ಪಾವಗಡ: ತಾಲ್ಲೂಕಿನ ಮುಗದಾಳಬೆಟ್ಟದ ಗೊಲ್ಲರಹಟ್ಟಿಗೆ ಶನಿವಾರ ಮಧ್ಯಾಹ್ನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ, ಹಟ್ಟಿಯ ನಿವಾಸಿಗಳ ಸಮಸ್ಯೆಗಳನ್ನು ಪರಿಶೀಲಿಸಿದರು. ಈ ವೇಳೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸ್ಥಳದಲ್ಲೇ ಹಾಜರಿದ್ದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಹೆಣ್ಮಕ್ಕಳು ಸೀರೆಯನ್ನು ಪರದೆಯಾಗಿ ಕಟ್ಟಿಕೊಂಡು ಸ್ನಾನ ಮಾಡುತ್ತಿರುವ ಸ್ಥಿತಿಯು ನಾಗರಿಕ ಸಮಾಜಕ್ಕೆ ತಲೆತಗ್ಗಿಸುವ ಸಂಗತಿಯೆAದು ಅಭಿಪ್ರಾಯಪಟ್ಟ ಅವರು, ವಿಷಯ ನ್ಯಾಯಾಲ ಯದಲ್ಲಿದ್ದರೂ, ಜೂನ್ ೧೬ರ ಬಳಿಕ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು. ಈವರೆಗೆ ತಾತ್ಕಾಲಿಕ ಪರಿಹಾರವಾಗಿ ಮೊಬೈಲ್ ಶೌಚಾಲಯಗಳನ್ನು ಹಟ್ಟಿಯಲ್ಲಿ ಸ್ಥಾಪಿಸಲು ಇ.ಒ. ಜಾನಕಿರಾಂ ಅವರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ, ನಿವೇಶನ ಹಕ್ಕುಪತ್ರಗಳನ್ನು ನೀಡುವ ಬಗ್ಗೆ ತಹಶೀಲ್ದಾರ್ ವರದರಾಜುಗೆ ಸೂಚಿಸಿದ ಡಾ. ನಾಗಲಕ್ಷ್ಮಿ, ಹಟ್ಟಿಯಲ್ಲಿನ ಕರಡಿಗಳ ಹಾವಳಿಯನ್ನು ಗಮನಿಸಿ, ಮಧ್ಯಭಾಗದಲ್ಲಿ ಡೂಮ್ ಲೈಟ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ವಿಶೇಷ ಅತಿಥಿಯಾಗಿ ಬಂದ ಅಧ್ಯಕ್ಷೆ ಯನ್ನು ಹಟ್ಟಿಯ ಮಹಿಳೆಯರು ಅರಿಶಿನ ಕುಂಕುಮ ಹಾಗೂ ಮಡಲಕ್ಕಿ ನೀಡಿ ಸಾಂಪ್ರದಾಯಿಕವಾಗಿ ಆತ್ಮೀಯ ಸ್ವಾಗತಿಸಿದರು.
ಈ ಭೇಟಿ ವೇಳೆ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ದಿನೇಶ್, ಡಿಎಸ್ಪಿ ಮಂಜುನಾಥ್, ಸಿಪಿಐ ಸುರೇಶ್, ಸಿಡಿಪಿಒ ಸುನಿತಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಾಬು, ಬಿಇಓ ಇಂದ್ರಾಣಮ್ಮ, ಪಿಡಿಒ ಮಂಜುನಾಥ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)