ತುಮಕೂರು: ಮಂಗಳೂರು ಘಟನೆಗೆ ಸಂಬAಧಿಸಿದAತೆ ರಾಜ್ಯ ಸರಕಾರ ನಿಷ್ಕ್ರಿಯ ಆದಾಗ ಎನ್ ಐಎ ಮತ್ತು ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಲಿದೆ. ಅಂತಹ ಆರೋಪಿಗಳನ್ನು ರಕ್ಷಣೆ ಮಾಡುವುದನ್ನು ರಾಜ್ಯ ಸರಕಾರ ಬಿಡಬೇಕು. ಮನುಷ್ಯನ ಜೀವವನ್ನು ತೆಗೆಯುತ್ತೇವೆ ಎಂಬುವರ ಮೇಲೆ ಅನುಕಂಪ ತೋರಿಸಬಾರದು. ಪಹಲ್ಲಾಮ್ ಘಟನೆಗೆ ಸಂಬAಧಿಸಿದAತೆ ತೆಗೆದುಕೊಂಡ ಕಠಿಣ ಕ್ರಮವನ್ನು ಮಂಗಳೂರು ಘಟನೆಗೂ ತೆಗೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಲಾಜಿಲ್ಲದೆ ಗೃಹ ಸಚಿವ ತಮ್ಮ ಅನುಭವವನ್ನು ಇದ್ರಲ್ಲಿ ತೋರಿಸಬೇಕು. ಇಲ್ಲದಿದ್ದರೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಗೊತ್ತಾಗದಿದ್ದಲ್ಲಿ ಕೇಂದ್ರ ಸರಕಾರ ಪತ್ರ ಬರೆಯಲಿ, ೧೦ ನಿಮಿಷದಲ್ಲಿ ಕ್ರಮ ಆಗಲಿದೆ ಎಂದರು.
ಕೆಲ ಅಯೋಗ್ಯರು, ದೇಶಕ್ಕೆ ಮಾರಕವಾಗಿರ ಬಗ್ಗೆ ಮೃಧು ಧೋರಣೆ ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಆರೋಪಿಗಳು ಎಷ್ಟೆ ದೊಡ್ಡವರಾದ್ರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು. ರಾಜ್ಯ ಸರಕಾರ ಮಾತನಾಡುವುದನ್ನು ಕಡಿಮೆ ಮಾಡಿ, ಆರೊಪಿಗಳನ್ನು ಸರಿಯಾದ ಕ್ರಮ ವಹಿಸದಿದ್ದರೆ. ಬೇರೆಯವರ ಮನೆಗೆ ಬೆಂಕಿ ಬಿದ್ದಿದೆ ಎಂದು ಖುಷಿ ಪಡುತ್ತಿದ್ದೀರಿ ಆ ಬೆಂಕಿ ನಿಮ್ಮ ಮನೆಗೂ ಬೀಳಲಿದೆ ಎಂಬುದನ್ನು ಮರೆಯಬಾರದು. ಸರಕಾರ ನಿಂತ ನೀರಲ್ಲ. ಅಂತಹವರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಅಭಿವೃದ್ದಿ ಆಗಬೇಕಾದ್ರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಮುಖ್ಯ ಆಗಲಿದೆ. ರಾಜ್ಯದಲ್ಲಿ ೮ಸಾವಿರ ಕೋಟಿ ರೂ. ಗೂ ಮೇಲ್ಪಟ್ಟ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಚಾಲ್ತಿಯಲ್ಲಿವೆ, ಇದ್ರಲ್ಲಿ ರಾಜ್ಯ ಸರಕಾರ ಒಂದು ರೂ. ಗಳನ್ನು ಹೆದ್ದಾರಿ ಕಾಮಗಾರಿಗೆ ಕೊಡುವುದಿಲ್ಲ, ಬದಲಿಗೆ ಸಹಕಾರ ನೀಡಲಿದೆ.
ಜೇವಗಿಯಿಂದ ಚಾಮರಾಜನಗರದವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರವೇ ಹಣವನ್ನು ಕೊಟ್ಟಿದೆ ಎಂದರು.

(Visited 1 times, 1 visits today)