ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮ ಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತಿ ಹಾಗೂ ಪ್ರೊ. ಬಿ ಕೃಷ್ಣಪ್ಪನವರ ೨೨ನೇ ಸ್ಮರಣೆಯ ಅಂಗವಾಗಿ ಕಾಯಕ ಚಳುವಳಿ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಸ್ಲಂ ಭವನದಲ್ಲಿ ಆಯೋ ಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಕಾಯಕ ಜೀವಿಗಳು ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು.
ವಿಶೇಷ ಉಪನ್ಯಾಸ ನೀಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಿ.ಉಮೇಶ್ ಮಾತನಾಡಿ, ಬಸವಣ್ಣನವರ ಕಾಯಕ ಸಿದ್ದಾಂತ ಭಾರತದ ಆರ್ಥಿಕ ಚಲನೆಗೆ ಕಾರಣವಾಗಿದೆ ಜನರ ಭಾಷೆಯಲ್ಲಿ ವಚನಗಳ ರಚನೆ ಮಾಡಿ ಕರ್ಮ ಸಿದ್ದಾಂತದ ಬದಲಾಗಿ ಕಾಯಕ ಸಿದ್ದಾಂತವನ್ನು ಬಸವಣ್ಣನವರು ಚಾಲನೆಗೆ ತಂದರು ಈ ಮೂಲಕ ಶ್ರಮ ಸಂಸ್ಕೃತಿಯ ಪರಿಕಲ್ಪನೆ ಕಾಯಕ ಮತ್ತು ದಾಸೋಹಕ್ಕೆ ಪೂರಕವಾಗಿಸಿತ್ತು. ಅಂದು ಸ್ಥಿತಿ ಪ್ರಜ್ಞೆ ಇದ್ದಂತಹ ಸಮಾಜದಲ್ಲಿ ಪ್ರೀತಿ, ತಾಳ್ಮೆ ಲಿಂಗ ಸಮಾನತೆ ಸಂವೇಧನೆ ಸಾಮಾನ್ಯ ಜನರಲ್ಲಿ ಒಗ್ಗೂಡಿಸಲು ಕಾಯಕ ಪ್ರಮುಖ ಕಾರಣವಾಯಿತು. ಆದರೆ ಇಂದಿನ ಸಮಾಜ ಜನಿವಾರ ಮತ್ತು ಹಿಜಾಬ್ ಚರ್ಚೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮುಖ್ಯತೆ ಇಲ್ಲದಂತೆ ಮಾಡಿದೆ. ಅಧಿಕಾರದ ಲಾಭಕ್ಕಾಗಿ ಇಂದಿನ ಪ್ರಭುತ್ವ ಹಲವಾರು ರೀತಿಯ ಯೋಜನೆಗಳನ್ನು ಮಾಡುತ್ತಿದೆ, ಲಾಭವೆ ಪ್ರಭುತ್ವದ ಧೇಯವಾಗಿದೆ. ಕಾಯಕ ಮತ್ತು ದಾಸೋಹದ ಚೈತನ್ಯ ಸಂಸ್ಕೃತಿ ಇಂದು ಮಠ ಸಂಸ್ಕೃತಿಯಲ್ಲಿ ಮನುಷ್ಯರ ಜೀವನ ಕ್ರಮಕ್ಕೆ ಪರ್ಯಾಯ ನೀಡಲು ವ್ಯವಸ್ಥೆಯನ ಭಾಗವಾಗಿರುವುದು ವಿಪರ್ಯಾಸವಾಗಿದೆ. ಹಾಗಾಗಿ ವಚನಕಾರರ ದಿಕ್ಕಿನಲ್ಲಿ ನಾವು ಸಂಘಟಿತರಾಗಿ ಸಮಾಜ ಬದಲಾವಣೆಗೆ ಪ್ರಯತ್ನಿಸಬೇಕೆಂದರು.
ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಬಸವಣ್ಣ ಜನ್ಮ ತಾಳುವ ಮೊದಲೇ ಈ ದೇಶದಲ್ಲಿ ಲೋಕಾಯತರು, ಮಹಾವೀರ, ಬುದ್ಧನಂತಹ ಮಹಾಪುರುಷರು ೫ರಿಂದ ೯ನೇ ಶತಮಾನದ ವರೆಗೂ ಹಾಗೂ ಬಸವ ಪೂರ್ವ ಯುಗದಲ್ಲಿ ೩೯ ಶಿವಶರಣರು ೯ರಿಂದ ೧೧ನೇ ಶತಮಾನದವರೆವಿಗೂ ಜನರ ಮೇಲಿನ ಶೋಷಣೆಯನ್ನು ನಿರಾಕರಿಸಿ ಸುಧಾರಣೆಗಾಗಿ ಪ್ರಯತ್ನಿಸಿದರು. ಸಮಾಜದಲ್ಲಿರುವ ಅನುತ್ಪಾದಕ ಅಲ್ಪಸಂಖ್ಯಾತ ಪುರೋಹಿತ ವರ್ಣಗಳು ಸದಾ ಉತ್ಪಾದನೆಯಲ್ಲಿ ತೊಡಗಿರುವ ಬಹುಸಂಖ್ಯಾತ ವರ್ಣಗಳಾದ ಶೂದ್ರರನ್ನು, ಪಂಚಮರನ್ನು ಮತ್ತು ಮಹಿಳೆಯರನ್ನು ಏಕೆ ದೂರವಿಟ್ಟಿದ್ದಾರೆ ಎನ್ನುವುದನ್ನು ಬಸವಣ್ಣ ಗಮನಿಸಿ ವರ್ಣ, ಜಾತಿ, ಜ್ಞಾನ ಹಾಗೂ ಅಧಿಕಾರದ ಮೂಲಕ ಸುಲಿಗೆ ಅಥವಾ ಶೋಷಣೆಯೇ ಜನರ ದುಃಖದ ಮೂಲವೆಂದು ಜನಸಮುದಾಯಕ್ಕೆ ತೋರಿಸಿಕೊಟ್ಟರು ಸುಲಿಗೆ ಮತ್ತು ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ಹೊಸ ದಾರಿ ತೋರಿಸುವುದೇ ಬಸವಣ್ಣನವರ ಬದುಕಿನ ಗುರಿಯಾಗಿತ್ತು. ಹಾಗಾಗಿ ಜಡ ಸಂಸ್ಕೃತಿಯ ಬದಲು ಕಾಯಕ ಪ್ರಧಾನವಾದಂತಹ ಚೈತನ್ಯ ಸಂಸ್ಕೃತಿಗೆ ಹೊಸ ದೇವರು, ಹೊಸ ಜೀವನ ಕ್ರಮ , ಹೊಸ ವಿಚಾರ, ಹೊಸ ತಿಳುವಳಿಕೆ , ಹೊಸ ಮೌಲ್ಯ, ಮಾನವ ಪ್ರೀತಿ ಸಂಬAಧವನ್ನು ಕಲ್ಪಿಸುವ ಚಿಂತನೆ ಮಾಡಿ ಕಾಯಕ ಚಳುವಳಿಯನ್ನು ಅಂದಿನ ಸಂದರ್ಭದಲ್ಲಿ ಕಟ್ಟಿದರು ಎಂದರು.
ಈ ಸಂದರ್ಭದಲ್ಲಿ ತೃತೀಯ ಲಿಂಗಿಗಳ ಸಮಾನತೆಗಾಗಿ ಹೋರಾಡುತ್ತಿರುವ ದೀಪಿಕಾ ಅಲ್ಪಸಂಖ್ಯಾತ ಮುಖಂಡರಾದ ಗುಲ್ನಾಜ್, ಜಾಬೀ ರ್ಖಾನ್ ನಿವೇಶನ ರಹಿತ ಹೋರಾಟ ಸಮಿತಿಯ ಪೂರ್ಣಿಮ ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಅನುಪಮಾ, ಕಣ್ಣನ್, ಶಂಕ್ರಯ್ಯ, ಶಾರದಮ್ಮ, ಗಂಗಾ, ಹನುಮಕ್ಕ, ಗಣೇಶ್,ಧನಂಜಯ್, ,ಪುಟ್ಟರಾಜು, ಶಂಕ ರ್ಗೌಡ, ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಮತ್ತು ಕೃಷ್ಣಮೂರ್ತಿ ವಂದನಾರ್ಪಣೆಯನ್ನು ನೆರವೇರಿಸಿ ಪರಿವರ್ತನ ಗೀತೆಗಳನ್ನು ಹಾಡಿದರು. ಜಿಲ್ಲಾ ಸಮಿತಿಯ ಕಾರ್ಯಕರ್ತರು ಭಾಗವಹಿಸಿದ್ದರು.
(Visited 1 times, 1 visits today)