
ಕೊರಟಗೆರೆ: ಪಟ್ಟಣದ ಭಕ್ತರ ಅಡಿಗಡೆಯ ಧಾರ್ಮಿಕ ನಿಷ್ಠೆಯ ಫಲವಾಗಿ ಇಲ್ಲಿನ ಬಹುತೇಕ ದೇವಾಲಯಗಳು ಈಗಾಗಲೇ ಜೀರ್ಣೋದ್ಧಾರಗೊಂಡಿವೆ,ಆದರೆ ಪಟ್ಟಣದ ಎತ್ತರದ ಸ್ಥಳದಲ್ಲಿ ನೆಲೆಸಿರುವ ಗಂಗಾಧರೇಶ್ವರ ದೇವಾಲಯ ಮಾತ್ರ ಇನ್ನು ಪುನರ್‌ನಿರ್ಮಾಣದ ನಿರೀಕ್ಷೆಯಲ್ಲಿದೆ,ಈ ದೇವಾಲಯದ ಜೀರ್ಣೋದ್ಧಾರಕ್ಕೆ ತಕ್ಷಣ ಕ್ರಮವಹಿಸುವಂತೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸ ಶಾಖಾಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಮನವಿ ಮಾಡಿದರು.
ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ವಿಜೃಂಭಣೆಯಿAದ ನಡೆಯುತ್ತಿದ್ದ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ದೇವಿಯ ಪ್ರತಿಷ್ಠಾಪನ ಮಹೋತ್ಸವದ ಅಂತಿಮ ದಿನವಾದ ಗುರುವಾರ ನಡೆದ ಕುಂಭಕಳಶ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ದಿವ್ಯ ಸ್ಥಾನ ವಹಿಸಿ ಮಾತನಾಡಿದರು.
“ಪುನಃ ನವೀಕರಣಗೊಂಡ ದೇವಾಲಯಗಳು ನಮ್ಮ ಸಂಸ್ಕೃ ತಿಯ ಸಂಜೀವಿನಿಯAತೆ ಭಕ್ತರಲ್ಲಿ ನಂಬಿಕೆಯನ್ನು ತುಂಬುತ್ತವೆ,” ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು. ಗಂಗಾಧರೇಶ್ವರ ದೇವಾಲಯವು ಎತ್ತಿನ ಬೆಟ್ಟದ ಮೇಲೆ ಇರುವ ಕಾರಣದಿಂದಾಗಿ ಭಕ್ತರ ನೆರೆದಾಣಿಕೆಗೆ ಸವಾಲಾಗಿದ್ದು, ಪುನರ್ ನಿರ್ಮಾಣದೊಂದಿಗೆ ಮೂಲ ಸೌಲಭ್ಯಗಳ ಸಹಿತ ಅಭಿವೃದ್ಧಿ ಅಗತ್ಯವಿದೆ ಎಂದು ತಿಳಿಸಿದರು.
ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಮಾರಮ್ಮ ದೇವಾಲಯ ಸಮಿತಿಯೇ ಮುನ್ನಡೆವಹಿಸಬೇಕು. ಇಂತಹ ಪವಿತ್ರ ಕಾರ್ಯಗಳಲ್ಲಿ ಎಲ್ಲ ಭಕ್ತರೂ ಸಹಭಾಗಿಯಾಗಬೇಕು,” ಎಂದು ಸಲಹೆ ನೀಡಿದರು.
ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿಯು ಮಾತನಾಡಿ, “ಕೊರಟಗೆರೆ ಪಟ್ಟಣದ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಾಲ ಯಗಳು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದ ಪವಿತ್ರ ಸ್ಥಳಗಳು. ಇವು ಸಂಪೂರ್ಣ ಕಲ್ಲಿನಿಂದ ನಿರ್ಮಿತವಾಗಿರುವುದರಿಂದ ಶಾಶ್ವತ ತೆಯ ಸಂಕೇತವಾಗಿವೆ,” ಎಂದರು.
ದೇವಾಲಯ ನಿರ್ಮಾಣ ಒಂದು ಸಂಕೀರ್ಣ ಮತ್ತು ಪುಣ್ಯ ಕಾರ್ಯ ಮನೆಯಂತಹ ಕಟ್ಟಡಗಳನ್ನು ನಿರ್ಮಿಸಬಹುದು ಆದರೆ ದೇವಾಲಯ ಕಟ್ಟುವುದು ದೇವರ ಅನುಗ್ರಹದಿಂದ ಮಾತ್ರ ಸಾಧ್ಯ. ಪಾಪಕರ್ಮಗಳಿಂದ ಮುಕ್ತಿಯಾಗಲು ಪುಣ್ಯಕ್ಷೇತ್ರಗಳ ದರ್ಶನ ಮತ್ತು ಧಾರ್ಮಿಕ ಸೇವೆ ಅತಿಯಾದ ಅಗತ್ಯ, ಎಂದು ಭಕ್ತರಿಗೆ ಮನವಿ ಮಾಡಿದರು.
ದೇವಾಲಯ ಸಮಿತಿಯ ಅಧ್ಯಕ್ಷ ಎಡಿ ಬಲರಾಮಯ್ಯ ಮಾತನಾಡಿ, “ಕೋಟೆ ಮಾರಮ್ಮ ದೇವಿಗೆ ಅಪಾರ ಭಕ್ತರ ನಂಬಿಕೆ ಇದೆ. ಪ್ರತಿಯೊಬ್ಬ ಭಕ್ತರೂ ಉದಾರ ಮನಸ್ಸಿನಿಂದ ಧನಸಹಾಯ ಮಾಡಿರುವುದರಿಂದ ದೇವಾಲಯದ ನಿರ್ಮಾಣ ಅದ್ಭುತವಾಗಿ ಪೂರ್ತಿಯಾಗಿದೆ,” ಎಂದು ವಿವರಿಸಿದರು. “ಇದರಿಂದ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಧಾರ್ಮಿಕ ಚಟುವಟಿಕೆಗಳಿಗೆ ಪ್ರೇರಣೆ ದೊರಕಿದೆ,” ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಕೆ.ವಿ. ಮಂಜು ನಾಥ್, ಖಜಾಂಚಿ ಕೆ.ಎನ್. ಲಕ್ಷ್ಮೀನಾರಾಯಣ, ನಿರ್ದೇಶಕರಾದ ಮುರುಳಿ ಮೋಹನ್, ಆರ್. ರಾಜು, ಸದಸ್ಯರಾದ ಕೆ.ಬಿ.ಲೋಕೇಶ್, ಕೆ.ವಿ. ಪುರುಷೋತ್ತಮ್, ಪುನೀತ್, ನಾರಾಯಣ್, ಕೆ.ಬಿ. ಸುನಿಲ್ ಸೇರಿದಂತೆ ಹಲವಾರು ಧಾರ್ಮಿಕ ಶ್ರದ್ಧಾಳುಗಳು ಹಾಗೂ ಸ್ಥಳೀಯ ಗಣ್ಯರು ಇದ್ದರು.