ಪಾವಗಡ: ರಾಷ್ಟ್ರೀಯ ಗೋರ್ ಸಿಕವಾಡಿ & ಗೋರ್ ಸೇನಾ ಸಂಘಟನೆ ಹಾಗೂ ಭೀಮಾಸತಿ ಗ್ರಾಮೀಣಾಭಿವೃದ್ಧಿ ಮತ್ತು ಯುವಕರ ಸಬಲೀಕರಣ ಸಂಸ್ಥೆ(ರಿ.) ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎಲ್ಲಾ ಬಂಜಾರ ತಾಂಡಾಗಳಲ್ಲಿ ಪರಿಶಿಷ್ಟ ಜಾತಿಗಳ ಉಪವರ್ಗೀಕರಣ (ಒಳಮೀಸಲಾತಿ) ಸಮೀಕ್ಷೆಯ ಕುರಿತು ಜನಜಾಗೃತಿ ಹಾಗೂ ಸಮಾಲೋಚನ ಅಭಿಯಾನ ನಡೆಯಿತು.
ಪ್ರತಿ ತಾಂಡದಲ್ಲಿ ಜಾತಿ ಸಮೀಕ್ಷೆಯ ಉದ್ದೇಶ, ಅಗತ್ಯ ಮಾಹಿತಿ, ತಾಂಡಾದ ಪ್ರತಿ ಮನೆ ಯೂ, ಕುಟುಂಬದ ಸದಸ್ಯನೂ ಅವರು ಎಲ್ಲೇ ಇದ್ದರೂ, ಈ ಒಂದು ಸಮೀಕ್ಷೆ ಯಿಂದ ಹೊರಗುಳಿಯಬಾರದು ಹಾಗೂ ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಲಂಬಾಣಿ ಎಂದು ಬರೆಸಲು ಮಾಹಿತಿ ನೀಡಲಾಯಿತು. ಪ್ರತಿ ತಾಂಡಾದ ಹಿರಿಯರು, ಯುವಕರು ಮತ್ತು ಮಹಿಳೆಯರು ತುಂಬಾ ಒಳ್ಳೆಯ ಸಂದೇಶ, ಕೆಲಸ ಮಾಡುತ್ತಿದ್ದೀರಿ ತಮಗೆ ಧನ್ಯವಾದಗಳು ತಿಳಿಸಿದರು. ಅವರಿಗೆಲ್ಲರಿಗೂ ಅಭಾರಿ ಯಾಗಿರುತ್ತೇವೆ ಎಂದರು.
ತಾAಡಾಗಳ ನಾಯಕ್, ಡಾವೋ, ಕಾರಬಾರಿ ಮತ್ತು ಪ್ರತಿನಿಧಿಗಳು, ವಿದ್ಯಾವಂತ ಯುವಕ, ಯುವತಿಯರು ಈ ಸಮೀಕ್ಷೆಯನ್ನು ತಮ್ಮ ಸ್ವಂತ ಕೆಲಸವೆಂದು ತಿಳಿದು ತಮ್ಮ ಊರಿನ, ತಾಂಡಾದ ಸಮೀಕ್ಷೆಯನ್ನು ಬರುವ ಗಣತಿದಾರರಿಂದ ಪೂರ್ಣಗೊಳಿಸಿಕೊಳ್ಳಲು ವಿಶೇಷವಾಗಿ ಮನವರಿಕೆ, ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗೋರ್ ಸಿಕವಾಡಿ ಜಿಲ್ಲಾ ಸಂಯೋಜಕರಾದ ವೆಂಕಟೇಶ್ ಚವ್ಹಾಣ್ ಹಾಗೂ ಬಿ.ಜಿ.ವೈ.ಎಸ್ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ರಾಥೋಡ್ ಮತ್ತಿತರರು ಇದ್ದರು.

(Visited 1 times, 1 visits today)