ಮಧುಗಿರಿ: ಜಾತಿ ಗಣತಿಯ ನಮೂನೆಯ ಕಾಲಂ೬೧ ರಲ್ಲಿ ಮಾದಿಗ ಸಮುದಾಯದವರೆಂದು ನಮೂ ದಿಸುವಂತೆ ಮಾಜಿ.ಜಿ.ಪಂ ಸದಸ್ಯ ಹೆಚ್ ಡಿ ಕೃಷ್ಣಪ್ಪ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜಿಲ್ಲಾ ಮಾದಿಗ ಪದವೀಧರರ ವೇದಿಕೆ ಹಾಗೂ ಒಳ ಮೀಸಲಾತಿ ತಾಲೂಕು ಹೋರಾಟ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,
ಪರಿಶಿಷ್ಟ ಜಾತಿಯಲ್ಲಿ ೧೦೧ಜಾತಿಗಳ ಪೈಕಿ ಒಳಮಿಸಲಾತಿ ವರ್ಗಿಕರಣದ ಸಮೀಕ್ಷೆಗೆ ಬರುವಂತಹ ಅಧಿಕಾರಿಗಳ ಬಳಿ ನಮ್ಮ ಸಮು ದಾಯದವರು ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿ ಸೂಚಕವಲ್ಲದ ಪದಗಳನ್ನು ಬರೆಸಬಾರದೆಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಗೋಪಾಲಯ್ಯ ಮಾತನಾಡಿ ಮಾದಿಗ ಸಂಬAಧಿತ ಜಾತಿಗಳು ಸರ್ಕಾರದ ಪ್ರತಿನಿಧಿಗಳು ಜಾತಿ ಸಮೀಕ್ಷೆಗೆ ಬರುತ್ತಿದ್ದು ತಪ್ಪದೆ ಆಯಾ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ,ಯುವಕರು,ಸಂಘಟನೆಯ ಮುಖಂಡರುಗಳು ಗ್ರಾಮದ ಯಾವುದೇ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರ ಗುಳಿಯದಂತೆ ಎಚ್ಚರ ವಹಿಸ ಬೇಕೆಂದರು.
ಮಾಜಿ ತಾ.ಪಂ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ ಒಳ ಮೀಸಲಾತಿಯು ನಮ್ಮ ಬಹು ದಿನಗಳ ಬೇಡಿಕೆಯಾಗಿದ್ದು ತಾಲೂಕಧ್ಯಂತ ಜನರಿಗೆ
ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕಾಗಿದೆ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ರವರ ಏಕ ಸದಸ್ಯ ಪೀಠ ಆಯೋಗದ ಮಧ್ಯಂತರ ವರದಿಯ ಅನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡ ಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಸರಕಾರ ನಿರ್ದೇಶನ ನೀಡಿದ್ದು ದತ್ತಾಂಶ ಸಂಗ್ರಹಣಕ್ಕಾಗಿ ತುಮಕೂರು ಜಿಲ್ಲೆ ಯಲ್ಲಿ ಮೇ ೫ರಿಂದ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಮಾದಿಗ ಸಮುದಾ ಯದವರು ಮಾದಿಗ ಎಂದೆ ಸಮೀಕ್ಷೆಗೆ ಬರುವವರ ಬಳಿ ದಾಖಲಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.
ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೋಂಡೋಟಿ ರಾಮಾಂಜಿನಪ್ಪ,ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಸಂಜೀವಮೂರ್ತಿ, ಆದಿ ಜಾಂಬವ ಮಹಾ ಸಭಾ ಅಧ್ಯಕ್ಷ ಮಹರಾಜು,ಬೇಡತ್ತೂರು, ತಿಪ್ಪೇಸ್ವಾಮಿ, ರಂಗನಾಥ್,ಎಸ್ ಸಂಜೀವಯ್ಯ,ಸಿದ್ದಗAಗಪ್ಪ, ವಕೀಲನರಸಿಂಹಮೂರ್ತಿ,ಪೋಸ್ಟ್ ರಾಮಣ್ಣ, ಮರಿಯಪ್ಪ,ಸಾಗರ್,ಕಾವಣದಾಲ ಶಿವಣ್ಣ, ಹನು ಮಂತರಾಜು, ಪೋಸ್ಟ್ ಮರಿಯಪ್ಪ ,ಎಂ ಸಿ ರಾಮಣ್ಣ ಮತ್ತಿತರರು ಹಾಜರಿದ್ದರು