BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಿದ್ದೆಗೆ ಜಾರಿದ ಕಂದಾಯ ಇಲಾಖೆ
  • ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು
  • ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ
  • ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ
  • ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ
  • ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ
  •  ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ
  • ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನೀರಾವರಿಗೆ ಆದ್ಯತೆ ನೀಡಿದವರು ಅರಸು: ಸಂಸದ ಜಿ.ಎಸ್.ಬಸವರಾಜು
ಇತರೆ ಸುದ್ಧಿಗಳು

ನೀರಾವರಿಗೆ ಆದ್ಯತೆ ನೀಡಿದವರು ಅರಸು: ಸಂಸದ ಜಿ.ಎಸ್.ಬಸವರಾಜು

By News Desk BenkiyabaleUpdated:June 16, 2022 5:47 pm

ತುಮಕೂರು:


ಬ್ರಿಟಿಷರ ಕಾಲದಿಂದಲೂ ನೀರಾವರಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಹಳೆ ಮೈಸೂರು ಭಾಗಕ್ಕೆ ಸೇರಿದ ಮದ್ಯಕರ್ನಾಟಕ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಅದ್ಯತೆ ನೀಡಿದವರು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಲ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ದಿ.ಹುಚ್ಚು ಮಾಸ್ತಿಗೌಡ ಒತ್ತಾಯದ ಫಲವಾಗಿ ಹೇಮಾವತಿ ಜಲಾಶಯ ನಿರ್ಮಾಣಕ್ಕೆ ದೇವರಾಜ ಅರಸು ಮುಂದಾದರು.ಇದರ ಭಾಗವಾಗಿ ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸಂವೃದ್ದಿಯ ಕೃಷಿ, ತೋಟಗಾರಿಕೆ ಜೊತೆಗೆ, ಕುಡಿಯುವ ನೀರಿನ ಬರ ಹಿಂಗಿದೆ.ಇದರ ಜೊತೆಗೆ ಎಸ್.ಎಂ.ಕೃಷ್ಣ ಅವರು ಸಹ ಸಾಕಷ್ಟು ಅನುದಾನವನ್ನು ನೀಡಿ. ನೀರಾವರಿ ಅಭಿವೃದ್ದಿಗೆ ಕಾರಣರಾಗಿದ್ದಾರೆ ಎಂದರು.
ನೀರಾವರಿ ವಿಚಾರದಲ್ಲಿ ಮೊದಲಿನಿಂದಲೂ ಕರ್ನಾಟಕ ಮತ್ತು ತೆಮಿಳುನಾಡು ನಡುವೆ ವೈಮನಸ್ಸು ಇದ್ದೇ ಇದೆ.ಇದಕ್ಕೆ ಪೂರಕವೆಂಬಂತೆ ಕೆಲ ಅಧಿಕಾರಿಗಳು ಸಹ ವರ್ತನೆ ಮಾಡಿದ್ದರ ಫಲವಾಗಿ ಹಲವಾರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.ಅಲ್ಲದೆ ಕಾವೇರಿ ಟ್ರ್ಯುಬುನಲ್ ಮುಂದೆ ಸಮರ್ಥವಾಗಿ ಅಂಕಿ ಅಂಶಗಳ ಮೂಲಕ ರಾಜ್ಯದ ನೀರಾವರಿ ಅವಶ್ಯಕತೆಗಳ ಬಗ್ಗೆ ವಾದ ಮಂಡಿಸಲು ವಕೀಲರನ್ನು ನೇಮಿಸುವಲ್ಲಿಯೂ ಸರಕಾರಗಳು ವಿಫಲವಾಗಿವೆ. ಡಾ.ಜಿ.ಪರಮಶಿವಯ್ಯ ಅವರ ವರದಿಯನ್ನಾಧರಿಸಿ ಜಾರಿಗೆ ಬರುತ್ತಿರುವ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳಿಂದ ಜಿಲ್ಲೆಗೆ ಹೆಚ್ಚು ನೀರು ತರಲು ಅವಕಾಶವಿದೆ. ರೈತರು ಭತ್ತ, ಕಬ್ಬು ಸೇರಿದಂತೆ ಆಹಾರ ಬೆಳೆಗಳಿಗೆ ಪ್ಲಡ್ ಇರಿಗೇಷನ್ ಬದಲಿಗೆ ಹನಿ ನೀರಾವರಿಗೆ ಒತ್ತು ನೀಡಿದರೆ ಮತ್ತಷ್ಟು ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ರೈತ ಮುಖಂಡರು ನೀರಾವರಿ ವಿಚಾರಗಳು ಬಂದಾಗ ನಮ್ಮದು ಆ ಬಣ, ಈ ಬಣ ಎಂದು ಕಿತ್ತಾಡುವ ಬದಲು ಒಂದು ವೇದಿಕೆಗೆ ಬಂದು ಹೋರಾಟ ರೂಪಿಸಬೇಕು.ಹಾಗೆಯೇ ರಾಜ್ಯಕಾರಣಗಳ ಸಹ ಪಕ್ಷ ಭೇಧ ಮರೆತು ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳು ನೀರಿಗಾಗಿ ಮತ್ತಷ್ಟು ಹಾಹಾಕಾರ ಪಡಬೇಕಾಗುತ್ತದೆ. ಹಿಂದೆ ಮಾಡಿರುವ ತಪ್ಪುಗಳನ್ನೇ ಮತ್ತೆ ಮಾಡದೆ ಎಲ್ಲರೂ ಒಗ್ಗೂಡಿ, ಮೇಕೆದಾಟು ಸೇರಿದಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ನುಡಿದರು.
ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದ ದಿಶಾ ಕಮಿಟಿ ರಾಜ್ಯಮಟ್ಟದ ಸದಸ್ಯ ಹಾಗೂ ಶಕ್ತಿಪೀಠದ ಸಿಇಓ ಕುಂದರನಹಳ್ಳಿ ರಮೇಶ್, ಜಿಲ್ಲೆಯಲ್ಲಿ ಸುವರ್ಣಮುಖಿ, ಗರುಡಾಚಲ, ಶಿಂಷಾ, ನಾಗಿನಿ ಹಾಗೂ ಉತ್ತರ ಪಿನಾಕಿನಿ ನದಿಗಳು ಹುಟ್ಟುತ್ತವೆ.ಆದರೆ ಇವುಗಳ ಸಮರ್ಪಕ ಬಳಕೆ ಸಾಧ್ಯವಾಗಿಲ್ಲ. ಜಿಲ್ಲೆಯ ಕಾವೇರಿ,ಕೃಷ್ಣಾ ಮತ್ತು ಉತ್ತರ ಪಿನಾಕಿನಿ ನದಿಪಾತ್ರಗಳಿಗೆ ಸೇರಿದ್ದು,ಮಳೆಯಿಂದ ಪ್ರತಿವರ್ಷ ಸುಮಾರು 40 ಟಿ.ಎಂ.ಸಿ ನೀರು 13 ಉಪನದಿಗಳ ಮೂಲಕ ಮೂರು ನದಿ ಪಾತ್ರಗಳಿಗೆ ಸೇರುತ್ತದೆ. ಜಿಲ್ಲೆಯ ಒಟ್ಟಾರೆ ಭೂ ಪ್ರದೇಶಕ್ಕೆ ಕುಡಿಯಲು ಮತ್ತು ನೀರಾವರಿಗೆ 37.77 ಟಿ.ಎಂ.ಸಿ ನೀರು ಬೇಕಾಗಿದ್ದು,ವಿವಿಧ ಯೋಜನೆಗಳಿಂದ 27.79 ಟಿ.ಎಂ.ಸಿ ಲಭ್ಯವಿದ್ದು, ಇನ್ನೂ 14 ಟಿ.ಎಂ.ಸಿ ನೀರಿನ ಕೊರತೆ ಇದೆ. ಕೆರೆ ಕಟ್ಟೆಗಳಿಲ್ಲದ 550 ಹಳ್ಳಿಗಳನ್ನು ಸೇರಿಸಿಕೊಂಡು,ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಎಂಬ ಪರಿಕಲ್ಪನೆಯಡಿ ಎತ್ತಿನಹೊಳೆ,ಭದ್ರಾ ಮೇಲ್ದಂಡೆ ಹಾಗೂ ಇನ್ನಿತರ ಯೋಜನೆಗಳ ಮೂಲಕ ನೀರಿನ ಕೊರತೆಯನ್ನು ನೀಗಿಸಿಕೊಳ್ಳಲು ರೈತರು, ಪ್ರಗತಿಪರರು, ಸಾರ್ವಜನಿಕರು ಹೋರಾಟ ರೂಪಿಸಬೇಕಾಗಿದೆ ಎಂದರು. ಜಿಲ್ಲಾ ಜಲ ಸಂವಾದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಮುಂಬರುವ ದಿನಗಳಲ್ಲಿ ಮದ್ಯ ಕರ್ನಾಟಕ ಸೇರಿದಂತೆ ಇಡೀ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಬೃಹತ್ ಜಲ ಸಮ್ಮೇಳನ ಏರ್ಪಡಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಶಕ್ತಿಪೀಠದ ಜೊತೆಗೆ ಸೇರಿ ಜಿಲ್ಲೆಯ ನೀರಾವರಿ ಸಮಸ್ಯೆಗಳ ಕುರಿತು ಜಲ ಸಂವಾದ ಆಯೋಜಿಸಲಾಗಿದೆ ಎಂದರು. ವೇದಿಕೆಯಲ್ಲಿ ಪತ್ರಕರ್ತ ಎಸ್.ನಾಗಣ್ಣ, ಸಾಹಿತಿ ಡಾ.ಕವಿತಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಹಾಲಪ್ಪ ಪೌಂಢೇಷನ್‍ನ ಮುರುಳೀಧರ ಹಾಲಪ್ಪ,ರೈತ ಸಂಘದ ಚಂದ್ರಕಲಾ, ಕೆ.ಜಿ.ಶಂಕರಪ್ಪ, ನಾಗಭೂಷಣ್ ರೆಡ್ಡಿ,ಆರಳೀಕೆರೆ ಶಿವಯ್ಯ ಹಲವರು ಉಪಸ್ಥಿತರಿದ್ದರು.

(Visited 2 times, 1 visits today)
tumkur
Previous Articleದಲಿತ ಮುಖಂಡನ ಹತ್ಯೆ ಪ್ರಕರಣ: ಶಂಕಿತರ ಬಂಧನ!
Next Article ನೆನೆಗುದಿಗೆ ಬಿದ್ದಿದ್ದ ರೈಲ್ವೇ ಅಂಡರ್ ಪಾಸ್ ರಸ್ತೆ ಕಾಮಗಾರಿಗೆ ಚಾಲನೆ
News Desk Benkiyabale

Related Posts

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm news

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm news

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm news
ತಾಜಾ ಸುದ್ಧಿಗಳು

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm

ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ

June 18, 2026 1:42 pm

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm
Our Youtube Channel
Our Picks

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm

ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ

June 18, 2026 1:42 pm

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ನಿದ್ದೆಗೆ ಜಾರಿದ ಕಂದಾಯ ಇಲಾಖೆ

By News Desk BenkiyabaleJune 18, 2026 4:44 pm

ತುಮಕೂರು: ತುಮಕೂರು ತಾಲ್ಲೂಕು ಕೋರ ಹೋಬಳಿ ಬೆಳಧರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ…

ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು

June 18, 2026 1:49 pm

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ

June 18, 2026 1:46 pm

ಕೆಪಿಟಿಸಿಎಲ್, ಬೆಸ್ಕಾಂ, ಎಸ್ಕಾಂ: ಪ್ರತಿಭಟನೆ

June 18, 2026 1:42 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.