
ತುರುವೇಕೆರೆ: ಹಲ್ಲೆ ಮಾಡಿ ಪರಾರಿಯಾಗಿರುವ ಮಹೇಶ್, ರಾಮಣ್ಣ, ತಂಗ್ಯಮ್ಮ, ಮಂಜುನಾಥ್ ಆರೋ ಪಿಗಳನ್ನು ಪೋಲೀಸರು ಬಂದಿಸುವಲ್ಲಿ ವಿಪಲರಾಗಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಕೆಂಪಮ್ಮ ಮತ್ತು ನವೀನ್ ಕುಟುಂಬದವರು ಪಟ್ಟಣದ ಪೋಲೀಸ್ ಠಾಣೆ ಮುಂಬಾಗ ಸೋಮವಾರ ಪ್ರತಿಭಟನೆ ನೆಡೆಸಿ ಒತ್ತಾಯಿಸಿದರು.
ತಾಲ್ಲೂಕಿನ ನರೀಗೆಹಳ್ಳಿ ಗ್ರಾಮದ ಮುನೇಶ್ ಮಾತನಾಡಿ ಸಂಬAದಿಗಳಾದ ಆರೋಪಿಗಳು ಹಾಗಿರುವ ರಾಮಣ್ಣ, ತಂಗ್ಯಮ್ಮ, ಮಹೇಶ್, ಸಿದ್ದಮ್ಮ ರವರು ಕೆಲ ದಿನಗಳ ಹಿಂದೆ ಗಾಲಾಟೆ ನೆಡೆಸಿ ನಮ್ಮ ತಾಯಿ ಕೆಂಪಮ್ಮ, ಅಣ್ಣನಾದ ನವೀನ್ ಮೇಲೆ ಮಾರಾಣಂತಿಕ ಹಲ್ಲೆ ಮಾಡಿದ್ದರು. ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು .ಈ ಘಟನೆ ಬಗ್ಗೆ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಾಗಿತ್ತು. ಅದಲ್ಲದೇ ತುಮಕೂರು ಎಸ್.ಪಿ.ಕಛೇರಿ ಮುಂಬಾಗದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ದು ಈ ಸಂದರ್ಭದಲ್ಲಿ ಅಡಿಷನಲ್ ಎಸ್.ಪಿ. ಅಬ್ದುಲ್ ಖಾದರ್ ಆರೋಪಿಗಳನ್ನು ಬಂದಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು ಅದು ಸಹ ಹುಸಿಯಾಗಿದೆ. ಪ್ರಕರಣ ದಾಖಲಾಗಿ ಸುಮಾರು ೧೫ ದಿನಗಳು ಕಳೆದರು ಅರೋಪಿಗಳನ್ನು ಪೋಲೀಸರು ಬಂದಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ.ಅದಲ್ಲದೆ ಆರೋಪಿಗಳಿಗೆ ಎಸ್.ಐ.ಸಂಗಪ್ಪ ಸಹಕಾರ ನೀಡುತ್ತಿದ್ದಾರೆ ಎಂದು ಅನುಮಾನ ಹುಟ್ಟುತ್ತಿದೆ. ಕೂಡಲೇ ಆರೋಪಿಗಳನ್ನು ಬಂದಿಸಬೇಕು ಅಲ್ಲಿವರೆಗೂ ಪ್ರತಿಭಟನೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದರು.





