ತುಮಕೂರು


ಅನಗತ್ಯ ಒತ್ತಡ ನಿಯಂತ್ರಣ, ಆಹಾರ ಕ್ರಮ ಬದಲಾವಣೆ, ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಮತ್ತು ತಡೆ ಸಾಧ್ಯ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಫಿಜಿಯೋಲಜಿ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷ ಡಾ.ಗಿರೀಶ್ ಬಾಬು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಮತ್ತು ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ “ಸಕ್ಕರೆ ಕಾಯಿಲೆ-ಒಂದು ಇಣುಕು” ಉಪನ್ಯಾಸ ಮಾಲಿಕೆ ಹಾಗೂ ತುಮಕೂರು ವಿವಿಯ ಸ್ನಾತಕೋತ್ತರ ಹಾಗೂ ಘಟಕ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಪನ್ಯಾಸ ನೀಡುತ್ತಾ, ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಓಬಿಜಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸೌಮ್ಯ ಅವರು ಸಹ “ಗರ್ಭಾವಸ್ಥೆಯಲ್ಲಿ ಮಧುಮೇಹ” ವಿಷಯವಾಗಿ ಉಪನ್ಯಾಸ ನೀಡಿ, ಗರ್ಭವಸ್ಥೆಯಲ್ಲಿ ಮಹಿಳೆಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ. ವೆಂಕಟೇಶ್ವರಲು ಮಾತನಾಡುತ್ತಾ, ಯುವ ರೆಡ್ ಕ್ರಾಸ್ ಕಾರ್ಯಕ್ಕೆ ಶ್ಲಾಘಿಸುತ್ತಾ, ಮಾನವನ ದುಃಖ ನಿವಾರಿಸಲು ಹಾಗೂ ಆರೋಗ್ಯ ಕಾಪಾಡಲು ಅನೇಕ ಸಿದ್ಧಾಂತಗಳನ್ನು ಒಳಗೊಂಡಿರುವ ರೆಡ್ ಕ್ರಾಸ್ ಘಟಕದಿಂದ ಮುಂಬರುವ ದಿನಗಳಲ್ಲಿ ಇಂತಹ ಮಾನವ ಸೇವ ಕಾರ್ಯಗಳು ಹೆಚ್ಚು ಹೆಚ್ಚು ನಡೆಸಲಿ ಎಂದು ಆಶಿಸಿದರು.
ತುಮಕೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪೆÇ್ರ. ನಿರ್ಮಲ್ ರಾಜು ಮಾತನಾಡುತ್ತಾ, ಆರೋಗ್ಯವೇ ಭಾಗ್ಯ, ಎಂತಹ ಒತ್ತಡ ಪರಿಸ್ಥಿತಿಯಲ್ಲೂ ಜನರು ಸಮಾಧಾನದಿಂದ ಕೆಲಸ ಕಾರ್ಯಗಳನ್ನು ಮಾಡಿದರೆ ರಕ್ತದೊತ್ತಡ, ಮಧುಮೇಹ ಮುಂತಾದ ರೋಗಗಳಿಂದ ದೂರವಿರಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಶೇಠ್ ಪ್ರಕಾಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಜನರಲ್ಲಿ ಆರೋಗ್ಯದ ಕಡೆ ಗಮನಕೊಡಲು ಸಹಾಯ ಮಾಡುತ್ತವೆ ಎಂದರು.
ತುಮಕೂರು ವಿವಿಯ ಸ್ನಾತಕೋತ್ತರ ಹಾಗೂ ಘಟಕ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಆರೋಗ್ಯ ಶಿಬಿರ ಆಯೋಜಿಸಿ ಮಧುಮೇಹ ಕಾಯಿಲೆಗೆ ಅಗತ್ಯವಿರುವ ಎಫ್ ಬಿ ಎಸ್, ಪಿಪಿಬಿಎಸ್, ಆರ್ ಬಿ ಎಸ್ ಪರೀಕ್ಷೆಗಳು, ರಕ್ತದೊತ್ತಡ, ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳು, ಮೂಳೆ ಮತ್ತು ಕೀಲೂ ರೋಗ ಹಾಗೂ ಸಾಮಾನ್ಯ ತಪಾಸಣೆಗಳನ್ನು ನಡೆಸಲಾಯಿತು.
ಕಾರ್ಯಕ್ರಮ ಏರ್ಪಡಿಸಿದ್ದ ಯುವ ರೆಡ್ ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ. ಪೂರ್ಣಿಮಾ ಮತ್ತು ವೇದಿಕೆಯ ಗಣ್ಯರು ಉಚಿತ ಆರೋಗ್ಯ ಶಿಬಿರದಲ್ಲಿ ಸೇವೆ ಸಲ್ಲಿಸಿದ ಶ್ರೀದೇವಿ ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗದ ವೈದ್ಯರು ಮತ್ತು ಸಿಬ್ಬಂದಿಗೆ ಗೌರವ ಸಮರ್ಪಿಸಿದರು. ತುಮಕೂರು ವಿವಿ ಸ್ನಾತಕೋತ್ತರ ಗಣಕ ವಿಜ್ಞಾನ ಸಂಯೋಜಕರಾದ ಡಾ. ಕುಸುಮ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶ್ವೇತಾ, ಡಾ. ಭರತ್ ಶಿಲ್ಪಿ, ಡಾ. ನರೇಂದ್ರ, ಶಾಂಭವಿ ಮತ್ತು ವಿದ್ಯಾರ್ಥಿಗಳು
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

(Visited 1 times, 1 visits today)