ತುಮಕೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಗೆ ಸಂಬAಧಿಸಿದAತೆ ಎಂಪಾರಿಕಲ್ ಡಾಟಾ ಸಂಗ್ರಹಕ್ಕೆ ಸಮೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಛಲವಾದಿ ಸಮುದಾಯದ ಜನರು ಸಮೀಕ್ಷೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬ ಮಾಹಿತಿ ನೀಡುವ ಸಲುವಾಗಿ ಜಿಲ್ಲಾ ದಲಿತ ಛಲವಾದಿ ಸಮುದಾಯ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಹಿರಿಯ ಛಲವಾದಿ ಮುಖಂಡರುಗಳು ಸಭೆಗೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ಭಾನುಪ್ರಕಾಶ್,ರಾಜ್ಯದಲ್ಲಿ ಎಕೆ, ಎಡಿ, ಎಎ ಉಪಜಾತಿಗಳ ಹೆಸರಿನಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಿಕೊಳ್ಳಲು ಇದು ಸುವರ್ಣ ಅವಕಾಶ. ಹಾಗಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು, ಉಪಜಾತಿಯ ಕಲಂನಲ್ಲಿ ಅವರ ಉಪಜಾತಿಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು ಎಚ್ಚರಿಕೆ ನೀಡಿದರು.
ಜಿಲ್ಲಾ ಛಲವಾದಿ ಮಹಾಸಭಾದ ತಾಲೂಕು ಮುಖಂಡ ಗಿರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾAಜನೇಯ, ಸಭೆಯಲ್ಲಿ ಛಲವಾದಿ ಮುಖಂಡರಾದ ಡಾ.ಪಿ.ಚಂದ್ರಪ್ಪ,ಶ್ರೀನಿವಾಸ್,ಹೊನ್ನುಡಿಕೆ ಗ್ರಾ.ಪಂ.ಸದಸ್ಯ ಗಿರೀಶ್, ಗಳಿಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಿ.ಮಂಗಳಮ್ಮ, ಮಲ್ಲಸಂದ್ರ ಗ್ರಾ.ಪಂ.ಸದಸ್ಯೆ ರತ್ನಮ್ಮ,ಮುಖಂಡಾದ ಅಪ್ಪಾಜಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಗಂಗಾAಜನೇಯ, ಗ್ರಾ.ಪಂ. ಸದಸ್ಯರುಗಳಾದ ಕಣಕುಪ್ಪೆ ಕೃಷ್ಣಪ್ಪ, ಅನಿತ್, ಗಳಿಗೇನಹಳ್ಳಿ ಗಿರೀಶ್, ಕುಚಂಗಿ ಚಂದ್ರಶೇಖರ್, ಗಿರೀಶ್, ಹೆಗ್ಗೆರೆ ಕೃಷ್ಣಪ್ಪ, ಛಲವಾದಿ ಶೇಖರ್, ಶಿವಲಿಂಗಯ್ಯ,ಚAದ್ರಣ್ಣ, ನರಸಿಂಹಮೂರ್ತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)