
ತುಮಕೂರು: ನಗರದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ೬೪ನೇ ಜನ್ಮ ವರ್ಧಂತಿಯನ್ನು ಭಕ್ತರು ಶನಿವಾರ ಭಕ್ತಿ, ಸಡಗರದಿಂದ ಆಚರಿಸಿದರು. ಈ ಹಿನ್ನೆಲೆಯಲ್ಲಿ ಹಿರೇಮಠದಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿತ್ತು. ಬೆಳಗಿನಿಂದಲೇ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳಿಗೆ ಭಕ್ತಿಗೌರವ ಸಮರ್ಪಣೆ ಮಾಡಿ, ಆಶೀರ್ವಾದ ಪಡೆದರು.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ತುಮಕೂರು ವಿವಿ ಉಪ ಕುಲಪತಿ ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಸಂಘಸAಸ್ಥೆಗಳ ಪ್ರಮುಖರು ಆಗಮಿಸಿ ಜನ್ಮವರ್ಧಂತಿ ಪ್ರಯುಕ್ತ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಉಪಾಧ್ಯಕ್ಷ ಟಿ.ಬಿ.ಹರೀಶ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನ್, ಸ್ನೇಹ ಸಂಗಮ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್, ಹಿರಿಯ ಕಲಾವಿದ ಡಾ.ಲಕ್ಷಣದಾಸ್, ಸಿದ್ಧಗಂಗಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್, ಜಗದ್ಗುರು ಪಂಚಾಚಾರ್ಯ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ವಿವಿಧ ಮುಖಂಡರಾದ ಕೋರಿ ಮಂಜುನಾಥ್, ಎಸ್.ನಾಗಣ್ಣ, ಬಿಎಸ್.ನಾಗೇಶ್, ಟಿ.ಜೆ.ಗಿರೀಶ್, ಬಾವಿಕಟ್ಟೆ ಗಣೇಶ್, ಡಾ.ಕೆ.ಎಲ್.ದರ್ಶನ್, ಎಂ.ಎಸ್.ಉಮೇಶ್, ರಾಜೇಶ್ವರಿ ರುದ್ರಪ್ಪ, ಮಹದೇವಯ್ಯ, ಸಿದ್ಧಲಿಂಗಸ್ವಾಮಿ ಮೊದಲಾದವರು ಆಗಮಿಸಿ ಸ್ವಾಮೀಜಿಗಳಿಗೆ ಗೌರವಾರ್ಪಣೆ ಮಾಡಿದರು.

 
									 
					



