ಸಿರಾ: ದಿ. ೧೪-೦೪-೨೦೨೫ ರಂದು ರಾತ್ರಿ ೦೭-೧೫ ಗಂಟೆಗೆ ಪಿರ್ಯಾದಿ ಶ್ರೀಮತಿ ಪುಟ್ಟರಂಗಮ್ಮ ಕೊಂ ಲೇಟ್ ಮರಡಿರಂಗಯ್ಯ, ರವರು ಠಾಣೆಗೆ ಹಾಜರಾಗಿ ದಿನಾಂಕ:೧೪-೦೪-೨೦೨೫ ರಂದು ಮಧ್ಯಾಹ್ನ ೦೧-೩೦ ಗಂಟೆ ಸಮಯದಲ್ಲಿ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದ ಜಾತ್ರ ರ ಥೋತ್ಸವದಲ್ಲಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಪಿರ್ಯಾದಿಯ ಕೊರಳಿದ್ದ ಸುಮಾರು ೩೬ ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆ. ಕಳ್ಳನನ್ನು ಪತ್ತೆ ಮಾಡಿ ಕಿತ್ತುಕೊಂಡು ಹೋದ ಸರವನ್ನು ಪತ್ತೆ ಮಾಡಿಕೊಡ ಬೇಕೆಂದು ನೀಡಿದ ದೂರಿನ ಮೇರೆಗೆ ಸಿರಾ ಠಾಣಾ ಮೊ ನಂ ೧೭೭/೨೦೨೫ ಕಲಂ ೩೦೯(೪) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.
ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಗೋಪಾಲ್ ಸಿ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ಶಿರಾ ಉಪ ವಿಭಾಗದ ಡಿ.ಎಸ್.ಪಿ ಯವರಾದ ಬಿ.ಕೆ ಶೇಖರ್ ರವರ ಮಾರ್ಗಸೂಚನೆ ಮೇರೆಗೆ ಶಿರಾ ಪೊಲೀಸ್ ಠಾಣಾ ಪಿ.ಐ ಮಂಜೇಗೌಡ ಎಸ್ ರವರು ಪಿ.ಎಸ್.ಐ ರಂಗನಾಥ ಎಂ. ಆನಂದ್ ಕುಮಾರ್ ಹೆಚ್ ಎಂ ಪಿ.ಎಸ್.ಐ, ಮಹಾಲಿಂಗಯ್ಯ ಎ.ಎಸ್.ಐ. ಹಾಗೂ ಸಿಬ್ಬಂಧಿಯವರುಗಳಾದ ರಂಗನಾಥ, ದುರ್ಗಯ್ಯ, ನಾಗರಾಜು, ಗೋಪಿನಾಥ, ನಾಗರಾಜು, ಸಿದ್ದೇಶ್, ಚಾಲಕ ಮುಬಾರಕ್ ರವರು ಆರೋಪಿತನ ಬಗ್ಗೆ ಮಾಹಿತಿ ಕಲೆ ಹಾಕಿ. ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಮೇಲ್ಕಂಡ ಆರೋಪಿನ್ನು ಪತ್ತೆ ಮಾಡಿರುತ್ತಾರೆ.
ಆರೋಪಿ ಹೆಸರು ವಿಳಾಸ: ಮಂಜುನಾಥ ಬಿನ್ ಲೆಟ್ ಲಕ್ಷ್ಮಯ್ಯ, ೪೫ ವರ್ಷ, ಮುದನೂರು ಕಾವಲ್, ಅರಕಲಗೂಡು ತಾಲ್ಲೂಕ್, ಹಾಸನ ಜಿಲ್ಲೆ.
ಮೇಲ್ಕಂಡ ಆರೋಪಿತನಿಂದ ಅದೇ ದಿವಸ ಜಾತ್ರ ರಥೋತ್ಸವದ ಸಮಯದಲ್ಲಿ ಪಿರ್ಯಾದುದಾರಾರದ ಶ್ರೀಮತಿ ತಿಮ್ಮಕ್ಕ ಮತ್ತು ಶ್ರೀಮತಿ ಪುಟ್ಟಮ್ಮ ರವರುಗಳಿಂದ ಕಿತ್ತುಕೊಂಡು ಹೋಗಿದ್ದ ಈ ಕೆಳಕಂಡ ಪ್ರಕರಣಗಳಲ್ಲಿ ಚಿನ್ನದ ಸರಗಳನ್ನು ಪತ್ತೆಮಾಡಿರುತ್ತೆ.
ಪ್ರಕರಣಗಳ ವಿವರ
೧) ಶಿರಾ ಠಾಣಾ ಮೊ ನಂ.೧೭೭/೨೦೨೫ ಕಲಂ ೩೦೯(೪) ಬಿ.ಎನ್.ಎಸ್ ಪ್ರಕರಣದಲ್ಲಿ ಸುಮಾರು ೩೨೪೦೦೦/-ರೂ ಬೆಲೆ ಬಾಳುವ ೩೬ ಗ್ರಾಂ ಚಿನ್ನದ ಮಾಂಗಲ್ಯ ಸರ.
೨) ಶಿರಾ ಠಾಣಾ ಮೊ ನಂ.೧೭೮/೨೦೨೫ ಕಲಂ ೩೦೯(೪) ಬಿ.ಎನ್.ಎಸ್ ಪ್ರಕರಣದಲ್ಲಿ ಸುಮಾರು ೪೨೩೦೦೦/-ರೂ ಬೆಲೆ ಬಾಳುವ ೪೭ ಗ್ರಾಂ ಚಿನ್ನದ ಸರ.
೩) ಶಿರಾ ಠಾಣಾ ಮೊ ನಂ.೧೭೯/೨೦೨೫ ಕಲಂ ೩೦೩(೨) ಬಿ.ಎನ್.ಎಸ್ ಪ್ರಕರಣದಲ್ಲಿ ಸುಮಾರು ೨೨೫೦೦೦/-ರೂ ಬೆಲೆ ಬಾಳುವ ೨೫ ಗ್ರಾಂ ಚಿನ್ನದ ಸರ.
ಮೇಲ್ಕಂಡ ಪ್ರಕರಣಗಳಲ್ಲಿ ಒಟ್ಟು ೯೭೨೦೦೦/- ರೂ ಬೆಲೆ ಬೆಲೆ ಬಾಳುವ ಸುಮಾರು ೧೦೮ ಗ್ರಾಂ ಚಿನ್ನದ ಸರಗಳನ್ನು ಪತ್ತೆ ಮಾಡಿದ ತನಿಖಾ ತಂಡದ ಕಾರ್ಯವನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಶೋಕ್ ಕೆ.ವಿ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.