಸುಮಾರು 40 ವರ್ಷಗಳಿಂದ ಭೂ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಅರಣ್ಯ ಪ್ರದೇಶವೆಂದು ದಾಖಲಾತಿಗಳು ಇಲ್ಲದಿದ್ದರೂ ಅಧಿಕಾರಿಗಳು ಒಕ್ಕಲೆಬ್ಬಿಸಲು ಹೋಗುತ್ತಿರುವುದು ಎಷ್ಟು ಸಮಂಜಸವೆಂದು ಗುಬ್ಬಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ದುಗ್ಗಪ್ಪನವರ ಮೇಲೆ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣಲ್ಲಿ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ರಂಗನಹಳ್ಳಿ ಸರ್ವೆ ನಂ 7ರಲ್ಲಿ ಸುಮಾರು 40 ವರ್ಷಗಳಿಂದ 35ಜನ ರೈತರು ಭೂ ಸಾಗುವಳಿ ಮಾಡಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದು ಈಗಾಗಲೇ ಈ ಕೃಷಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿದ್ದು ಹಾಗೂ ತೆಂಗಿನಗಿಡ, ಹುಣಸೇಗಿಡಗಳನ್ನು ಬೆಳೆಸಿರುವುದು ಅಧಿಕಾರಿಗಳ ಕಣ್ಣಿಗೆ ಕಾಣಲಿಲ್ಲವೇ ? ಈಗ ಒಕ್ಕಲೆಬ್ಬಿಸುವ ಹಂತಕ್ಕೆ ಹೋಗಲು ಕಾರಣವೇನು ? ತಾಲ್ಲೂಕು ದಂಡಾಧಿಕಾರಿಗಳೇ ಭೂಒಡೆತನದ ಹಕ್ಕುಪತ್ರ ನೀಡಿದ್ದು ಸರ್ಕಾರ ನೀಡಿದಂತಾಗಲಿಲ್ಲವೇ ? ಎಂದ ಅವರು ಮುಂದಿನ ದಿನದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆದುಕೊಂಡು ಒಕ್ಕಲೆಬ್ಬಿಸುವ ಹಂತಕ್ಕೆ ತಲುಪಿದ್ದಲ್ಲಿ ನಾನೇ ಆ ರೈತರಿಂದಲೇ ತೆಂಗಿನಮರಕ್ಕೆ ಕಟ್ಟಿಹಾಕಿಸಿ ಆರಕ್ಷಕ ಠಾಣೆಗೆ ದೂರು ಕೊಡಿಸುತ್ತೇನೆ ಎಂದು ಎಚ್ಚರಿಸಿದರು.
ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕರು ಮಾತನಾಡಿ 1264 ಹೆಕ್ಟೇರ್ ರಾಗಿ ಬೆಳೆ ಹಾಳಾಗಿದ್ದು ಸರ್ಕಾರದಿಂದ ಬರುವ ಪರಿಹಾರಧನವನ್ನು ನೇರವಾಗಿ ರೈತರ ಖಾತೆಗಳಿಗೆ ಹಾಕಿರುವುದಾಗಿ ತಿಳಿಸಿದರು. ಕಡಬ ಕೆರೆಯು ತುಂಬಿದ್ದು ಹಿನ್ನಿರಿನಿಂದ ಬೆಳೆಯುವಂತಹ ಭತ್ತದ ಬಿತ್ತನೆ ಬೀಜವನ್ನು ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ರವರಿಗೆ ಶಾಸಕರು ಪ್ರಶ್ನಿಸಿ ಗುದ್ದಲಿ ಪೂಜೆ ನೆರವೇರಿಸಿ 1 ತಿಂಗಳೊಳಗಾಗಿ ರಸ್ತೆ ನಿರ್ಮಿಸಿ 3 ದಿನಗಳೊಳಗಾಗಿ ರಸ್ತೆ ಹದಗೆಟ್ಟಿದೆ. ಇದರಿಂದ ಸರ್ಕಾರದ ಹಣವು ಎಲ್ಲಿ ಸೋರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೆ ಸಂಪೂರ್ಣ ಜವಾಬ್ದಾರಿಯನ್ನು ಪ್ರತಿ ಹಂತದಲ್ಲೂ ಪರೀಕ್ಷಿಸಿ ಸರಿಯಾದ ರಸ್ತೆಗಳನ್ನು ನಿರ್ಮಿಸಬೇಕೆಂದು ಇಂಜಿನಿಯರ್‍ಗಳನ್ನು ಎಚ್ಚರಿಸಿದರು.
ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲಿಸಿ ಪ್ರತಿ ಗ್ರಾಮದಲ್ಲೂ 3-4 ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು ತನ್ನದೇ ಸ್ವತ ಸ್ಥಳವಾದ ಮಣ್ಣಮ್ಮ ದೇವಿಯ ದೇವಾಲಯದ ಹತ್ತಿರ ಇರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು ಇಲಾಖೆಯ ಸಿಬ್ಬಂದಿಗಳು ನಿದ್ದೆ ಮಾಡುತ್ತಿದ್ದಾರೆಯೇ ? ಎಂದ ಅವರು ಮದ್ಯ ಮಾರಾಟಗಾರರನ್ನು ಹಿಡಿದಾಗ ನನ್ನ ಮೊಬೈಲ್‍ಗೆ ಕರೆ ಮಾಡುತ್ತಾರೆ. ಅಧಿಕಾರಿಗಳು ಈಗಾಗಲೇ ಪ್ರಥಮ ವರದಿಯನ್ನು ದಾಖಲಿಸಿದ್ದೇನೆ ಎಂದು ತಿಳಿಸಿ ಅವರ ಮೇಲೆ ದೂರು ದಾಖಲಿಸುವಂತೆ ಸೂಚಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಇಲಾಖೆಯ ಅಧಿಕಾರಿ ಈಗಾಗಲೇ 174 ಕೇಸ್‍ಗಳನ್ನು ಏಪ್ರಿಲ್‍ನಿಂದ ಇಲ್ಲಿಯವೆರಗೂ ಹಾಕಲಾಗಿದ್ದು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ ಅವರು ಬೇರೆ ಕಡೆಯಿಂದ ಗಾಂಜಾ ಸಾಗಿಸುತ್ತಿದ್ದವರನ್ನು ಬಂಧಿಸಿ, 3.876 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೂ 181 ಕೇಸ್‍ಗಳನ್ನು ದಾಖಲಿಸಿರುವುದಾಗಿ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

(Visited 76 times, 1 visits today)
Previous Articleತುಮಕೂರು : ಕೋವಿಡ್ ಹೆಚ್ಚಳ : ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬೇಡಿ – ಡಿಸಿ
Next Article ವಸತಿ ಶಾಲೆಯ 25 ಮಕ್ಕಳು, ಅಡುಗೆಯವರಿಗೆ ಕೊರೋನಾ
News Desk Benkiyabale

Related Posts

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

September 05, 2026 4:13 pm news

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm news

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm news
ತಾಜಾ ಸುದ್ಧಿಗಳು
news

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

September 05, 2026 4:13 pm
news

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm
news

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm
news

“ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ

September 05, 2026 3:51 pm
news

ನಾಲ್ಕನೇ ಶ್ರಾವಣ ಶನಿವಾರ: ಬಯಲು ಆಂಜನೇಯ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ

September 05, 2026 3:49 pm
news

ಪ್ರಬುದ್ಧ ಮನಸುಗಳ ನಿರ್ಮಾಣವೇ ಶಿಕ್ಷಕರ ಜವಾಬ್ದಾರಿ

September 05, 2026 3:48 pm
Our Youtube Channel
Our Picks

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

September 05, 2026 4:13 pm

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm

“ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ

September 05, 2026 3:51 pm

ನಾಲ್ಕನೇ ಶ್ರಾವಣ ಶನಿವಾರ: ಬಯಲು ಆಂಜನೇಯ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ

September 05, 2026 3:49 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ

By News Desk BenkiyabaleSeptember 05, 2026 4:13 pm

ತುಮಕೂರು: ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ…

ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ

September 05, 2026 3:54 pm

ನಿಯಮ ಮೀರಿದರೆ ಕ್ರಮ: ತಹಶೀಲ್ದಾರ್ ವೈ.ರವಿ

September 05, 2026 3:53 pm

“ಭಾರತ್ ಜೋಡೋ’ ಕಾರ್ಯಕ್ರಮದ ಲೋಗೋ ಅನಾವರಣ

September 05, 2026 3:51 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.