
ತುರುವೇಕೆರೆ: ತಾಲೂಕಿನ ಮುನಿಯೂರಿನಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.
ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡ ಲಾಗುತ್ತಿರುವ ಈ ಕಟ್ಟಡವನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣ ಮಟ್ಟದಲ್ಲಿ ನಿರ್ಮಾಣ ಮಾಡಬೇಕೆಂದು ಶಾಸಕರು ಸೂಚಿಸಿದ ಅವರು ಅಂಗನವಾಡಿ ಮತ್ತು ಅಂಗನವಾಡಿ ಸಹಾಯಕಿಯರಿಗೆ ಗೌರವಯು ತವಾದ ಸಂಬಳ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ಮಕ್ಕಳಲ್ಲಿ ಚುಟುವಟಿಕೆಗಳು ರೂಪುಗೊಳ್ಳಲು ಅಂಗನವಾಡಿ ಕೇಂದ್ರಗಳು ಸಹಾಯಕವಾಗಿವೆ. ಅಲ್ಲಿನ ಸಿಬ್ಬಂದಿ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಕಾಣಬೇಕೆಂದು ಶಾಸಕರು ಕಿವಿಮಾತು ಹೇಳಿದರು. ಈ ಸಂಧರ್ಭದಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷಿ÷್ಮÃನಾರಾಯಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಲಕ್ಷಿ÷್ಮÃ ವೆಂಕ ಟೇಶ್, ಸದಸ್ಯರಾದ ಮೋಹನ್, ವಿಶ್ವಮೂರ್ತಿ, ರೂಪ ಈಶ್ವರ್, ಕಾಂತರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲೀಲಾ ವತಿ, ಮುಖಂಡರಾದ ಎಂ.ಡಿ.ಮೂರ್ತಿ, ಕೋಳಿ ವೆಂಕ ಟೇಶ್, ಲಿಂಗರಾಜು, ರಂಗನಾಥ್, ಶಿವರಾಜು, ಸೇರಿದಂತೆ ಹಲವರು ಇದ್ದರು.





