ತುಮಕೂರು: ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅವರ ೫೦ನೇ ಹುಟ್ಟು ಹಬ್ಬವನ್ನು ಟೌನ್ ಹಾಲ್‌ನಲ್ಲಿರುವ ಶಾಸಕರ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯ ಜೊತೆಗೆ ಹಲವು ಸವಲತ್ತು ಹಾಗು ಸಲಕರಣೆಗಳನ್ನು ವಿತರಿಸುವ ಮೂಲಕ ಜೋತಿ ಗಣೇಶ್ ಅಭಿಮಾನಿ ಬಳಗದವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜೋತಿಗಣೇಶ್ ಅಭಿಮಾನಿ ಬಳಗದ ಭಾರತದ ಸೈನಿಕರ ಕಲ್ಯಾಣ ನಿಧಿಗೆ ನೀಡಿದ ಒಂದು ಲಕ್ಷ ರೂಗಳ ಚೆಕ್ ವಿತರಿಸಿ ಹಾಗೂ ಶಾಸಕರಿಗೆ ಅಭಿನಂದಿಸಿ ಮಾತನಾಡಿದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕರಾಗಿರುವ ಜೋತಿಗಣೇಶ್ ಒರ್ವ ಅಪರೂಪದ ರಾಜಕಾರಣಿ. ಜನಸಾಮಾನ್ಯರ ಪರವಾಗಿ ಸದಾ ತುಡಿಯುವ ವ್ಯಕ್ತಿತ್ವ ಹೊಂದಿದ್ದಾರೆ.ಇವರ ತಂದೆ ಜಿ.ಎಸ್.ಬಸವರಾಜು ಅವರು ಐದು ಬಾರಿ ಸಂಸದರಾಗಿ ಜನಾನುರಾಗಿಯಾಗಿದ್ದಾರೆ.ಇವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿ ಜನಮನ್ನಣೆ ಗಳಿಸಿದ್ದಾರೆ.ನಿನ್ನೆ ದಿನ ನಾನು ಸಂಸತ್ತಿನಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸುವ ಮೂಲಕ ತುಮಕೂರು ಜಿಲ್ಲೆಯ ಜನರ ಆಶಯವನ್ನು ಈಡೇರಿಸಿದ್ದೇನೆ.ಇದುವರೆಗೂ ಯಾರು ಸಹ ಬಸವ ಜಯಂತಿಯನ್ನು ಮಾಡಿರಲಿಲ್ಲ.ಹೊಸ ಸಂಸತ್ ಭವನದಲ್ಲಿ ಬಸವೇಶ್ವರರ ಅನೇಕ ಯುಕ್ತಿಗಳನ್ನು ಬರೆಸುವ ಮೂಲಕ ನಮ್ಮ ಆಡಳಿತ ಹೇಗಿರಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ ಎಂದರು.
ತುಮಕೂರಿನಲ್ಲಿ ಎರಡನೇ ಬಾರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪತ್ರಿಮೆಯ ಮುಂಭಾಗದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಡಾ.ಜಿ.ಪರಮೇಶ್ವರ್ ಮತ್ತು ರಾಜ್ಯ ಸರಕಾರ ಈ ಭಾಗದ ಜನರ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿದೆ.ಜೋತಿಗಣೇಶ್ ಅಭಿಮಾನಿ ಬಳಗದವರು ಇಂದು ಅಂಗವಿಕಲರಿಗೆ ಕೃತಕ ಕಾಲುಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ.ರಾಷ್ಟçದಲ್ಲಿ ಸುಮಾರು ೮ ಕೋಟಿ ಈ ರೀತಿಯ ಕುಟುಂಬಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಸುಮಾರು ೪೫ ಸಾವಿರ ಕುಟುಂಬಗಳಿವೆ.ಅವರ ಅಗತ್ಯಗಳನ್ನು ಪೂರೈಸಲು ಸಹ ಕೇಂದ್ರ ಸರಕಾರ ಸಿದ್ದವಿದೆ.ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಶಾಸಕರ ಅಭಿಮಾನಿಗಳು ಮಾಡುತ್ತಿರುವುದು ಉತ್ತಮವಾದ ಕೆಲಸ ಎಂದು ವಿ.ಸೋಮಣ್ಣ ನುಡಿದರು


ಹಿರಿಯರು, ಹಿತೈಷಿಗಳು,ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್,ನನ್ನ ಇಷ್ಟು ವರ್ಷದ ರಾಜಕಾರಣದಲ್ಲಿ ಎಂದಿಗೂ ಬಹಿರಂಗವಾಗಿ ಹುಟ್ಟು ಹಬ್ಬ ಆಚರಿಸಿಕೊಂಡವನಲ್ಲ.ಅದರೆ ಈ ಬಾರಿ ಅಭಿಮಾನಿಗಳ ಅಭಿಮಾನಕ್ಕೆ ಕಟ್ಟುಬಿದ್ದು, ಒಪ್ಪಿಕೊಳ್ಳಬೇಕಾಯಿತು.ರಾಜಕಾರಣದಲ್ಲಿ ನಮ್ಮ ಸಮಾಧಾನಕ್ಕಲದಿದ್ದರೂ, ನಮ್ಮ ಅನುಯಾಯಿಗಳ ಸಮಾಧಾನಕ್ಕಾದರೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅನಿವಾರ್ಯ.ಸೇವಾ ಕಾರ್ಯಗಳ ಮೂಲಕ ಅಭಿಮಾನಿಗಳ ಎಲ್ಲಾ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ. ಅವರ ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ಶಾಸಕ ಜೋತಿಗಣೇಶ್ ಅವರ ೫೦ನೇ ಹುಟ್ಟು ಹಬ್ಬದ ಅಂಗವಾಗಿ ಅಂಗವಿಕಲರಿಗೆ ಕೃತಕ ಕೈ, ಕಾಲು ಜೋಡಣಾ ಶಿಬಿರ, ರಕ್ತದಾನ ಶಿಬಿರ,೧೦೦ ಜನರಿಗೆ ನೇತ್ರ ತಪಾಸಣೆ ಹಾಗೂ ಅಗತ್ಯವಿರುವವರಿಗೆಉಚಿತ ನೇತ್ರಚಿಕಿತ್ಸೆ,೧೦೦ ಬೀದಿಬದಿ ವ್ಯಾಪಾರಿಗಳಿಗೆ ಬಿಸಿಲಿನ ರಕ್ಷಣೆಗೆ ಕೊಡೆ ವಿತರಣೆ,೬೦೦ ಜನ ಆಟೋಚಾಲಕರಿಗೆ ಸಮವಸ್ತç,೪೦೦ಜನ ದಿನಪತ್ರಿಕೆ ವಿತರಕರಿಗೆ ಜರ್ಕಿನ್ ವಿತರಣೆ, ಗೋಶಾಲೆಗಳಿಗೆ ಮೇವು ವಿತರಣೆ, ೫೦೦ ಜನ ಎಪಿಎಂಸಿ, ಮಂಡಿಪೇಟೆ ಹಮಾಲರಿಗೆ,೮೦೦ ಜನ ಪೌರಕಾರ್ಮಿಕರಿಗೆ, ಆಟೋಚಾಲಕರಿಗೆ ಸಮವಸ್ತçದ ಜೊತೆಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪೌರಕಾರ್ಮಿಕರಿಗೆ ಗೃಹಬಳಕೆ ವಸ್ತು ವಿತರಣೆ,ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆಯನ್ನು ಜೋತಿಗಣೇಶ್ ಅಭಿಮಾನಿ ಬಳಗದಿಂದ ನಡೆಸಿದರು.
ಹಾರ, ತುರಾಯಿಗಳಿಗೆ ಅವಕಾಶವಿಲ್ಲದೆ ಸರಳವಾಗಿ ವೇದಿಕೆಯಲ್ಲಿ ಶಾಸಕರನ್ನು ಕೈಕುಲುಕಿ,ಅಪ್ಪಿ ಶುಭಾಷಯ ಕೋರಲು ಮಾತ್ರ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

 

(Visited 1 times, 1 visits today)