ತುಮಕೂರು: ನಗರದ ಜನಪರ-ಚಳವಳಿಗಳ ಕೇಂದ್ರ ಕಛೇರಿ’ಯಲ್ಲಿ ಕಾರ್ಮಿಕ ಚಳವಳಿಯ ಸಂಗಾತಿಗಳು ಮತ್ತು ರಂಗಾಭ್ಯಾಸಿಗಳು ಬಸವ-ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು, ಸಿಪಿಐ(ಎಂ) ಹಾಗೂ ಬಯಲ-ಕರ್ನಾಟಕದ ಸೃಜನಶೀಲ ಕಲಾವಿದರ ಒಕ್ಕೂಟವಾದ ಬಯಲು ಸೀಮೆ ಕಂಪನಿ-ತುಮಕೂರು, ಹಿರಿ-ಕಿರಿಯ ರಂಗಾ ಭ್ಯಾಸಿಗಳು, ಕಾರ್ಮಿಕ ಹಾಗೂ ಜನಪರ ಚಳವಳಿಗಳ ಸಂಗಾತಿಗಳು ಉಪಸ್ಥಿತರಿದ್ದರು.
ಬಸವಣ್ಣನವರ ಡೆಮಾಕ್ರಟಿಕ್-ಸೊಸೈಟಿಯ ಆಶಯಗಳನ್ನು ಕುರಿತು ವಿಸ್ತಾರವಾಗಿ ಮಾತನಾಡಿದ ರಂಗ-ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಶೋಷ ಣೆ, ತಾರತಮ್ಯ, ಅಸಮಾನತೆ ಮತ್ತು ವೃತ್ತಿ-ಆ ಧಾರಿತ ಜಾತಿಗಳ ಅಸ್ತಿತ್ವವನ್ನು ಬಲವಾಗಿ ವಿವೇಚಿಸಿ ಶ್ರಮಣ ಧಾರೆಗಳನ್ನು ಗುರ್ತಿಸಿ ನಿರೂಪಿಸ ಬಯ ಸಿದ್ದವರು. ಕುಲದ ಮೂಲ ನೆಲೆಗಳವರೆಗೂ ಪ್ರಭಾವಿಸುವಷ್ಟು ಪ್ರಭಾವಶಾಲಿಯಾಗಿದ್ದ ಉತ್ತರ-ಭಾರತೀಯ ವೈದಿಕ ಧರ್ಮಾಚರಣೆಗಳನ್ನು ಕನ್ನಡಿ ಗರು ನಿರಾಕರಿಸಬೇಕಾದ ನಿರ್ವಸಾಹತೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದವರು. ಈಕ್ವಾಲಿಟಿ ಮತ್ತು ಡೆಮಾಕ್ರಸಿಯನ್ನು ಬಲವಾಗಿ ಪ್ರತಿಪಾದಿಸಿದ ಬಸವಣ್ಣನವರು ಇವನಾರವ-ಇವನಾರವ ಎಂದು ಮನುಷ್ಯಕುಲಂ-ತಾನೊAದೆ ವಲಂ ಎಂಬುದನ್ನು ಸ್ಪಷ್ಟ ನಿರ್ವಚಿಸಬಲ್ಲವರಾಗಿದ್ದರು. ಆ ನೆಲೆಯಿಂದಲೇ ಕಲ್ಯಾಣದ ಪರಿಕಲ್ಪನೆಯನ್ನು ಹರವಿದರು.
ಸಿಐಟಿಯು-ತುಮಕೂರಿನ ಸುಬ್ರಹ್ಮಣ್ಯ ಮಾತ ನಾಡಿ, ನಮ್ಮ ಕಲ್ಯಾಣ-ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರನ್ನು ನಾವು ಅವರ ಜಯಂತಿಯ ಸಂದರ್ಭದಲ್ಲಷ್ಟೇ ಅಲ್ಲದೆ, ಪ್ರಸ್ತುತ ಕಾಲದ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಅನುಕರಿಸಬೇಕಾದ ಅನಿವಾರ್ಯತೆ ಇದೆ! ಜಾತ್ಯತೀತ ಸಮ-ಸಮಾಜದ ಕಲ್ಯಾಣರಾಜ್ಯ ನಿರ್ಮಾಣಕ್ಕಾಗಿ ಪರಿತಪಿಸಿದ ಬಸವಣ್ಣನವರನ್ನು ವಿಶ್ವಗುರು ಎಂದು ಗೌರವಿಸುವುದು ನಮ್ಮ ಕರ್ತವ್ಯವೂ ಹೌದು ಎಂದರು.
ಸಿಐಟಿಯು-ತುಮಕೂರಿನ ಜಿಲ್ಲಾಧ್ಯಕ್ಷರಾದ ಸೈಯ ದ್ ಮುಜೀಬ್ ಮಾತನಾಡಿ, ನಾವು ಬಸವಣ್ಣನ ಅನುಯಾಯಿಗಳು ಎಂದು ಘೋಷಿಸಿಕೊಳ್ಳುವವರೇ ಬಸವಣ್ಣನವರನ್ನು ದಿನೇದಿನೇ ಅವಮಾನಿಸುತ್ತಿದ್ದಾರೆ. ಕೇವಲ ಫ್ಲೆಕ್ಸು-ಕಟೌಟು-ಫೋಟೋಶೂಟಿಗಷ್ಟೇ ಬಸವಣ್ಣನವರ ಚಿತ್ರವನ್ನು ಬಳಸಿಕೊಂಡು ತಮ್ಮ ಸ್ವಾರ್ಥ-ಸಾಧನೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಿಐಟಿಯು-ಲೋಕೇಶ್ ಮಾತನಾಡುತ್ತಾ ‘ಬಸವಣ್ಣನವರ ಓದು ಮುಖ್ಯವೇ ಹೊರತು, ಕೇವಲ ಜಯಂತಿಯ ಆಚರಣೆ ಅಲ್ಲ. ಬಸವಣ್ಣನವರ ತತ್ವಾದರ್ಶಗಳ ಅನುಷ್ಠಾನ ಮುಖ್ಯವೇ ವಿನಾ, ಬರೇ ಭಾಷಣಗಳಲ್ಲ. ವಚನಗಳನ್ನು ಆಡಿದರೆ ಸಾಲದು, ಅನುಕರಿಸಿದರೆ ಗೌರವ. ಬಸವ-ಧರ್ಮದ ಆಶಯ ಹೊಂದಿದ್ದರೆ ಸಾಲದು, ಅದನ್ನು ಪಾಲಿಸಲು ನಾವೆಲ್ಲರೂ ತಯಾರಾಗಬೇಕು ಎಂದರು.
ಸಿಐಟಿಯು-ತುಮಕೂರಿನ ಕಲ್ಪನಾ, ತುಮಕೂರು ವಿಶ್ವವಿದ್ಯಾಲಯದ ಪಿಹೆಚ್‌ಡಿ-ವಿದ್ಯಾರ್ಥಿ ಮಾರು ತೇಶ್ ಮಾತನಾಡಿದರು. ಹಿರಿಯ ವಕೀಲ ಸತ್ಯ ನಾರಾಯಣ ರಾವ್, ಸಾಮಾಜಿಕ ಕಾರ್ಯಕರ್ತ ರಫೀಕ್ ಪಾಷಾ, ಜಲೀಲ್, ಲಕ್ಷ್ಮಿಕಾಂತ್, ರಾಘವೇಂದ್ರ ನಾಯಕ್, ಪ್ರೇರಣಾ ಬಾಬು, ಮಾಜಿ ಸೈನಿಕರಾದ ಪ್ರಸಾದ್, ರಂಗಾಭ್ಯಾಸಿ ಹೇಮಂತ್, ಕಮಲ, ನಾಸೆರ್ ಸೈಯ್ದ್ ಹುಸೇನ್, ಇದ್ದರು.
(Visited 1 times, 1 visits today)