BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ
  • ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ
  • ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ
  • ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ
  • ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ
  • ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ
  • ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ
  • ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದೇಶದಲ್ಲಿ ಹಸಿವು, ನಿರುದ್ಯೋಗದ್ದೇ ತಾಂಡವ: ಕಾಂಗ್ರೆಸ್‍ನಿಂದ ಮೌನ ಪ್ರತಿಭಟನೆ
ಇತರೆ ಸುದ್ಧಿಗಳು

ದೇಶದಲ್ಲಿ ಹಸಿವು, ನಿರುದ್ಯೋಗದ್ದೇ ತಾಂಡವ: ಕಾಂಗ್ರೆಸ್‍ನಿಂದ ಮೌನ ಪ್ರತಿಭಟನೆ

By News Desk BenkiyabaleUpdated:July 27, 2022 5:02 pm

ತುಮಕೂರು:


ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತದಂತಹ ವಿಷಯಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸರಕಾರ ಇಡಿ ಮೂಲಕ ಸೋನಿಯಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ಕರೆಯ ಮೇರೆಗೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಗೆ ವಿಚಾರಣೆಗಾಗಿ ನೋಟಿಸ್ ನೀಡಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ದೇಶದಲ್ಲಿ ಬಡತನ, ನಿರುದ್ಯೋಗ, ಹಸಿವು ತಾಂಡವವಾಡುತ್ತಿದೆ.ಅಪೌಷ್ಟಿಕತೆಯಿಂದ ಹಿಂದೆಂಗಿ ತ್ತಲೂ ಹೆಚ್ಚು ಜನರು ಬಳಲುತಿದ್ದಾರೆ.ತನ್ನ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಈಗಾಗಲೇ ಮುಚ್ಚಿ ಹೋಗಿರುವ ಕೇಸನ್ನು ರೀ ಓಪನ್ ಮಾಡಿ, ಅನಗತ್ಯ ತೊಂದರೆ ನೀಡುತ್ತಿದೆ ಎಂದರು.
ಇಂಧನ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು, ಅದರಲ್ಲಿಯೂ ಮದ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿ ದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳದ ಫಲವಾಗಿ ಅಡುಗೆ ಎಣ್ಣೆ,ಅಡುಗೆ ಅನಿಲ, ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಬಡವರು, ಕೂಲಿ ಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಬರಬೇಕಾದ ಸರಕಾರ ಆಹಾರ ಪದಾರ್ಥಗಳ ಮೇಲು ಜಿ.ಎಸ್.ಟಿ ವಿಧಿಸಿ, ಗಾಯದ ಮೇಲೆ ಬರೆ ಎಳೆದಿದೆ. ಈ ವಿಚಾರಗಳಲ್ಲಿ ಎಲ್ಲಿ ವಿರೋಧ ಪಕ್ಷಗಳು, ಜನರು ಸರಕಾರದ ವಿರುದ್ದ ತಿರುಗಿ ಬೀಳುತ್ತಾರೋ ಎಂಬ ಹೆದರಿಕೆ ಯಿಂದ ಕಾಂಗ್ರೆಸ್ ಮುಖಂಡರ ವಿರುದ್ದ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಕೆ ಮಾಡುತ್ತಿದೆ.ಇದರ ವಿರುದ್ದ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸುತಿದ್ದಾರೆ ಎಂದು ಆರ್.ರಾಮಕೃಷ್ಣ ತಿಳಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ನ್ಯಾಷನಲ್ ಹೆರಾಡ್ಲ್ ಪ್ರಕರಣಕ್ಕೆ ಈಗಾಗಲೇ ಐಟಿ ಟ್ರುಬ್ಯನಲ್, ಚುನಾವಣಾ ಆಯೋಗದಲ್ಲಿ ಸಂಪೂರ್ಣವಾಗಿ ತೆರೆಬಿದ್ದಿದೆ. ಸ್ವತಃ ಮಾಜಿ ಹಣಕಾಸು ಮಂತ್ರಿ ಅರುಣ್‍ಜಟ್ಲಿ ಅವರು ಸಂಸತ್ ಅಧಿವೇಶನದಲ್ಲಿಯೇ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದರು ಸಹ, ಕಾಂಗ್ರೆಸ್ ನೇತೃತ್ವ ವಹಿಸಿರುವ ರಾಹುಲ್‍ಗಾಂಧಿ, ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲಾಗಿದೆ.
15 ದಿನಗಳ ಹಿಂದೆಯೇ ಸುಮಾರು 50 ಗಂಟೆ ವಿಚಾರಣೆ ನಡೆಸಿದ್ದು, ಅದರ ವರದಿ ಹೊರಬಂದಿಲ್ಲ. ಕಳೆದ ಎರಡು ದಿನಗಳಿಂದ ಸೋನಿಯಗಾಂಧಿ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಯಾವುದೇ ಮಾಹಿತಿ ಇಲ್ಲ. ನಿನ್ನೆ ಮತ್ತು ಇಂದು ಡಿಕೇಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರಜಾಸತ್ತಾತ್ಮಕ ವಿಚಾರಣೆಗೆ ನಮ್ಮ ವಿರೋಧವಿಲ್ಲ, ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಸಿ.ಹನುಮಂತಯ್ಯ, ಶಿವಾಜಿ, ಶ್ರೀನಿವಾಸಕುಮಾರ್, ಸಿಮೆಂಟ್ ಮಂಜುನಾಥ್, ಆಟೋ ರಾಜು, ನಟರಾಜಶೆಟ್ಟಿ, ಸುವರ್ಣಾದೇವಿ, ಸುಜಾತ, ಕೃಷ್ಣಪ್ಪ, ಡಾ.ಇಂತಿಯಾಜ್ ಅಹಮದ್, ಸಂಜೀವಕುಮಾರ್, ಮರಿಚನ್ನಮ್ಮ, ಹಿದಾಯತ್, ಕೆಂಪಣ್ಣ, ಕುಮಾರಸ್ವಾಮಿ ಉಪಸ್ಥಿತರಿದ್ದರು.

(Visited 1 times, 1 visits today)
Congress tumkur
Previous Articleಗೊತ್ತು ಗುರಿ ಇಲ್ಲದ ಡಬ್ಬಲ್ ಸ್ಟಿಯರಿಂಗ್ ಪಕ್ಷ ಕಾಂಗ್ರೆಸ್: ಸಚಿವ ಡಾ.ಕೆ. ಸುಧಾಕರ್ ಲೇವಡಿ
Next Article ಮತದಾರರು ನಮೂನೆ-6ಬಿ ರಲ್ಲಿ ಆಧಾರ್ ಸಂಖ್ಯೆಯನ್ನು ದೃಢೀಕರಿಸಿ: ಜಿಲ್ಲಾಧಿಕಾರಿ
News Desk Benkiyabale

Related Posts

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm news
ತಾಜಾ ಸುದ್ಧಿಗಳು

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm
news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm
news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm
news

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm
Our Youtube Channel
Our Picks

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

By News Desk BenkiyabaleSeptember 25, 2026 6:07 pm

ತುಮಕೂರು: ಲೇಖಕಿ ವಿವೇಕ ಕೆ.ವಿ. ಅವರು ರಚಿಸಿರುವ ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕಥಾ ಸಂಕಲನವು ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ…

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.