
ತಿಪಟೂರು: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಚಿಂತನೆಯ ಆಶಯದೊಂದಿಗೆ ಬುಧವಾರದಂದು ಕೃಷಿ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡುವುದರ ಬಗ್ಗೆ ಕಲ್ಪತರು ಗ್ರಾಂಡ್ ಹೊಟೇಲ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾ ದಿಕಾರಿಗಳೊಂದಿಗೆ ಪೂರ್ವಬಾವಿ ಸಭೆಯನ್ನು ನಡೆಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಇದುವರೆಗೆ ಹೋಬಳಿ ಮಟ್ಟದ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡುತ್ತಾ ಬಂದಿದ್ದು ಹೊಸದಾಗಿ ಚಿಂತನೆ ಮಾಡುತ್ತಾ ಇಂದಿನ ಪೀಳಿಗೆಯು ಕೃಷಿ ಯಿಂದ ವಿಮುಖತೆ ಹೊಂದುತ್ತಿರುವ ಅಂಶಗಳ ಹಾಗೂ ರೈತರ ಸಮಸ್ಯೆಗಳಿಗೆ ಚಿಂತಿಸುವ ಪರಿಹಾರ ಹುಡುಕುವ ನಿಟ್ಟಿನ ಚಿಂತನೆಯೊAದಿಗೆ ಈ ಕಾರ್ಯಕ್ರಮವನ್ನು ಆಯೋಜನೆ ಮಾ ಡಲಾಗುತ್ತಿದೆ ಎಂಬುದನ್ನು ಸಭೆಯಲ್ಲಿ ಮಂಡಿ ಸಿದರು.
ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ ಸಾಹಿತ್ಯ ಕ್ಷೇತ್ರವು ಬರೀ ಅಕ್ಷರಸ್ಥರ ಜೊತೆ, ಸಾಹಿತಿಗಳು ಬರಹಗಾರ, ಪ್ರಬಂಧಕರಿಗೆ ಸೀಮೀತವಾಗದೆ ಜಾನಪದ-ಜನಪದ ಕಲೆ ಯನ್ನು ಉಳಿಸಿ ಬೆಳಸಿದ ಮುಂದಿನ ಪೀಳಿಗೆಯ ಸಾಗಿಸುತ್ತಿರುವ ಕೃಷಿಕ ರೈತರ ಬಗ್ಗೆ ಚಿಂತನೆಗಳನ್ನು ಮಾಡಲಾಗುತ್ತಿದ್ದು ಸಾಹಿತ್ಯ ಪರಿಷತ್ತು ಹೊಸ ತನವನ್ನು ಹುಡುಕುವ ದೃಷ್ಟಿಯಲ್ಲಿ ರೈತರಿಗಾಗಿ ಶಿಬಿರಗಳು ಹಾಗೂ ಕಾರ್ಯಗಾರಗಳನ್ನು ಆಯೋಜಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ರೈತಾಪಿ ಜನರಿಗೆ ಪಹಣಿ, ಚಕ್ಕಬಂದಿ, ಸರ್ವೇ, ಮತ್ತಿತ್ತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಗಳ ಹಂಚಿಕೆಯ ವೇದಿಕೆ ಕಾರ್ಯಕ್ರಮವನ್ನು ರೂಪಿಸುವ ಆಯಾಮವಾಗಿದೆ ಎಂದರು.
ರೈತ ಸಂಘದ ದೇವರಾಜ್ ತೀಮ್ಮಾಲಾಪುರ ಮಾತನಾಡಿ ಕೃಷಿಗೆ ಬೇಕಾಗಿರುವ ಮೂಲ ಅಂಶವಾದ ಕುಟುಂಬಗಳಿಗೆ ವೃದ್ದಿಯಾ ಗದೆಯಿದ್ದು, ರೈತ ಕುಟುಂಬಗಳಿಗೆ ಹೆಣ್ಣು ಕೊಡುವ ತರುವ ಪದ್ದತಿಗಳು ಕಡಿಮೆ ಯಾಗುತ್ತಿದ್ದು ಕಂಕಣ ಭಾಗ್ಯವಿಲ್ಲದೆ ಗ್ರಾಮಗಳಲ್ಲಿ ಕೃಷಿಯ ಬೆಳವಣಿಗೆಯನ್ನು ಕಾಣದೆ ತತ್ತರಿಸುವ ಸ್ಥಿತಿಯು ಸಹ ಉಂಟಾಗಿದೆ. ಕೃಷಿಕ ಕುಟುಂಬಗಳ ಮಕ್ಕಳ ಮಧುವೆಯು ಇಂದು ಜಾಗತಿಕ ಸಮಸ್ಯೆಗಳಲ್ಲಿ ಸಿಲುಕಿದೆ ಇದರ ಬಗ್ಗೆ ವಿಶೇಷ ಗವiನಾರ್ಹ ಮಾಡಬೇಕಿದೆ ಎಂದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಅಭಿಪ್ರಾಯ ಗಳಂತೆ ತೆಂಗು, ಕೊಬ್ಬರಿಗೆ ಪ್ರಾಧನ್ಯತೆ, ತೆಂಗಿನ ಜೊತೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದು, ರೈತರಿಗೆ ಸರ್ಕಾರದ ಸವಲತ್ತುಗಳು ಸಹಾಯ ಧನಗಳ ಬಗ್ಗೆ ಮಾಹಿತಿ ಹಂಚಿಕೆ, ಬೆಳೆಗಳಿಗೆ ತಗಲುವ ರೋಗ ರುಜಿನಗಳ ಬಗ್ಗೆ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ, ರಾಶಿ ಪೂಜೆ, ಹೊನ್ನಾರು, ಮುಂತಾದವುಗಳ ಬಗ್ಗೆ ಚರ್ಚಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಜಯನಂದಯ್ಯ, ಜಯಶರ್ಮಾ, ಸಿರಿಗಂಧ ಗುರು, ಚನ್ನಬಸವಣ್ಣ, ಶ್ರೀಕಾಂತ್‌ಕೆಳಹಟ್ಟಿ, ಕಸಾಪ ಕಾರ್ಯದರ್ಶಿ ಮಂಜಪ್ಪ, ಮಡೆನೂರು ಸೋಮಶೇಖರ್, ಬಸವರಾಜಪ್ಪ, ಕುಮಾರಸ್ವಾಮಿ, ದಿಬ್ಬನಹಳ್ಳಿ ಶ್ಯಾಮ್‌ಸುಂದರ್, ರೇಣುಕಾರಾಧ್ಯ, ಬೀರ ಸಂದ್ರ ಮೋಹನ್, ಗೋವಿಂದರಾಜು, ಭಾಸ್ಕರ್, ರಾಜಮ್ಮ, ಸುರೇಶ್, ಪ್ರಶಾಂತ್, ಸಿದ್ದಾಪುರದೇವಾನಂದ್, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃ ತ್ವದಲ್ಲಿ ಕೃಷಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಆಯೋಜನೆ.





